ಜಿಜ್ಞಾಸೆ: ಪಕ್ಷ ನೇೂಡಿ ಮತ ಹಾಕಬೇಕೇ? ಅಭ್ಯರ್ಥಿ ನೇೂಡಿ ಮತ ಹಾಕಬೇಕೇ?

Upayuktha
0

ತ್ತೀಚೆಗೆ ನಾನು ಮತದಾನದ ಮಹತ್ವದ ಕುರಿತಾಗಿ ಮಾತನಾಡಲು ಒಂದು ಕಾರ್ಯಕ್ರಮಕ್ಕೆ ಹೇೂಗಿದ್ದೆ. ನನ್ನ ಭಾಷಣ ಮುಗಿದ ತಕ್ಷಣವೇ ಓರ್ವ ಹಿರಿಯರು ಎದ್ದು ನಿಂತು ನನಗೊಂದು ಪ್ರಶ್ನೆ ಎಸೆದರು. ಸರ್ ನಾವು ಪಕ್ಷ ನೇೂಡಿ ಮತ ಹಾಕಬೇಕೆ ಅಥವಾ ಅಭ್ಯರ್ಥಿ ನೇೂಡಿ ಮತ ಹಾಕಬೇಕೇ? ಒಮ್ಮೆ ನಾನು ತಬ್ಬಿಬ್ಬಾಗಿ ಬಿಟ್ಟೆ. ಯಾಕೆಂದರೆ ಇತ್ತೀಚೆಗೆ ಒಂದು ಪಕ್ಷದ ರಾಷ್ಟ್ರೀಯ ನಾಯಕರು ಒಂದು ಹೇಳಿಕೆ ನೀಡಿದ್ದರು. ಈ ಬಾರಿ ನೀವು ಅಭ್ಯರ್ಥಿ ನೇೂಡಬೇಡಿ, ಪಕ್ಷ ನೇೂಡಿ ಮತ ಹಾಕಿ ಅನ್ನುವ ಸುದ್ದಿ ಪತ್ರಿಕೆಯಲ್ಲಿ ಓದಿದ ನೆನಪು. ಹಾಗಾಗಿ ಇವರು ಕೂಡಾ ಅದೇ ಪಕ್ಷದವರು ಇರ ಬಹುದಾ ಅನ್ನುವ ಸಂಶಯ ಬಂತು. ಅವರು ಯಾರೇ ಆಗಲಿ ನಮಗೇನು, ಇಷ್ಟೊಂದು ವರುಷ ರಾಜಕೀಯ ಶಾಸ್ತ್ರ ಪಾಠ ಮಾಡಿದ ನನಗೆ ಇದೊಂದು ತುಂಬಾ ಬಾಲಿಶದ ಪ್ರಶ್ನೆ ಅನ್ನಿಸಿತು.


ತಕ್ಷಣವೇ ಅವರಿಗೆ ಇನ್ನೊಂದು ಪ್ರಶ್ನೆ ನಾನು ಹಾಕಿದೆ. "ಯಾವುದೇ ಒಂದು ಮನೆ ಉದ್ದಾರ ಆಗುವುದು ಮನೆಯನ್ನು ಕಟ್ಟಿದ ಇಟ್ಟಿಗೆ ಕಟ್ಟಿಗೆಗಳಿಂದಲೊ ಅಥವಾ ಮನೆಯೊಳಗಿರುವ ಜನರಿಂದಲೊ? ಅದಕ್ಕೆ ಅವರೆಂದರೂ ಮನೆ ಏಳಿಗೆ ಆಗುವುದು ಮನೆಯೊಳಗಿರುವ ಜನರಿಂದ ಅಂದು ಕೂತು ಬಿಟ್ಟರು. ತಕ್ಷಣವೇ ನಿಮ್ಮ ಪ್ರಶ್ನೆ ಉತ್ತರ ಸಿಕ್ಕಿತಾ ಕೇಳಿದೆ. ಹೌದು ಸರ್ ಎಂದು ಉಸಿರುಬಿಟ್ಟರು.


ಯಾವುದೇ ಒಂದು ಪಕ್ಷದಿಂದ ನಾವುಉತ್ತಮ ಸರ್ಕಾರ ಕಟ್ಟಬೇಕು ಅಂದರೆ ಆ ಪಕ್ಷದಿಂದ ಆಯ್ಕೆಗೊಂಡ ಉತ್ತಮ ಆದರ್ಶ ಜನ ಪ್ರತಿನಿಧಿಗಳಿಂದಲೇ ಹೊರತು ಅದಕ್ಷ ಅಪ್ರಾಮಾಣಿಕ ಭ್ರಷ್ಟಾಚಾರಿ ಜನಪ್ರತಿನಿಧಿಗಳಿಂದ ಅಲ್ಲ ಅನ್ನುವ ಸತ್ಯಾಂಶ ಇಡಿ ವಿಶ್ವದ ಪ್ರಜಾಪ್ರಭುತ್ವ ದೇಶಗಳಿಗೆ ಅಥ೯ವಾಗಿದೆ.


ಅಮೆರಿಕಾದಲ್ಲಿ ಒಂದು ಮಾತಿದೆ. ಅಲ್ಲಿನ ಎರಡು ರಾಜಕೀಯ ಪಕ್ಷಗಳಿದ್ದಾವೆ. ಒಂದು ಡೆಮೇೂಕ್ರಟಿಕ್ ಇನ್ನೊಂದು ರಿಪಬ್ಲಿಕ್‌ನ ಪಕ್ಷ. ಅಮೆರಿಕಾದ ಜನರಿಗೆ ಅವುಗಳು ಹೇಗೆಂದರೆ ಎರಡು ವೈನ್ ಬಾಟಲ್‌ಗಳು ಇದ್ದ ಹಾಗೆ. ಒಂದು ಡೆಮೇೂಕ್ರಟಿಕ್‌ ವೈನ್ ಇನ್ನೊಂದು ರಿಪಬ್ಲಿಕನ್ ವೈನ್. ಯಾವುದನ್ನೇ ನೀವು ತೆಗೆದುಕೊಳ್ಳಿ ಒಂದೇ ತರದ ಕಿಕ್. ಹಾಗಾಗಿ ಅಲ್ಲಿನ ಪ್ರಬುದ್ಧ ಮತದಾರರು ಈ ಎರಡು ವೈನ್ ಬಾಟಲ್‌ಗಳನ್ನು ಮೊದಲು ಬದಿಗೆ ಇಟ್ಟು ಉತ್ತಮ ಅಭ್ಯರ್ಥಿಗಳನ್ನೇ ಮುಂದಿನ ತಮ್ಮ ಅಧ್ಯಕ್ಷರಾಗಿ ಆಯ್ಕೆ ಮಾಡುತ್ತಾರೆ. ಆದರೆ ನಮ್ಮ ಪರಿಸ್ಥಿತಿ ಹಾಗಲ್ಲ. ನಮ್ಮಲ್ಲಿ ಮೂರು ನಾಲ್ಕು ತರದ ವೈನ್ ಬಾಟಲ್‌ಗಳು ಇದ್ದಾವೆ. ಅವುಗಳು ಒಂದೊಂದು ತರದ ಕಿಕ್ ಕೊಡುತ್ತವೆ. ಹಾಗಾಗಿ ನಮ್ಮ ಮತದಾರ ಇಲ್ಲಿ ಸಂಪೂರ್ಣವಾಗಿ ಗೊಂದಲಕ್ಕೆ ಒಳಗಾಗುತ್ತಾನೆ. ಆದುದರಿಂದ ಇಲ್ಲಿ ಮೊದಲ ಪ್ರಾಶಸ್ತ್ಯ ಅಭ್ಯರ್ಥಿಗಳಿಗೆ ಕೊಡ ಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ನಾವು ಒಬ್ಬ ತೇಲುವ ಮತದಾರರನಾಗಿ (floating voter) ನಿಣ೯ಯ ತೆಗೆದುಕೊಳ್ಳ ಬೇಕಾದ ಅಗತ್ಯ ಇದೆ. ತೇಲುವ ಮತದಾರನೇ ಉತ್ತಮ ಸರ್ಕಾರದ ರೂವಾರಿ ಅನ್ನುವುದು ಸತ್ಯ.

-ಪ್ರೊ.ಕೊಕ್ಕಣೆ೯ ಸುರೇಂದ್ರ ನಾಥ ಶೆಟ್ಟಿ ಉಡುಪಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top