‘ಹಿಂದೂ ಸಮಾಜದ ಮೌಲ್ಯ ಉಳಿಸುವಲ್ಲಿ ಜೋಗಿ ಸಮಾಜದ ಕೊಡುಗೆ ಮಹತ್ವದ್ದು’

Upayuktha
0

ಕಾಲಭೈರವ ದೇವಸ್ಥಾನದ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವ

ಮಂಗಳೂರು : ಹಿಂದೂ ಸಮಾಜದ ಮೌಲ್ಯಗಳನ್ನು ಉಳಿಸಿ ಬೆಳೆಸುವಲ್ಲಿ ಜೋಗಿ ಸಮಾಜ ಅತ್ಯಂತ ಮಹತ್ವದ ಕೊಡುಗೆ ನೀಡುತ್ತಾ ಬಂದಿದೆ ಎಂದು ವಿಶ್ವ ಹಿಂದು ಪರಿಷತ್ತಿನ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ಹೇಳಿದರು.


ನಗರದ ಕದ್ರಿಯಲ್ಲಿರುವ ಸುವರ್ಣ ಕದಳೀ ಶ್ರೀ ಯೋಗೇಶ್ವರ (ಜೋಗಿ) ಮಠದ ಶ್ರೀ ಕಾಲಭೈರವ ದೇವಸ್ಥಾನದ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವದ ಅಂಗವಾಗಿ ಭಾನುವಾರ ಸಂಜೆ ಗೋರಕ್ಷನಾಥ ವೇದಿಕೆಯಲ್ಲಿ ನಡೆದ ಧಾರ್ಮಿಕ ಸಭೆಯನ್ನು ಅವರು ಮಾತನಾಡಿದರು.


ಅತ್ಯಂತ ಪ್ರಾಮಾಣಿಕ ಮತ್ತು ನಿಷ್ಠೆಯುಳ್ಳ ಜೋಗಿ ಸಮಾಜದ ಮಂದಿ ಸದ್ಗುಣ ಸಂಪನ್ನರೂ ಹೌದು. ಧರ್ಮದ ಮೇಲಿನ ನಿಷ್ಠೆ, ಗೋವುಗಳ ಮೇಲಿನ ಪ್ರೀತಿ ಹೀಗೆ ಪ್ರತಿಯೊಂದರಲ್ಲೂ ಮುಂದಿರುವ ಈ ಸಮಾಜ ಸಂಸ್ಕೃತಿ, ಪರಂಪರೆಯ ರಕ್ಷಣೆಯಲ್ಲಿ ಮುಂಚೂಣಿಯಲ್ಲಿದೆ. ಸುವರ್ಣ ಕದಳೀ ಶ್ರೀ ಯೋಗೇಶ್ವರ ಮಠದ ಮಠಾಧಿಪತಿಗಳಾದ ಶ್ರೀ ನಿರ್ಮಲಾನಾಥ್ ಜೀ ಅವರ ಮಾರ್ಗದರ್ಶನದಲ್ಲಿ  ಬ್ರಹ್ಮಕಲಶೋತ್ಸವ ಸಂಭ್ರಮದಿಂದ ನಡೆಯುತ್ತಿದೆ. ಈ ಕಾರ್ಯದಲ್ಲಿ ಸಮಾಜದ ಪ್ರತಿಯೊಬ್ಬರೂ ಪಾಲ್ಗೊಳ್ಳುವಂತಾಗಬೇಕು ಎಂದವರು ಹೇಳಿದರು.


ಯೋಗೇಶ್ವರ ಮಠ ಅತ್ಯಂತ ಸುಂದರವಾಗಿ ನಿರ್ಮಾಣವಾಗಿದ್ದು, ಮಾರ್ಬಲ್ ಕೆತ್ತನೆಗಳು ಗಮನಸೆಳೆಯುತ್ತಿವೆ. ಸಮಾಜದ ಪ್ರತಿಯೊಬ್ಬರೂ ಈ ಶ್ರದ್ಧಾಭಕ್ತಿಯ ಕೇಂದ್ರಕ್ಕೆ ಭೇಟಿ ನೀಡಬೇಕು ಎಂದು ಹೇಳಿದರು. ಮುಖ್ಯ ಅತಿಥಿ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಜಯಾನಂದ ಅಂಚನ್, ಕದ್ರಿ ಜೋಗಿ ಮಠದೊಂದಿಗಿನ ತನ್ನ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿ ಈ ಕ್ಷೇತ್ರ ಹಿಂದೂ ಸiಜ ಮತ್ತು ಹಿಂದುತ್ವಕ್ಕೆ ಮಾದರಿ ಕ್ಷೇತ್ರವಾಗಲಿ ಎಂದರು.


ಕ್ರೆಡೈ ಅಧ್ಯಕ್ಷ ಪುಷ್ಪರಾಜ ಜೈನ್, ಮಾಜಿ ಮೇಯರ್, ಪಾಲಿಕೆ ಸದಸ್ಯ ಶಶಿಧರ ಹೆಗ್ಡೆ ಶುಭ ಕೋರಿದರು. ಯೋಗೇಶ್ವರ ಮಠದ ಕಾರ್ಯನಿರ್ವಹಣಾ ಸಮಿತಿ ಅಧ್ಯಕ್ಷ, ಮಾಜಿ ಮೇಯರ್ ಹರಿನಾಥ ಜೋಗಿ ಬೋದೆಲ್ ಅಧ್ಯಕ್ಷತೆ ವಹಿಸಿದ್ದರು.


ಉದ್ಯಮಿಗಳಾದ ಲಕ್ಷ್ಮೀಶ್ ಭಂಡಾರಿ, ಪ್ರಶಾಂತ್ ಶೇಟ್, ಸೂರ್ಯನಾರಾಯಣ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗಿರಿಧರ ಶೆಟ್ಟಿ, ಕದ್ರಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಗೌರವಾಧ್ಯಕ್ಷ ದಿನೇಶ್ ದೇವಾಡಿಗ, ಲೋಕೇಶ್ ಇಂಜಿನಿಯರಿಂಗ್‌ನ ಲೋಕೇಶ್ ಬೋಳಾರ್, ಮುಂಬೈ ಜೋಗಿ ಸಂಘದ ಅಧ್ಯಕ್ಷ ಅಶೋಕ್ ಜೋಗಿ ಅತಿಥಿಗಳಾಗಿದ್ದರು.


ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಜೋಗಿ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸತೀಶ್ ಜೋಗಿ ಮಾಲೆಮಾರ್,  ಕೋಶಾಧಿಕಾರಿ ಶಿವರಾಮ ಜೋಗಿ, ಸಾಂಸ್ಕೃತಿಕ ಸಮಿತಿಯ ಮೋಹನ ಕೊಪ್ಪಲ, ಸುಧಾಕರ ರಾವ್ ಪೇಜವಾರ, ಮಹಿಳಾ ಘಟಕದ ಆದ್ಯಕ್ಷೆ ಸುನಂದಾ ಸುರೇಶ್ ಬಿಜೈ, ಉಪಾಧ್ಯಕ್ಷೆ ಅಮಿತಾ ಸಂಜೀವ, ನ್ಯಾಯವಾದಿ ಮಹೇಶ್ ಜೋಗಿ, ಜೋಗಿ ಸಮಾಜ ಸುಧಾರಕ ಸಂಘದ ಉಪ ಸಮಿತಿಯ ದಯಾನಂದ ಎಂ. ರಾಜಗೋಪಾಲ್, ಹರಿಶ್ಚಂದ್ರ ಜೋಗಿ, ಆನಂದ ಜೋಗಿ, ದಯಾನಂದ ಜೋಗಿ, ಹರೀಶ್ ಕೂಟತ್ತಜೆ, ಪ್ರೇಮ್‌ನಾಥ್, ಪಾಂಡುರಂಗ, ನಳಿನಿ, ಶಿವರಾಮ ಬಳೆಗಾರ್, ರಾಕೇಶ್, ಮಧುಕರ ಜೋಗಿ, ಶಿವದಾಸ್ ಜೋಗಿ ಮೊದಲಾದವರಿದ್ದರು.


ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎಚ್. ಕೆ. ಪುರುಷೋತ್ತಮ ಜೋಗಿ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು, ದಿಕ್ಷೀತ್ ಜೋಗಿ ವಂದಿಸಿದರು. ಡಾ. ಚಂದ್ರಶೇಖರ ಜೋಗಿ ಕಾರ್ಯಕ್ರಮ ನಿರ್ವಹಿಸಿದರು.


೨೦ ಸಾವಿರ ಮಂದಿಗೆ ಉಟೋಪಚಾರ

ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವದ ಕಳೆದ ಎರಡು ದಿನಗಳಲ್ಲಿ (ಪೆ. ೪,೫) ೨೦ ಸಾವಿರಕ್ಕೂ ಅಧಿಕ ಮಂದಿ ಅನ್ನಪ್ರಸಾದ, ಬೆಳಿಗ್ಗೆ ಮತ್ತು ಸಂಜೆಯ ಫಲಹಾರ ಸ್ವೀಕರಿಸಿದ್ದಾರೆ. ಹೊರೆಕಾಣಿಕೆ, ಉಗ್ರಾಣ ಸಮಿತಿಯ ಸಂಚಾಲಕ ವಿನಯಾನಂದ ಜೋಗಿ ಕಾನಡ್ಕ, ಸಹ ಸಂಚಾಲಕರ ರಾಮಚಂದ್ರ ಚೌಟ ನೇತೃತ್ವದಲ್ಲಿ ಉಟೋಪಚಾರ ವ್ಯವಸ್ಥೆಗಳು ನಡೆಯಿತು. ಶ್ರೀ ಕ್ಷೇತ್ರದಲ್ಲಿ ಉತ್ತರ ಪ್ರದೇಶ, ರಾಜಸ್ಥಾನ, ಹರಿಯಾಣ, ಗುಜರಾತ್, ಕರ್ನಾಟಕ ಸೇರಿದಂತೆ ವಿವಿದೆಡೆಗಳಿಂದ ಸಾಧು ಸಂತರು ಆಗಮಿಸಿದ್ದು, ಕ್ಷೇತ್ರದಲ್ಲಿ ನೆಲೆಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top