ಶ್ರೀನಿವಾಸ ವಿಶ್ವವಿದ್ಯಾಲಯದಲ್ಲಿ ವೈಭವದ ಶ್ರೀನಿವಾಸ ಕಲ್ಯಾಣೋತ್ಸವ

Upayuktha
0

ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯದಲ್ಲಿ ಫೆ. 26ರಂದು ಸಾಯಂಕಾಲ ಗೋಧೂಳಿ ಲಗ್ನದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ವೈಭವದಿಂದ ಜರುಗಿತು. ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥ ಸ್ವಾಮೀಜಿ ಆಶೀರ್ವದಿಸಿದರು.


ಶ್ರೀನಿವಾಸ ವಿಶ್ವ ವಿದ್ಯಾಲಯದ ಕುಲಾಧಿಪತಿ ಡಾ. ಸಿಎ. ಎ. ರಾಘವೇಂದ್ರರಾವ್‌ ಅವರ ಮುಂದಳತ್ವದಲ್ಲಿ ಜರುಗಿದ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಆನೆಗುಡ್ಡೆ ವಿನಾಯಕ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀಧರ ಆಚಾರ್ಯ ಪ್ರಾರ್ಥನೆ ನಡೆಸಿಕೊಟ್ಟರು.


ಬೆಂಗಳೂರಿನ ಶ್ರೀನಿವಾಸ ಉತ್ಸವ ಬಳಗದ ಎಲ್ಲ ಸದಸ್ಯರು ಕಾಯಕ್ರಮ ನಡೆಸಿಕೊಟ್ಟರು. ಹಿನ್ನೆಲೆ ಗಾಯನದಲ್ಲಿ ಡಾ.ರಾಯಚೂರು ಶೇಷಗಿರಿ ದಾಸ್‌, ವಿದೂಷಿ ಶ್ರೀಮತಿ ಶುಭ ಸಂತೋಷ್‌, ಪಕ್ಕವಾದ್ಯದಲ್ಲಿ ಮಧುಸೂದನ್‌ ಭಟ್‌, ಪ್ರೊ. ಶ್ರೀಧರ್‌ ಆಚಾರ್ಯ, ವಿದ್ವಾನ್‌ ದೀಪಕ್‌ ನಾಯಕ್‌, ವಿದ್ವಾನ್‌ ದೇವದಾಸ್‌ ಸಾಗರ್‌ಮಠ ಸಹಕರಿಸಿದರು. ಶ್ರೀನಿವಾಸ ವಿಶ್ವ ವಿದ್ಯಾಲಯದ ಸಹ ಕುಲಾಧಿಪತಿ ಡಾ. ಎ. ಶ್ರೀನಿವಾಸ ರಾವ್‌, ಶ್ರೀನಿವಾಸ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಟ್ರಸ್ಟಿಗಳಾದ ಶ್ರೀಮತಿ ಎ. ವಿಜಯಲಕ್ಷ್ಮಿ ಆರ್.  ರಾವ್, ಪ್ರೊ. ಇಆರ್ ಎ. ಮಿತ್ರಾ ಎಸ್. ರಾವ್, ಶ್ರೀಮತಿ ಪದ್ಮಿನಿ ಕುಮಾರ್, ಬೆಂಗಳೂರಿನ ತಜ್ಞರಾದ ಡಾ‌. ಉದಯ ಕುಮಾರ್ ಮಯ್ಯ, ಕುಮಾರಿ ಮೇಘನಾ ಎಸ್‌. ರಾವ್‌, ರಿಜಿಸ್ಟರ್  ಆದಿತ್ಯಕುಮಾರ್ ಮಯ್ಯ, ಡಾ ದೀಪಿಕಾ ಆದಿತ್ಯ ಕುಮಾರ್ ಮಯ್ಯ, ಮಾಸ್ಟರ್‌ ಈಶಾನ್‌ ಎಸ್‌. ರಾವ್‌ ಮತ್ತಿತರರು ಉಪಸ್ಥಿತರಿದ್ದರು.


Post a Comment

0 Comments
Post a Comment (0)
To Top