ಉಜಿರೆ : ಇಲ್ಲಿನ ಶ್ರೀ ಕೃಷ್ಣಾನುಭವ ಸಭಾಭವನದಲ್ಲಿ ನಡೆಯುತ್ತಿರುವ ದ.ಕ. ಜಿಲ್ಲಾ 25ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೆಯ ದಿನವಾದ ಶನಿವಾರ ದಕ್ಷಿಣ ಕನ್ನಡ ಜಿಲ್ಲೆಯ ಸಾಹಿತ್ಯ ಕ್ಷೇತ್ರ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿ ಅಗಲಿದ ಗಣ್ಯರಿಗೆ ನುಡಿನಮನ ಸಲ್ಲಿಸಲಾಯಿತು.
ಉಜಿರೆ ಎಸ್.ಡಿ.ಎಂ. ಕಾಲೇಜಿನ ವಿಶ್ರಾಂತ ಕುಲಸಚಿವ ಡಾ. ಬಿ.ಪಿ. ಸಂಪತ್ ಕುಮಾರ್ ಮಾತನಾಡಿ, "ಹಿರಿಯರನ್ನು ನೆನಪಿಸಿಕೊಂಡು ಕೃತಜ್ಞತೆ ಸಲ್ಲಿಸುವುದು ಬಹಳ ಮುಖ್ಯ" ಎಂದರು.
ಅವರು, ಅಗಲಿದ ಸಾಹಿತ್ಯ ಕ್ಷೇತ್ರದ ಸಾಧಕರಾದ ಹಿರಿಯ ಲೇಖಕ ಟಿ.ಜಿ. ಮುಡೂರು; ಲೇಖಕರು, ವಿದ್ವಾಂಸರು ಹಾಗೂ ಬರಹಗಾರರಾದ ಕೋಡಿ ಕುಶಾಲಪ್ಪ ಗೌಡ; ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾಗಿದ್ದ ಡಾ. ಬಿ. ಯಶೋವರ್ಮ; ನಾಡೋಜ ಪ್ರಶಸ್ತಿಗೆ ಭಾಜನರಾಗಿದ್ದ ಸಾಹಿತಿ ಸಾರಾ ಅಬೂಬಕ್ಕರ್; ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಟಿ.ಎನ್. ತುಳಪುಳೆ; ಸಂಗೀತ, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಾಯತ್ರಿ ಉಡುಪ; ಕಾದಂಬರಿಕಾರ ಜೆ.ಎ. ಖಾಸಿಂ ಇವರಿಗೆ ನುಡಿ ನಮನ ಸಲ್ಲಿಸಿದರು.
ಹಿರಿಯ ಯಕ್ಷಗಾನ ಕಲಾವಿದ ಜಯಾನಂದ ಸಂಪಾಜೆಯವರು ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆ ಮಾಡಿ ಅಗಲಿದಂತಹ ಕುಂಬ್ಳೆ ಸುಂದರ್ ರಾವ್; ಮಲ್ಪೆ ವಾಸುದೇವ್ ಸಾಮಗ; ಪೊಟ್ಟಿಕೆರೆ ಪುರುಷೋತ್ತಮ ಪೂಂಜ; ಪದ್ಯಾಣ ಗಣಪತಿ ಭಟ್; ಸಂಪಾಜೆ ಶೀನಪ್ಪ ರೈ; ತೋಟಿತ್ತಾನ ವಿಶ್ವನಾಥ ಗೌಡ; ಬೆಳ್ಳಾರೆ ವಿಶ್ವನಾಥ ರೈ; ಗುರುವಪ್ಪ; ವೇಣೂರು ವಾಮನ್ ಕುಮಾರ್; ಸುರೇಶ್ ಕಿರಿಯಾಡಿ; ಕೀರ್ತನ್ ಶೆಟ್ಟಿ ಮತ್ತು ಚಿನ್ನಪ್ಪ ಶೆಟ್ಟಿ ಇವರಿಗೆ ನುಡಿ ನಮನ ಸಲ್ಲಿಸಿದರು. "ಕಲಾವಿದರು ಎಷ್ಟೇ ನೋವಿದ್ದರೂ ರಂಗಕ್ಕೆ ಹತ್ತುವಾಗ ಎಲ್ಲಾ ಕಷ್ಟಗಳನ್ನು ಬಿಟ್ಟು ಬಿಡುತ್ತಾರೆ" ಎಂದು ಅವರು ಹೇಳಿದರು.
ಉಜಿರೆ ಎಸ್.ಡಿ.ಎಂ. ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ದಿವಾಕರ್ ಕೊಕ್ಕಡ ಕಾರ್ಯಕ್ರಮ ನಿರೂಪಿಸಿದರು.
ವರದಿ: ಹೇಮಾವತಿ, ಅಮಿತಾ,
ಪ್ರಥಮ ವರ್ಷ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್. ಡಿ.ಎಂ. ಸ್ನಾತಕೋತ್ತರ ಕೇಂದ್ರ, ಉಜಿರೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ