ಕೃಷಿಯಲ್ಲಿ ಖುಷಿ: ಪುರುಷರಷ್ಟೇ ಮಹಿಳೆಯರದೂ ಮಹತ್ವದ ಪಾತ್ರ

Upayuktha
0

 


ಕೃಷಿ ಭಾರತದ ಜನರ ಜೀವನ ನರನಾಡಿಯಾಗಿದೆ. ಕೃಷಿ ಫಲವತ್ತತೆಯಲ್ಲಿ ಭಾರತವು ರಾಷ್ಟ್ರೀಯ ಸಂಪ್ರದಾಯವನ್ನು ಹೊಂದಿದೆ. 2011ರ ಜನಗಣತಿ ಪ್ರಕಾರ ದೇಶದ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ 1.1 ಶತಕೋಟಿ ಜನರಲ್ಲಿ 72% ರಷ್ಟು ಜನರ ಜೀವನ ವಿಧಾನವೇ ಈ ಕೃಷಿಯಾಗಿದೆ. ಅದರಲ್ಲಿಯೂ ಭಾರತದ ಶೇ ಕಡ 80% ರಷ್ಟು ಮಹಿಳೆಯರನ್ನು ಉದ್ಯೋಗಿಗಳನ್ನಾಗಿಸಿದೆ. ಅದರಲ್ಲಿ ಕೃಷಿ ಕಾರ್ಮಿಕರಾಗಿ 33% ಹಾಗೂ ಸ್ವಯಂ ರೈತರಲ್ಲೇ 48% ರಷ್ಟು ಮಹಿಳೆಯರು ತೊಡಗಿದ್ದಾರೆ. ಆದರೆ ಅದರಲ್ಲಿ ಕೇ ವಲ 13% ಜನರು ಮಾತ್ರ ಸ್ವಂತ ಭೂಮಿಯನ್ನು ಹೊಂದಿದ್ದಾರೆ. ಜಗತ್ತು ಈಗ ಮಾನವನ ವಿಕಾಸ, ತಂತ್ರಜ್ಞಾನ ಅಭಿವೃದ್ಧಿ ಹಾಗೂ ಇನ್ನಿತರ ಹೊಸ ಕೌಶಲ್ಯದ ಹುಡುಕಾಟದ ಪತದತ್ತ ಸಾಗುತ್ತಿದೆ. ಅದರಲ್ಲೂ ಮಹಿಳೆಯರು ಇಂದಿನ ದಿನಗಳಲ್ಲಿ ಪುರುಷರಿಗೆ ಸರಿ ಸಮಾನವಾಗಿ ಎಲ್ಲ ರಂಗಗಳಲ್ಲೂ ಕಾರ್ಯ ನಿರ್ವ ಹಿಸುತ್ತಿದ್ದಾರೆ. ತಮ್ಮನ್ನು ತಾವು ಕಾರ್ಯ ನಿರತಗೊಳಿಸುತ್ತಿದ್ದಾರೆ. ಅದಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಮತ್ತು ಇನ್ನಿತರ ಕಸಬುಗಳಲ್ಲಿ ಮಹಿಳೆಯಿಲ್ಲದೇ ಕೆಲಸಗಳು ನಡೆಯುವುದೇ ಇಲ್ಲ. ಭಾರತವು ಕೃಷಿ ಪ್ರಧಾನವಾದ ರಾಷ್ಟ್ರವಾದ್ದರಿಂದ ಇಲ್ಲಿ ಈ ಪರಿಕಲ್ಪನೆಗೆ ಕಾರಣವಾದವಳೆ ಮಹಿಳೆ.


14 ಬಿಲಿಯನ್ ವರ್ಷಗಳ ಹಿಂದೆ ಭೂಮಿಯು ಉಗಮವಾಯಿತು. ಆಗ ಒಂದೊಂದು ರೀತಿಯ ಸೂಕ್ಷ್ಮಕ್ರಿಯೆ ಮೂಲಕ ಒಂದೊಂದು ರೀತಿಯ ಜೀವಿಗಳು ಹುಟ್ಟಿ ಕ್ರಮೇಣವಾಗಿ ಮಾನವನ ಜಾತಿ ಹುಟ್ಟಿಕೊಂಡಿತು, ಹಾಗೆಯೇ ಗಿಡ, ಮರ, ಬಳ್ಳಿ ಮುಂತಾದವುಗಳು ಹುಟ್ಟಿಕೊಂಡವು. ಪೌರಾಣಿಕ ಇತಿಹಾಸದ ಪ್ರಕಾರ ಮಾನವನ ಮೂಲ ಪುರುಷ ಆದಂ ಮತ್ತು ಸ್ತ್ರೀ ಹವ್ವಾ ಸ್ವರ್ಗದಿಂದ ಹೊರ ಹಾಕಲ್ಪಟ್ಟಾಗ ಭೂಮಿಗೆ ಬಂದಿಳಿದರು. ಹೀಗೆ ಮುಂದೆ ಆಹಾರ ಅರಸುತ್ತ ಹೊರಟರು ಆಹಾರ ದೊರೆತ ಮೇಲೆ, ಕಾಮ ತೀರಿಸಿಕೊ ಳ್ಳಲು ಒಂದಾದರು, ಹೀಗೆ ಮಾನವನ ಜಾತಿ ಉಗಮವಾಗುತ್ತದೆ ಎಂದು ಹೇಳಲಾಗುತ್ತದೆ.


ಮಾನವರು ಆಹಾರ ಅರಸುತ್ತಾ ಹೋಗಿ ಬೇಟೆಯಾಡುವುದನ್ನು ಕಲಿತರು, ಅದನ್ನು ಸುಟ್ಟು ತಿನ್ನುವುದನ್ನು ಕಲಿತರು, ಪುರುಷರು ಕಾಡು ಸುತ್ತುವುದು, ಮಹಿಳೆಯರು ಮನೆಯಲ್ಲೇ ಇರುವುದು ರೂಡಿಯಾಗಿತ್ತು. ಮುಂದೆ ಮಹಿಳೆಯರು ಸಿಕ್ಕ ಹಣ್ಣು ಹಂಪಲುಗಳ ಬೀಜಗಳನ್ನು ನೆಲದಲ್ಲಿ ಬಿತ್ತಿದಾಗ ಅದರ ಪರಿಣಾಮವಾಗಿ ಬಂದ ಫಸಲಿನಿಂದ ಕ್ರಮೇಣವಾಗಿ ಕೃಷಿ ಜಾರಿಗೆ ಬಂತು ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ ಹೀಗೆ ಕೃಷಿ ಎಂಬುದು ಮಹಿಳೆಯಿಂದ ಚಾಲ್ತಿಗೆ ಬಂತು.


2009ರ ದತ್ತಾಂಶದ ಪ್ರಕಾರ 94% ಏಕದಳ ಉತ್ಪಾದನೆಯನ್ನು ಅದರಲ್ಲಿ 1.4% ಮಸಾಲೆ, 47% ಚಹಾ, 46.84% ಹತ್ತಿ, 45.43% ಎಣ್ಣೆ ಕಾಳು, 39.13% ತರಕಾರಿ ಇವುಗಳನ್ನು ಬೆಳೆಯುವುದರಲ್ಲಿ ಮಹಿಳೆಯರು ಕೃಷಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಆದರೂ ಸಹ ಅವರು ಮಾಡುವ ಕೆಲಸವನ್ನು ಕೌಶಲ್ಯ ರಹಿತ ಕೆಲಸ ಎಂದು ಪರಿಗಣಿಸಲಾಗಿದೆ. ಅದಲ್ಲದೆ ಕೃಷಿಯಲ್ಲಿ ತೊಡಗಿರುವ ಮಹಿಳೆಯರು 52 ರಿಂದ 75% ರಷ್ಟು ಅನಕ್ಷರಸ್ಥರು. ಹೀಗಾಗಿ ಲಿಂಗವೇ ತನದ ಅಸಮಾನತೆಯಿಂದ ಮಹಿಳೆಯರು ಪುರುಷರ ವೇತನದಲ್ಲಿ 70% ಮಾತ್ರ ಗಳಿಸುತ್ತಾರೆ ಮತ್ತು ಭೂ ಹಕ್ಕು , ಪ್ರಾತಿನಿಧ್ಯದ ಸಮಸ್ಯೆ , ಸಬಲೀಕರಣದ ಕೊರತೆ ಮುಂತಾದವುಗಳನ್ನು ತಾವು ಅನುಭವಿಸುವುದರೊಂದಿಗೆ ಅವರ ಮಕ್ಕಳ ಕಡಿಮೆ ಶೈ ಕ್ಷಣಿಕ ಸಾಧನೆ ಮತ್ತು ಕುಟುಂಬದ ಆರೋಗ್ಯದಂತಹ ಋಣಾತ್ಮಕ ತೊಂದರೆಗಳಿಗೆ ಕಾರಣವಾಗುತ್ತದೆ ಮತ್ತು ಸ್ವಂತ ಭೂಮಿಯನ್ನು ಹೊಂದಿಲ್ಲ, ಭೂಮಿ ಮಾಲಿಕತ್ವದ ಪ್ರಯೋಜನವನ್ನು ಅನುಭವಿಸಿಲ್ಲ, ಅಧಿಕೃತ ದಾಖಲೆಗಳಲ್ಲಿ ಇವರನ್ನು ರೈತರೆಂದು ವರ್ಗೀಕರಿಸಿಲ್ಲ, ಕೃಷಿ ಸಬ್ಸಿಡಿಗಳಿಗೆ ಕ್ರೆಡಿಟ್ ಪಡೆಯುವುದಿಲ್ಲ, ಹೀಗಾಗಿ 2011ರಲ್ಲಿ ಎಂ.ಎಸ್.ಸ್ವಾ ಮಿನಾಥನ್ ಇವರು ರಾಜ್ಯಸಭೆಯ ಸದಸ್ಯರಾಗಿದ್ದಾಗ "ಮಹಿಳಾ ಎಂಟರ್ಟೈನ್ಮೆಂಟ್ ಬಿಲ್" ಅನ್ನು ಪ್ರಸ್ತಾಪಿಪಡಿಸಿದರು. ಇದು ಮುಂದೆ ಮಹಿಳೆಯರಿಗೆ ಮಹಿಳಾ ರೈತ ಎಂದು ಪ್ರಮಾಣ ಪತ್ರ ನೀಡುವಂತೆ ಒತ್ತಿ ಹೇಳಿತು. ನಂತರ ಇದನ್ನು ಕಿಸಾನ್ ಕ್ರೆಡಿಟ್ ಕಾರ್ಡ್ ಗಳಾಗಿ ಬಳಸಲಾಯಿತು. ಇದು ಕೃಷಿ ಚಟುವಟಿಕೆಗಳಿಗೆ ಹಣಕಾಸಿನ ಬೆಂಬಲ ಪಡೆಯಲು ಮಹಿಳೆಯರಿಗೆ ಅವಕಾಶ ನೀಡುತ್ತದೆ.


ರೈತ ಎಂದಾಕ್ಷಣ ನೆನಪಿಗೆ ಬರುವುದು ಪುರುಷ. ಆದರೆ ಮಹಿಳೆಯರು ಸಹ ಕೃಷಿಯಲ್ಲಿ ಪುರುಷರು ಮಾಡದಂತಹ ಕೆಲಸವನ್ನು ಮಾಡುತ್ತಾಳೆ. ಸಂವಿಧಾನದ 14ನೇ ವಿಧಿ ತಿಳಿಸುವಂತೆ ಸಂವಿಧಾನದ ಮುಂದೆ ಎಲ್ಲರೂ ಸಮಾನರು ಎಂಬಂತೆ ಗಂಡು ಹೆಣ್ಣು ಎಂದು ಸಮಾನವಾಗಿ ಕಾಣುವ ಬದಲು ಅವರವರ ಕೆಲಸಗಳಿಗೆ ಪ್ರೋತ್ಸಾಹಿಸುವುದು ಒಳಿತು. ಎಲ್ಲಿಯೂ ಈ ಕೆಲಸ ಗಂಡಿಗೆ ಈ ಕೆಲಸ ಹೆಣ್ಣಿಗೆ ಎಂದು ಸೀಮಿತವಾಗಿಲ್ಲ. ಪ್ರತಿಯೊಬ್ಬರು ತಮ್ಮ ತಮ್ಮ ಆಸಕ್ತಿಗನುಗುಣವಾಗಿ ನಿರ್ವ ಹಿಸುತ್ತಾರೆ. ಹೀಗಾಗಿ ಅವರವರ ಇಚ್ಛೆಗೆ ಅನುಗುಣವಾಗಿ ಪ್ರೋತ್ಸಾಹಿಸಿ ಅದರೆ ಇನ್ನೊಂದಿಷ್ಟು ಹಿಂಜರಿಯುವ ಕಥೆ ಮಾಡಬೇಡಿ, ತಾರತಮ್ಯ ಮಾಡಬೇಡಿ , ಮಹಿಳೆಯರಿಗೆ ಇರುವ ಪ್ರತಿಯೊಂದು ಸಾಮಾನ್ಯ ಹಕ್ಕನ್ನು ಗೌರವಿಸಿ. ಆವಾಗ ಮಾತ್ರ ಸಮಾನತೆ ಎನ್ನುವ ಪದಕ್ಕೆ ಒಂದು ಅರ್ಥ ಬರುತ್ತದೆ. ಇಲ್ಲ ಎಲ್ಲವೂ ವ್ಯರ್ಥವಾಗುತ್ತದೆ.


ಪ್ರಿಯದರ್ಶಿನಿ. ಆರ್. ಮುಜಗೊಂಡ

ಮೂಡುಬಿದಿರೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top