ಭಾರತೀಯ ಜ್ಞಾನ ಸಾಗರ ಮತ್ತು ಸಂಸ್ಕೃತದ ಕೊಡುಗೆಯನ್ನು ತೆರೆದಿಡುವ ವಿಶಿಷ್ಟ ಪ್ರಯತ್ನ
ಮಂಗಳೂರು: ಮಾನವೀಯತೆಗೆ ಭಾರತೀಯ ಜ್ಞಾನ ಮತ್ತು ಸಂಸ್ಕೃತದ ಕೊಡುಗೆಯನ್ನು ಜಗತ್ತಿನ ಮುಂದೆ ತೆರೆದಿಡುವ ಪ್ರಯತ್ನವಾಗಿ ಶ್ರೀನಿವಾಸ ವಿಶ್ವವಿದ್ಯಾಲಯವು ವಿಶ್ವ ಸಂಸ್ಕೃತ ಸಮ್ಮೇಳನವನ್ನು ಫೆ.24ರಿಂದ 26ರ ವರೆಗೆ ಮೂರು ದಿನಗಳ ಕಾಲ ಸುರತ್ಕಲ್‌ನ ಮುಕ್ಕದಲ್ಲಿರುವ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಆಯೋಜಿಸಿದೆ.
ನವದೆಹಲಿಯ ಸಂಸ್ಕೃತ ವಿಶ್ವವಿದ್ಯಾನಿಲಯ, ಭಾರತ ಸರಕಾರದ ಹಸ್ತಪ್ರತಿಗಳ ರಾಷ್ಟ್ರೀಯ ಮಿಷನ್, ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ದಿ ಆರ್ಟ್ಸ್, ಮೊರಾರ್ಜಿ ದೇಸಾಯಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಯೋಗ ಹಾಗೂ ಆಯುಷ್ ಸಚಿವಾಲಯದ ಸಹಯೋಗದಲ್ಲಿ ಈ ಸಮ್ಮೇಳನ ನಡೆಯುತ್ತಿದೆ.
ಶ್ರೀನಿವಾಸ ವಿಶ್ವವಿದ್ಯಾಲಯದ ಸಹಕುಲಾಧಿಪತಿ ಡಾ. ಎ. ಶ್ರೀನಿವಾಸ ರಾವ್ ಮತ್ತು ಇತರ ಪ್ರಮುಖ ಪದಾಧಿಕಾರಿಗಳು ಇಂದು ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರವಾದ ಮಾಹಿತಿ ನೀಡಿದರು.
ಮೊದಲ ದಿನ (ಫೆ.24) ವಿಶ್ವ ಸಂಸ್ಕೃತ ಸಮ್ಮೇಳನಂ ಅನ್ನು ಪುಣೆಯ ಬ್ಯಾಂಕ್ ಆಫ್ ಮಹಾರಾಷ್ಟ್ರದ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎ.ಎಸ್ ರಾಜೀವ್ ಉದ್ಘಾಟಿಸಲಿದ್ದಾರೆ. ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಸಿ.ಎ. ಎ ರಾಘವೇಂದ್ರ ರಾವ್, ಸಹ ಕುಲಾಧಿಪತಿ ಡಾ. ಎ. ಶ್ರೀನಿವಾಸ ರಾವ್ ಅವರು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಸದ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ, ನೇಪಾಳ ವಿಶ್ವವಿದ್ಯಾನಿಲಯದ ರಂಗಜಾಂಗ್ ಯೆಶೆ ಸಂಸ್ಥೆಯ ಸಂಸ್ಕೃತ ಪ್ರಾಧ್ಯಾಪಕ ಪ್ರೊ. ಕಾಶಿನಾಥ್ ನ್ಯುಪಾನೆ, ಪೋಲೆಂಡ್‌ನ ವಾರ್ಸಾ ವಿಶ್ವವಿದ್ಯಾಲಯದ ಸಂಸ್ಕೃತ ವಿದ್ವಾಂಸ ಡಾ. ಫಿಲಿಪ್ ರುಸಿನ್ಸ್‌ಕಿ ಶಿವಾನಂದ ಶಾಸ್ತ್ರಿ, ಎಂಡಿಎನ್‌ಐವೈ ನವದೆಹಲಿಯ ನಿರ್ದೇಶಕ ಡಾ. ಈಶ್ವರ್ ವಿಬಸವರಡ್ಡಿ, ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾನಿಲಯ ತಿರುಪತಿಯ ಉಪಕುಲಪತಿ ಪ್ರೊ. ಕೃಷ್ಣಮೂರ್ತಿ, ನಾಗಪುರದ ಕವಿಕುಲಗುರು ಕಾಳಿದಾಸ, ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಮಧುಸೂದನ್ ಪೆನ್ನಾ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲಪತಿ, ಬಿಎಲ್‌ಆರ್: ಡಾ ಗಿರೀಶ್ಚಂದ್ರ, ಮಹರ್ಷಿ ಪಾಣಿನಿ ವೇದ ವಿಶ್ವವಿದ್ಯಾಲಯ ಉಜ್ಜಯಿನಿಯ ಉಪಕುಲಪತಿ ಡಾ. ವಿಜಯ ಕುಮಾರ್, ಸಂಸ್ಕೃತ ಭಾರತಿ, ದೆಹಲಿಯ ಅಖಿಲ ಭಾರತ ಸಂಘಟನಾ ಕಾರ್ಯದರ್ಶಿ ದಿನೇಶ್ ಕಾಮತ್, ಶ್ರೀನಿವಾಸ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಟ್ರಸ್ಟಿ ಸದಸ್ಯರಾದ ಶ್ರೀಮತಿ ಎ. ವಿಜಯಲಕ್ಷ್ಮಿ ಆರ್ ರಾವ್, ಪ್ರೊ. ಇಆರ್. ಶ್ರೀಮತಿ, ಎ.. ಮಿತ್ರ ಎಸ್ ರಾವ್, ಶ್ರೀಮತಿ ಪದ್ಮನಿ ಕುಮಾರ್, ಬೆಂಗಳೂರಿನ ಅಂಕೋಲಜಿ ಪ್ರಾಧ್ಯಾಪಕ ಡಾ. ಉದಯ ಕುಮಾರ್ ಮಯ್ಯ, ಶ್ರೀನಿವಾಸ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಪಿ.ಎಸ್. ಐತಾಳ್ ಉಪಸ್ಥಿತರಿರುವರು.
ಎರಡನೆಯ ದಿನ- 25ನೇ ಫೆಬ್ರವರಿ 2023:
2023 ರ ವಿಶ್ವ ಸಂಸ್ಕೃತ ಸಮ್ಮೇಳನದ ಪ್ರಮುಖ ಮತ್ತು ಸಮಗ್ರ ಅಧಿವೇಶನವು ಶ್ರೀನಿವಾಸ ವಿಶ್ವವಿದ್ಯಾನಿಲಯದ ಕುಲಾಧಿಪತಿ ಡಾ. ಸಿಎ ಎ.ರಾಘವೇಂದ್ರ ರಾವ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಶ್ರೀನಿವಾಸ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಡಾ. ಎ.ಶ್ರೀನಿವಾಸ್ ರಾವ್ ಗೌರವ ಅತಿಥಿಗಳಾಗಿ ಭಾಗವಹಿಸುವರು. ನವದೆಹಲಿ IGNC ಹಸ್ತಪ್ರತಿಗಳ ರಾಷ್ಟ್ರೀಯ ಮಿಷನ್ ನಿರ್ದೇಶಕ ಡಾ. ಅನಿರ್ಜನ್ ದಾಳ್, ಪರಮಪೂಜ್ಯ ಭಕ್ತಿ ರಾಘವ ಸ್ವಾಮಿ ಮಹಾರಾಜ, ಶಾಸಕರಾದ ಡಿ. ವೇದವ್ಯಾಸ ಕಾಮತ್ ಮತ್ತು ಯು.ಟಿ ಖಾದರ್ ಉಪಸ್ಥಿತರಿರುವರು.
ಮೂರನೆಯ ದಿನ- 26 ಫೆಬ್ರವರಿ 2023:
ವಿಶ್ವ ಸಂಸ್ಕೃತ ಸಮ್ಮೇಳನ 2023 ರ ಸಮಾರೋಪ ಸಮಾರಂಭವು ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಸಿಎ ಎ. ರಾಘವೇಂದ್ರರಾವ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸಹಕುಲಾಧಿಪತಿ ಡಾ. ಎ. ಶ್ರೀನಿವಾಸ್ ರಾವ್ ಅವರು ಗೌರವ ಅತಿಥಿಗಳಾಗಿರುವರು. ಮುಖ್ಯ ಅತಿಥಿಗಳಾಗಿ ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ. ಡಾ. ಶ್ರೀನಿವಾಸ ವರಖೇಡಿ, ತೆಲಂಗಾಣ ಹೈಕೋರ್ಟಿನ ಹಿರಿಯ ವಕೀಲ ಡಾ. ವಿಠಲ್ ಜೋಶಿ ಉಪಸ್ಥಿತರಿರುವರು.
ಶ್ರೀನಿವಾಸ ಕಲ್ಯಾಣೋತ್ಸವ:
ಶ್ರೀನಿವಾಸ ಕಲ್ಯಾಣೋತ್ಸವವು 26 ಫೆಬ್ರವರಿ 2023 ರಂದು ಶ್ರೀನಿವಾಸ ವಿಶ್ವವಿದ್ಯಾಲಯ ಮುಕ್ಕ ಕ್ಯಾಂಪಸ್‌ನಲ್ಲಿ ಸಂಜೆ 5.30 ಕ್ಕೆ ನಡೆಯಲಿದೆ. ಈ ದಿನ ಶ್ರೀ ಚಿತ್ರಾಪುರ ಮಠದ ಸ್ವಾಮೀಜಿ - ಶ್ರೀ ವಿದ್ಯೇಂದ್ರ ತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.
ಸಮ್ಮೇಳನದ ವಿಶೇಷತೆಗಳು:
ಆಹಾರ, ಪ್ರಾಚೀನ ವಸ್ತುಗಳು, ಬಟ್ಟೆ, ರೈತರ ಉತ್ಪನ್ನಗಳು, ಸ್ವದೇಶಿ ಸಣ್ಣ ಉದ್ಯಮಗಳು ಮತ್ತು ಪ್ರಾದೇಶಿಕತೆ ಬಗ್ಗೆ ಸಾರಲು ನಮ್ಮ ಭಾರತೀಯ ಸಂಸ್ಕೃತಿಯ ಪ್ರಾತಿನಿಧ್ಯವನ್ನು ಒದಗಿಸಲು ಮೂರು ದಿನಗಳ ಕಾಲ ಶ್ರೀನಿವಾಸ ವಿಶ್ವವಿದ್ಯಾಲಯದ ಮುಕ್ಕ ಕ್ಯಾಂಪಸ್‌ನಲ್ಲಿ ಸ್ಟಾಲ್ ಅನ್ನು ಸ್ಥಾಪಿಸಲಾಗಿದೆ. ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಜಾನಪದ ಆಟಗಳನ್ನು ಆಯೋಜಿಸಲಾಗಿದೆ.
ಶ್ರೀನಿವಾಸ ವಿಶ್ವವಿದ್ಯಾಲಯದ ಗೌರವಾನ್ವಿತ ಸಹ ಕುಲಾಧಿಪತಿ ಡಾ. ಎ. ಶ್ರೀನಿವಾಸ್ ರಾವ್, ಶ್ರೀನಿವಾಸ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಪಿ.ಎಸ್. ಐತಾಳ್, ಶ್ರೀನಿವಾಸ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ.ಅನಿಲ್ ಕುಮಾರ್, ಶ್ರೀನಿವಾಸ ವಿಶ್ವವಿದ್ಯಾಲಯದ ಮೌಲ್ಯಮಾಪನ ರಿಜಿಸ್ಟ್ರಾರ್ ಡಾ.ಶ್ರೀನಿವಾಸ್ ಮಯ್ಯ ಡಿ., ಶ್ರೀನಿವಾಸ ವಿಶ್ವವಿದ್ಯಾಲಯದ ಅಭಿವೃದ್ಧಿ ರಿಜಿಸ್ಟ್ರಾರ್ ಡಾ.ಅಜಯ್ ಕುಮಾರ್, ವಿಶ್ವ ಸಂಸ್ಕೃತ ಸಮ್ಮೇಳನದ ಸಂಚಾಲಕಿ ಡಾ. ಶಾಂತಲಾ ವಿಶ್ವಾಸ, ವಿಶ್ವ ಸಂಸ್ಕೃತ ಸಮ್ಮೇಳನದ ಸಹ ಸಂಚಾಲಕರಾದ ಡಾ.ಬಿ. ಗೋಪಾಲಾಚಾರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


