ಶ್ರೀನಿವಾಸ ವಿಶ್ವವಿದ್ಯಾಲಯದಲ್ಲಿ ವಿಶ್ವ ಸಂಸ್ಕೃತ ಸಮ್ಮೇಳನದ ಪೂರ್ವ ಸಮ್ಮೇಳನ, ವಸ್ತುಮಳಿಗೆಗಳ ಪ್ರದರ್ಶನ ಉದ್ಘಾಟನೆ

Upayuktha
0

ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯದಲ್ಲಿ ವಿಶ್ವ ಸಂಸ್ಕೃತ ಸಮ್ಮೇಳನದ ಪೂರ್ವ ಸಮ್ಮೇಳನ ಹಾಗೂ ವಸ್ತು ಮಳಿಗೆಗಳ ಪ್ರದರ್ಶನದ ಉದ್ಘಾಟನಾ ಸಮಾರಂಭ ಫೆಬ್ರವರಿ 23ರಂದು ಶ್ರೀನಿವಾಸ ವಿಶ್ವವಿದ್ಯಾಲಯದ ಮುಕ್ಕ ಕ್ಯಾಂಪಸ್‌ನಲ್ಲಿ ನಡೆಯಿತು.


ಮುಖ್ಯ ಅತಿಥಿ ಉಡುಪಿ ಪುತ್ತಿಗೆ ಮಠದ ಜಗದ್ಗುರು ಶ್ರೀ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮಾತನಾಡಿ, ಸಂಸ್ಕೃತ ಸುಲಭ, ಸರಳ ಸುಂದರ ಭಾಷೆ. ವಿಶ್ವ ಭಾಷೆಯಾದ ಸಂಸ್ಕೃತ ಎಲ್ಲ ಭಾಷೆಗಳ ಜನನಿ. ಆಂಗ್ಲ ಭಾಷೆಯ ಮೂಲ ಕೂಡ ಸಂಸ್ಕೃತ. ಸರ್ವಧರ್ಮದ ಮೇಲೂ ಸಂಸ್ಕೃತ ಭಾಷೆಯ ಪ್ರಭಾವವಿದೆ ಎಂದರು.


ಉಡುಪಿ ಪೇಜಾವರ ಮಠದ ಜಗದ್ಗುರು ಶ್ರೀ ಮದ್ವಾಚಾರ್ಯ ಮೂಲ ಮಹಾ ಸಂಸ್ಥಾನದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ಎಲ್ಲರೂ ಸಂಸ್ಕೃತ ಅಧ್ಯಯನ ಮಾಡಿದಾಗ ನಾವು ವಿಶ್ವ ಮಾನವರಾಗುತ್ತೇವೆ. ಎಲ್ಲ ಭಾಷೆಯ ತಾಯಿ ಬೇರು ಇರುವುದು ಸಂಸ್ಕೃತದಲ್ಲಿ ಆದ್ದರಿಂದ ಸಂಸ್ಕೃತವನ್ನು ಆಧರಿಸಿ ಇತರ ಭಾಷೆಗಳು ಹುಟ್ಟಿವೆ. ಸಂಸ್ಕೃತದ ಮಹತ್ವದೊಂದಿಗೆ ನಮ್ಮ ದೇಶದ ಸಂಸ್ಕೃತಿಯ ಅರಿವು ಎಲ್ಲರಿಗೂ ಆಗಲಿ ಎಂದು ಹಾರೈಸಿದರು.


ಶ್ರೀನಿವಾಸ ವಿಶ್ವ ವಿದ್ಯಾಲಯದ ಕುಲಾಧಿಪತಿ ಡಾ. ಸಿಎ ಎ. ರಾಘವೇಂದ್ರ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತೀಯ ಸಂಸ್ಕೃತಿಯನ್ನು ಎಲ್ಲೆಡೆ ತಿಳಿಸಬೇಕು. ನಮ್ಮ ಸಂಸ್ಕೃತಿಯ ಮೂಲವಾದ ಸಂಸ್ಕೃತ ಭಾಷೆಯನ್ನು ಎಲ್ಲರೂ ಕಲಿಯಬೇಕು ಮಹತ್ವ ಅರಿಯ ಬೇಕೆನ್ನುವ ಉದ್ದೇಶದಿಂದ ಈ ಸಮ್ಮೇಳನ ಆಯೋಜಿಸಲಾಗಿದೆ ಎಂದರು.


ಲೋಕಸಭಾ ಪ್ರಚಾರ ಪರಿಷತ್ತಿನ ಅಂತಾರಾಷ್ಟ್ರೀಯ ಅಧ್ಯಕ್ಷ ಪ್ರೊ. ಸದಾನಂದ ದೀಕ್ಷಿತ್, ದೆಹಲಿ ಸಂಸ್ಕೃತ ಭಾರತಿ ಆಲ್ ಇಂಡಿಯಾ ಕಾರ್ಯದರ್ಶಿ ಡಾ. ನಂದಕುಮಾರ್, ಹುಬ್ಬಳ್ಳಿ ಆಚಾರ್ಯ ವೇದ ಪಾಠಶಾಲಾ ಫೌಂಡೇಶನ್ ಸಂಸ್ಥಾಪಕ ಚೆರ್ಮನ್ ವಿದ್ವಾನ್ ಶ್ರೀ ರವಿ ಆಚಾರ್ಯ, ಉದ್ಯಮಿ ಡಾ. ವಿರಾರ್ ಶಂಕರ್ ಬಿ. ಶೆಟ್ಟಿ, ಶ್ರೀನಿವಾಸ ವಿಶ್ವವಿದ್ಯಾಲಯದ  ಆಡಳಿತ ಮಂಡಳಿಯ ಟ್ರಸ್ಟಿ ಸದಸ್ಯರಾದ ಶ್ರೀಮತಿ ಎ. ವಿಜಯಲಕ್ಷ್ಮಿ ಆರ್. ರಾವ್, ಪ್ರೊ. ಇಆರ್ ಶ್ರೀಮತಿ ಎ. ಮಿತ್ರಾ ಎಸ್. ರಾವ್, ಕುಮಾರಿ ಮೇಘನಾ ಎಸ್. ರಾವ್, ಉಪ ಕುಲಪತಿ ಡಾ. ಪಿ. ಎಸ್. ಐತಾಳ್ ಮತ್ತಿತರರು ಉಪಸ್ಥಿತರಿದ್ದರು.


ಶ್ರೀನಿವಾಸ ವಿಶ್ವ ವಿದ್ಯಾಲಯದ ಸಹ ಕುಲಾಧಿಪತಿ ಡಾ.ಎ. ಶ್ರೀನಿವಾಸ ರಾವ್ ಸ್ವಾಗತಿಸಿದರು. ಡಾ. ವಿಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top