ಮಂಗಳೂರು: ಏಕವ್ಯಕ್ತಿ ನೃತ್ಯ ಪ್ರದರ್ಶನದಿಂದ ಕಲಾವಿದನ ನೈಜತೆ ಪ್ರಕಟ ಮೋಹನ್ ಕುಮಾರ್ ಉಳ್ಳಾಲ್ ಭರತನಾಟ್ಯ ಪ್ರದರ್ಶನದಲ್ಲಿ ಏಕವ್ಯಕ್ತಿ ನೃತ್ಯ ಪ್ರದರ್ಶನದಿಂದ ಕಲಾವಿದನ ಪ್ರೌಢಿಮೆ ಕಾಣಲು ಸಾಧ್ಯ ಎಂದು ನಾಟ್ಯಾಚಾರ್ಯ ಉಳ್ಳಾಲ ಮೋಹನ ಕುಮಾರ್ ನುಡಿದರು.
ಅವರು ಚಕ್ರಪಾಣಿ ನೃತ್ಯ ಕಲಾ ಕೇಂದ್ರದ ವತಿಯಿಂದ ಶ್ರೀ ಕ್ಷೇತ್ರ ಚಕ್ರಪಾಣಿ ಗೋಪಿನಾಥ ದೇವಸ್ಥಾನ ಅತ್ತಾವರ ಇಲ್ಲಿ ಆಯೋಜಿಸಿದ್ದ ಪುರುಷ ನೃತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನೃತ್ಯ ಕಲಾವಿದನಲ್ಲಿ ಲಯಬದ್ಧ ಚಲನೆ, ನಾಟಕೀಯತೆ, ನೃತ್ತ ನೃತ್ಯ, ಇವುಗಳ ಸಂಯೋಜನೆ ಸಹಿತ ಮೂರು ಅಂಶಗಳು ಇದ್ದಾಗ ಮಾತ್ರ ಪ್ರೌಢತೆ ಪ್ರಕಟವಾಗುವುದು ಎಂದರು.
35 ವರ್ಷಗಳಿಂದ ಕಲಾ ಸೇವೆಯನ್ನು ಮಾಡುತ್ತಿರುವ ಚಕ್ರಪಾಣಿ ಸಂಸ್ಥೆಯ ನಿರ್ದೇಶಕ ಸುರೇಶ ಅತ್ತಾವರ್ ಅಭಿನಂದನಾರ್ಹರು ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರತೀಂದ್ರನಾಥ್ ಎಚ್ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಕಲಾ ಸೇವೆಯ ಜೊತೆಗೆ ಶ್ರಿ ಕ್ಷೇತ್ರದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಸಹಕಾರವನ್ನು ಮಾಡುತ್ತಿರುವ ಚಕ್ರಪಾಣಿ ಕಲಾ ಕೇಂದ್ರವನ್ನು ಅಭಿನಂದಿಸಿದರು.
ಕ್ಷೇತ್ರದ ಮಾಜಿ ಆಡಳಿತ ಅಧ್ಯಕ್ಷರಾದ ಧರ್ಮಣ್ಣ ನಾಯಕ್ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ನಿರ್ದೇಶಕ ಸುರೇಶ್ ಅತ್ತಾವರ ಸ್ವಾಗತಿಸಿ ಲಕ್ಷ್ಮೀಶ ನಿರೂಪಿಸಿ ವಂದಿಸಿದರು. ಮಲ್ಲಿಕಾ ಸುರೇಶ್ ವಿದುಷಿ ರಾಜಶ್ರೀ ಉಳ್ಳಾಲ್ ವಿದುಷಿ ಮಯೂರಿ ಅತ್ತಾವರ ಮೊದಲಾದವರು ಉಪಸ್ಥಿತರಿದ್ದರು. ವಿದ್ವಾನ್ ಪ್ರಮೋದ್ ಉಳ್ಳಾಲ್, ವಿದ್ವಾನ್ ಭವಾನಿ ಶಂಕರ್ ಉಡುಪಿ, ವಿದ್ವಾನ್ ಯುಪಿ ಶರಣ್, ಸಾತ್ವಿಕ್ ಎನ್ ಕುಂಬಳೆ, ಶೋಧನ್ ಕುಮಾರ್ ಮೊದಲಾದವರು ಮನೋಜ್ಞವಾಗಿ ನೃತ್ಯ ಪ್ರದರ್ಶನ ಮೂಡಿಬಂತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ


