ಪ್ರಾತಿನಿಧಿಕ ಚಿತ್ರ
ಹಾಸ್ಟೆಲ್ ಅಂದ ತಕ್ಷಣ ಅರಿವಾಗುವುದು ಮನೆಯವರನ್ನು ಬಿಟ್ಟು ಬೇರೆ ಯಾವುದೋ ಪ್ರದೇಶದಲ್ಲಿ ನೆಲೆ ನಿಂತು ಮನೆ ಊಟವನ್ನು ನೆನಪಿಸಿಕೊಳ್ಳುತ್ತಾ ತಂದೆ-ತಾಯಿಯರೊಂದಿಗೆ ಕಳೆದ ಕ್ಷಣಗಳನ್ನು ಯೋಚಿಸುತ್ತಾ ಇರುವುದೇ ಹಾಸ್ಟೆಲ್ ಜೀವನ. ಆದರೆ ಹಾಸ್ಟೆಲ್ ಜೀವನದ ಒಂದು ಅಂಗ ಎಂದರೆ "ಕೊಠಡಿಯ ಸಹವಾಸಿ" (ರೂಮ್ ಮೇಟ್) ಅಕ್ಕ ಪಕ್ಕದ ಮನೆಯವರ ಬಳಿ ನಾನು ಹಾಸ್ಟೆಲ್ ಗೆ ಹೋಗುತ್ತೇನೆ ಎಂದರೆ ನಿನ್ನ ಕೊಠಡಿಯ ಸಹವಾಸ ಹೇಗಿದ್ದಾಳೆ ಅವಳ ನಡುವೆ ಹೇಗೆ ಎಂಬುದನ್ನು ತಿಳಿದುಕೋ, ಎಂದು ಬುದ್ಧಿವಾದ ಹೇಳುವರು ಹೌದು.. ನಾನು ಸಹ ಹಾಗೆಯೇ ಬಂದವಳು ಇಲ್ಲಿ ನನಗೆ ಸಿಕ್ಕಿದವಳು ತ್ರಿಷ್ಮ ಮೊದಲ ಕೆಲವು ದಿನ ಮಾತೇ ಆಡುತ್ತಿರಲಿಲ್ಲ ಮತ್ತೆ ದಿನಗಳೆದಂತೆ ಮಾತೇ ನಿಲ್ಲಿಸುತ್ತಿರಲಿಲ್ಲ.
ಹೊರ ಜಗತ್ತಿನ ಪರಿಚಯ ಇಲ್ಲದ ನನಗೆ ಪ್ರಪಂಚ ಹೀಗಿದೆ ಎಂಬುದು ತಿಳಿಸಿಕೊಟ್ಟವಳು ಇವಳು, ಒಳ್ಳೆಯ ಗುಣದವಳು, ವಿಶಾಲ ಹೃದಯವಂತಳು, ಚೊಕ್ಕ ಮನಸ್ಸಿನ ಕಣ್ಮಣಿ. ಇಬ್ಬರೂ ಊಟ ಮಾಡುವಾಗ ಆಂಟಿಗೆ ಬೈಯುತ್ತಾ ಊಟ ಮಾಡುತ್ತಿದ್ದೆವು. ಅವಳು ನನಗಿಂತ ಚಿಕ್ಕವಳಾದರೂ ಬಹಳ ಚೂಟಿಯಾಗಿದ್ದಳು, ವೈದ್ಯಕೀಯ ವಿದ್ಯಾರ್ಥಿಯಾದ ಇವಳು ಓದು ಅಂದ್ರೆ ಸಾಕು ತಕ್ಷಣ ಮೂಲೆಗುಂಪಾಗಿ ಸೇರುವಳು.
ಎಲ್ಲರ ಹಾಸ್ಟೆಲ್ ನಿವಾಸಿಗಳಂತೆ ನನ್ನದೂ ಜೀವನ ಇತ್ತು. ಮೊದಲಿಗೆ ಭಯ, ನಂತರ ನಿರ್ಭಯ, ಆದರೆ ಹಾಸ್ಟೆಲ್ ಜೀವನವು ಹೊರ ಪ್ರಪಂಚದ ಅರಿವನ್ನು ತಿಳಿಸುತ್ತದೆ. ಪೂರ್ವ ಪಶ್ಚಿಮದಂತಿರುವ ಸ್ಥಳಗಳನ್ನು ಒಂದುಗೂಡಿಸುವುದೇ ಹಾಸ್ಟೆಲ್.
-ನೇಹಾ. ಎನ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ


