ಕಾಸರಗೋಡು: ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನ ಹಡಗಲಿ ಹಾಗೂ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ವಿಜಯನಗರ ಇವರ ಸಹಯೋಗದೊಂದಿಗೆ ಫೆ. 26 ರಂದು ಶ್ರೀ ಶಿವರಾಮ ಅವಧೂತರ ಆಶ್ರಮ ಹೇಮಕೂಟ, ಹಂಪಿಯಲ್ಲಿ ಸಾವಿರ ಕಾವ್ಯ ಗೋಷ್ಠಿಯ ಸಂಭ್ರಮ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಹಲವಾರು ಸಾಧಕರನ್ನು ಗುರುತಿಸಿ ಗೌರವ ಸನ್ಮಾನ ಮಾಡಲಾಗುವುದು. ಈ ಸುಂದರ ಕಾರ್ಯಕ್ರಮದಲ್ಲಿ ಕಾಸರಗೋಡಿನ ನೆಲ್ಲಿಕಟ್ಟೆ ಚೂರಿಪ್ಪಳ್ಳದ ಪ್ರಕೃತಿ ಆಯುರ್ವೇದ ಆಸ್ಪತ್ರೆಯ ವೈದ್ಯೆ, ಸಾಹಿತಿ ಡಾ. ವಾಣಿಶ್ರೀ ಕಾಸರಗೋಡು ಇವರನ್ನು ಇವರ ಆಗಾಧ ಸಾಹಿತ್ಯ ಸೇವೆಯನ್ನು ಗುರುತಿಸಿ ಇವರಿಗೆ ರಾಜ್ಯ ಮಟ್ಟದ ಕಾವ್ಯಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕಾರ್ಯಕ್ರಮದ ಆಯೋಜಕ ಮಧು ನಾಯ್ಕ ಲಂಬಾಣಿ ಅವರು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.
ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ.) ಕಾಸರಗೋಡು ಸಂಸ್ಥೆಯ ಸರ್ವ ಪದಾಧಿಕಾರಿಗಳು ಡಾ ವಾಣಿಶ್ರೀ ಕಾಸರಗೋಡು ಇವರಿಗೆ ಅಭಿನಂದಿಸಿ ಶುಭವನ್ನು ಕೋರಿರುತ್ತಾರೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಗುರುರಾಜ್ ಕಾಸರಗೋಡು ತಿಳಿಸಿರುತ್ತಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ