ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ವಿ. ಮುನಿಯಪ್ಪರವರು ಪ್ರಧಾನ ಸಂಪಾದಕರಾಗಿರುವ ಪಠ್ಯ ಪುಸ್ತಕ ರಚನಾ ಸಮಿತಿ ಕಲ್ಪನ್ಯೂಸ್‍ದಲ್ಲಿ ಬರೆದಿದ್ದ 'ಸಾಮರಸ್ಯ ಸಾಮ್ರಾಜ್ಯ ನಿರ್ಮಿಸಿದ ಪ್ರಾತಃಸ್ಮರಣೀಯ ಸಂತ ಶಿಶುನಾಳ ಶರೀಫ' ಇವರ ಲೇಖನವನ್ನು ಆಯ್ಕೆ ಮಾಡಿದೆ.
ಭಾರತ ಸರ್ಕಾರದ 2020ರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಅಡಿಯಲ್ಲಿ ಸಿದ್ದಗೊಂಡಿರುವ ಪಠ್ಯಕ್ರಮದಲ್ಲಿ ಸಾಹಿತ್ಯ ಸಂಸ್ಕೃತಿ ಮತ್ತು ರಾಷ್ಟ್ರೀಯತೆಯ ಮನೋಭಾವ ಇಂದಿನ ಶಿಕ್ಷಣ ವ್ಯವಸ್ಥೆಯು ಕಟ್ಟಿಕೊಡಬೇಕೆಂಬ ನಿಟ್ಟಿನಲ್ಲಿ ಸಂವಹನ ಕೌಶಲ್ಯದ ಜೊತೆಗೆ ನಿರ್ದಿಷ್ಟ ಫಲಿತಗಳ ಸಮತೋಲನ ಸಾಧಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ ಎಂದು ಸಂಚಾಲಕರಾದ ಡಾ. ರಾಮಲಿಂಗಪ್ಪ ಟಿ ಬೇಗೂರು ತಿಳಿಸಿದ್ದಾರೆ.
ವಿವಿಧ ಧರ್ಮಗಳ ಸಂಗಮ ಕ್ಷೇತ್ರವಾಗಿರುವ ಭಾರತ ದೇಶದಲ್ಲಿ ಪರಸ್ಪರ ಬಾಂಧವ್ಯವೊಂದೇ ಪ್ರಗತಿ ಮಂತ್ರ, ಶಿಶುನಾಳ ಷರೀಫರಂತಹ ಸಂತರ ಈ ನಾಡಿಗೆ ಇಂದಿಗೂ ಪ್ರಸ್ತುತವಾಗುವುದು ಅವರು ಸಾರಿದ ಬೆಳೆಸಿದ, ಬೆಳಗಿದ ಆಶಿಸಿದ ತತ್ವಗಳಿಂದ. ಐಕ್ಯತೆ ಹಾಗು ಸೌಹಾರ್ದವನ್ನು ಬೆಳಸಿಕೊಳ್ಳಲು ಅವರ ವೈಚಾರಿಕ ತತ್ವಪದಗಳು ನೀಡುವ ಕರೆ ಮಾರ್ದನಿಗೊಳ್ಳಲು ಶರೀಫಜ್ಜ ನಮಗೆ ಸದಾ ಸ್ಮರಣೀರಾಗುತ್ತಾರೆ ಎಂದು ಡಾ. ಗುರುರಾಜ ಪೋಶೆಟ್ಟಿಹಳ್ಳಿರವರು ಅಭಿಪ್ರಾಯ ಪಟ್ಟರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ


