ಮಂಗಳೂರು ವಿವಿ: ಪರೀಕ್ಷೆ, ಅಂಕಪಟ್ಟಿ ವಿತರಣೆ ಸಂಬಂಧ ಮಹತ್ವದ ಪ್ರಕಟಣೆ

Upayuktha
0



ಮಂಗಳೂರು: ಆಗಸ್ಟ್‌/ ಸೆಪ್ಟೆಂಬರ್‌ 2021, ಸೆಪ್ಟೆಂಬರ್‌/ಅಕ್ಟೋಬರ್‌ 2021ರಲ್ಲಿ ಜರುಗಿದ 1, 3, 5, 6ನೇ ಸೆಮಿಸ್ಟರ್‌ನ ಪದವಿ ಪರೀಕ್ಷಾ ಕಾರ್ಯಗಳು ಪೂರ್ಣಗೊಂಡಿದ್ದು, ಫಲಿತಾಂಶ ಪ್ರಕಟಿಸಿ ಅಂಕಪಟ್ಟಿಗಳನ್ನು ವಿತರಿಸಲಾಗಿದೆ; ಅಲ್ಲದೆ ಮರು ಮೌಲ್ಯಮಾಪನವೂ ಪೂರ್ಣಗೊಂಡು ಫಲಿತಾಂಶ ಪ್ರಕಟಿಸಿ ಅಂಕಪಟ್ಟಿಗಳನ್ನು ವಿತರಿಸಲಾಗಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವರ ಪ್ರಕಟಣೆ ತಿಳಿಸಿದೆ.

ಫಲಿತಾಂಶ ಮತ್ತು ಅಂಕಪಟ್ಟಿಗಳ ಕುರಿತ ಕೆಲವೊಂದು ಗೊಂದಲಗಳ ಹಿನ್ನೆಲೆಯಲ್ಲಿ ವಿವಿ ಈ ಪ್ರಕಟಣೆ ನೀಡಿದೆ.

ಕೋವಿಡ್‌ 19 ಸಂದರ್ಭದಲ್ಲಿ ಆಗಸ್ಟ್‌/ ಸೆಪ್ಟೆಂಬರ್‌ 2021, ಸೆಪ್ಟೆಂಬರ್‌/ ಅಕ್ಟೋಬರ್‌ 2021ರ ಪರೀಕ್ಷೆಗೆ ಕೋವಿಡ್‌ನಿಂದ ಗೈರುಹಾಜರಾದ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ನೀಡಿ ಡಿಸೆಂಬರ್ 2021 ಮತ್ತು ಜನವರಿ 2022ರಲ್ಲಿ ವಿಶೇಷ ಪರೀಕ್ಷೆ ನಡೆಸಿ ಫಲಿತಾಂಶ ಪ್ರಕಟಿಸಿ ಅಂಕಪಟ್ಟಿ ನೀಡಲಾಗಿದೆ. ಇನ್ನೂ ಗೊಂದಲಗಳಿರುವ ಫಲಿತಾಂಶಗಳನ್ನು ಫೆ.10ರ ಒಳಗಾಗಿ ಪ್ರಕಟಿಸಲಾಗುವುದು ಎಂದು ಪ್ರಕಟಣೆ ಹೇಳಿದೆ.


ಏಪ್ರಿಲ್‌/ ಮೇ 2022ರಲ್ಲಿ ಜರುಗಿದ 1ನೇ ಸೆಮಿಸ್ಟರ್‌ ಯುಯುಸಿಎಂಎಸ್‌ ಮತ್ತು 3, 5ನೆಯ ಸೆಮಿಸ್ಟರ್‌ನ ಪರೀಕ್ಷಾ ಕಾರ್ಯಗಳು ಪೂರ್ಣಗೊಂಡಿದ್ದು, ಫಲಿತಾಂಶ ಪ್ರಕಟಿಸಲಾಗಿದೆ. 3, 5ನೆಯ ಸೆಮಿಸ್ಟರ್‌ ಅಂಕಪಟ್ಟಿಗಳನ್ನು ವಿತರಿಸಲಾಗುತ್ತಿದೆ. ಯುಯುಸಿಎಂಎಸ್‌ 1 ನೇ ಸೆಮಿಸ್ಟರ್‌ ಮರುಮೌಲ್ಯಮಾಪನಕ್ಕಾಗಿ ದಿನಾಂಕ ನಿಗದಿಪಡಿಸಿ ಆದೇಶ ಹೊರಡಿಸಲಾಗಿದೆ. 


ಸೆಪ್ಟೆಂಬರ್‌/ಅಕ್ಟೋಬರ್‌ 2022ರ ಅಂತಿಮ ಸೆಮಿಸ್ಟರ್‌ ಹಾಗೂ 4ನೇ ಸೆಮಿಸ್ಟರ್‌ ಪದವಿ ಪರೀಕ್ಷೆಗಳ ಫಲಿತಾಂಶ ಪ್ರಕಟಿಸಲಾಗಿದ್ದು, ಆರನೇ ಸೆಮಿಸ್ಟರ್‌ ಅಂಕಪಟ್ಟಿ ವಿತರಿಸಲಾಗಿದೆ. ಮತ್ತು ಯುಯುಸಿಎಂಎಸ್‌ 2ನೇ ಸೆಮಿಸ್ಟರ್‌ ಮೌಲ್ಯಮಾಪನ ಮುಕ್ತಾಯಗೊಂಡಿದ್ದು, ಫಲಿತಾಂಶದ ಪ್ರಕ್ರಿಯೆ ಪ್ರಗತಿಯಲ್ಲಿದೆ.


ಈ ಹಿನ್ನೆಲೆಯಲ್ಲಿ ರಾಜ್ಯದ ತಾಂತ್ರಿಕ ಸಮಿತಿಯು ಇಂದು ಶುಕ್ರವಾರ (ಫೆ.2) ವಿವಿಗೆ ಭೇಟಿ ನೀಡಿ ಎಲ್ಲಾ ಕಾಲೇಜುಗಳ ಪ್ರಾಂಶುಪಾರೊಡನೆ ಸಂವಾದ ನಡೆಸಿದೆ. ಆದ್ದರಿಂದ ಫೆ. 15ರ ಒಳಗೆ ಫಲಿತಾಂಶ ಪ್ರಕಟಿಸಲಾಗುವುದು.


ಫೆಬ್ರವರಿ/ ಮಾರ್ಚ್‌ 2023ರ ಯಯುಸಿಎಂಎಸ್‌ 3ನೇ ಸೆಮಿಸ್ಟರ್‌ ಮತ್ತು ಅನುತ್ತೀರ್ಣರಾದ ವಿದ್ಯಾರ್ಥಿಗಳ 1ನೇ ಸೆಮಿಸ್ಟರ್‌ ಪರೀಕ್ಷಾ ಕಾರ್ಯಗಳು ಫೆ.6ರಿಂದ ಪ್ರಾರಂಭವಾಗಲಿವೆ.


ಈ ನಡುವೆ ಕೆಲವು ಫಲಿತಾಂಶಗಳು ತಡವಾಗಿ ಪ್ರಕಟಗೊಂಡು ಇವುಗಳ ಬಾಕಿ ಉಳಿದ ಅಂಕಪಟ್ಟಿಗಳನ್ನು ಫೆ.10ರೊಳಗೆ ವಿತರಿಸಲಾಗುವುದು  ಜನವರಿ 31ರಂದು ನಡೆದ ಸಿಂಡಿಕೇಟ್ ಸಭೆಯಲ್ಲಿ ಕುಲಾಧಿಪತಿಗಳ ಆದೇಶದಂತೆ ಅಂಕಪಟ್ಟಿಗಳನ್ನು ಮುದ್ರಿಸಿ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲು ನಿರ್ದೇಶನ ನೀಡಿದ್ದು, 10ರ ಒಳಗೆ ವಿತರಿಸಲಾಗುವುದು ಎಂದು ಪರೀಕ್ಷಾಂಗ ಕುಲಸಚಿವರು ತಿಳಿಸಿದ್ದಾರೆ.


ಯುಯುಸಿಎಂಸ್‌ ಅಡಿಯಲ್ಲಿ ಬರುವ ಎಲ್ಲಾ ಪರೀಕ್ಷಾ ಮತ್ತು ಫಲಿತಾಂಶ ವಿವರಗಳನ್ನು ಡಿಜಿಲಾಕರ್‌ಗೆ ವರ್ಗಾಯಿಸಲಾಗುವುದು.


ವಿಕೇಂದ್ರೀಕೃತ ಮೌಲ್ಯಮಾಪನದ ಬದಲು ಕೇಂದ್ರೀಕೃತ ಮೌಲ್ಯಮಾಪನ ನಡೆಸುವಂತೆ ಯುಯುಸಿಎಂಎಸ್‌ ಆದೇಶವಿರುವುದರಿಂದ ಮುಂದಿನ ಮೌಲ್ಯಮಾಪನಗಳು ಕೇಂದ್ರೀಕೃತ ವ್ಯವಸ್ಥೆಯಲ್ಲಿ ನಡೆಯುತ್ತವೆ ಎಂದು ಪ್ರಕಟಣೆ ಹೇಳಿದೆ.

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top