ಮಂಗಳೂರು: ಕರ್ನಾಟಕ ಸಂಗೀತ ನ್ಯತ್ಯ ಅಕಾಡೆಮಿಯ ವತಿಯಿಂದ 2022-2023ನೇ ಸಾಲಿನ ವಿಶೇಷ ಘಟಕ ಯೋಜನೆಯಡಿ ಗುರುಶಿಷ್ಯ ಪರಂಪರೆಯಲ್ಲಿ ಅಕಾಡೆಮಿ ವ್ಯಾಪ್ತಿಯೊಳಗೆ ಬರುವ ಕರ್ನಾಟಕ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ನೃತ್ಯ (ಭರತ್ಯನಾಟ್ಯ, ಕಥಕ್, ಕೊಚಿಪುಡಿ) ಕಥಾಕೀರ್ತನೆ ಮತ್ತು ಗಮಕ ಕ್ಷೇತ್ರಗಳಲ್ಲಿ ಯುವ ಕಲಾವಿದರಲ್ಲಿ ಕಲಾನೈಪುಣ್ಯತೆಯನ್ನು ಹಚ್ಚಿಸುವ ಸಲುವಾಗಿ ಪ್ರತಿಷ್ಠಿತ ಸಂಸ್ಥೆಯ ಗುರುಗಳ ಮೂಲಕ 5 ತಿಂಗಳ ಸಂಗೀತ ನೃತ್ಯ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತಿದೆ.
ಅರ್ಜಿ ಸಲ್ಲಿಸಲು ಫೆ.28ರಂದು ಕೊನೆಯ ದಿನ.
ಶಿಬಿರದಲ್ಲಿ ಪಾಲ್ಗೊಳ್ಳಲು ಅರ್ಹತೆಗಳು:
ವಯಸ್ಸು 16 ರಿಂದ 30 ವರ್ಷದೂಳಗಿರಬೇಕು, ಗುರುಗಳ ಬಳಿ ಕನಿಷ್ಠ 2 ವರ್ಷ ಆಭ್ಯಾಸ ಮಾಡಿರಬೇಕು, ಗುರುಗಳ ಪ್ರಮಾಣ ಪತ್ರ ಲಗತ್ತಿಸಬೇಕು, ಓದು ಬರಹ ಬಲ್ಲವರಾಗಿರಬೇಕು, ಕಲಿಯುವ ಆಸಕ್ತಿ, ಹೆಚ್ಚಿನ ಅಭ್ಯಾಸ ಮಾಡುವ ಉತ್ಸುಕತೆ ಇರಬೇಕು.
ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ನಮೂನೆಗಾಗಿ ಅಕಾಡೆಮಿಯ ವೆಬ್‍ಸೈಟ್: https://sangeetanrityaacademy.karnataka.gov.in ಲಿಂಕ್ ಮೂಲಕ ಅರ್ಜಿ ಸಲ್ಲಿಬಹುದು. ಬೇರೆ ಬೇರೆ ಅಭ್ಯರ್ಥಿಗಳು ಆಯಾ ಜಿಲ್ಲೆಯ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಿಂದ ಅರ್ಜಿ ಪಡಯಬಹುದು ಹಾಗೂ ಭರ್ತಿ ಮಾಡಿರುವ ಅರ್ಜಿಗಳನ್ನು ಬೆಂಗಳೂರಿನ ಕನ್ನಡ ಭವನದ 2ನೇ ಮಹಡಿಯಲ್ಲಿರುವ ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯ ರಿಜಿಸ್ಟಾರ್ ಅವರನ್ನು ಸಂಪರ್ಕಿಸಬಹುದು. ಎಂದು ಕರ್ನಾಟಕ ಸಂಗೀತ ನ್ಯತ್ಯ ಅಕಾಡೆಮಿಯವರು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ