ಫೆ.20-21: ಶಿವಮೊಗ್ಗದಲ್ಲಿ ರಾಷ್ಟ್ರೀಯ ಚಿಣ್ಣರ 2ನೇ ಹಬ್ಬ

Upayuktha
0

66ನೇ ಸಾಂಸ್ಕೃತಿಕ ಪ್ರತಿಭೋತ್ಸವ | ರಾಷ್ಟ್ರೀಯ ನೃತ್ಯ ಕಲಾ ಮೇಳ - 6

ಮಲೆನಾಡು ಕರ್ನಾಟಕ ಪ್ರಾದೇಶಿಕ ಸಾಂಸ್ಕೃತಿಕ ಕಲಾ ಉತ್ಸವ ಆಯೋಜನೆ


ಶಿವಮೊಗ್ಗ: ಮಲೆನಾಡು ಕರ್ನಾಟಕ ಪ್ರಾದೇಶಿಕ ಸಾಂಸ್ಕೃತಿಕ ಕಲಾ ಉತ್ಸವದ ವತಿಯಿಂದ ಶಿವಮೊಗ್ಗದ ಕರ್ನಾಟಕದ ಸಂಘದ ಸಭಾಂಗಣದಲ್ಲಿ ರಾಷ್ಟ್ರೀಯ ಚಿಣ್ಣರ 2ನೇ ಹಬ್ಬ, ರಾಷ್ಟ್ರೀಯ ನೃತ್ಯ ಕಲಾ ಮೇಳ- 6 ಮತ್ತು 66ನೇ ಸಾಂಸ್ಕೃತಿಕ ಪ್ರತಿಭೋತ್ಸವವನ್ನು ಫೆ.20 ಮತ್ತು 21ರಂದು ಆಯೋಜಿಸಲಾಗಿದೆ.


ಕರ್ನಾಟಕದ ಸಾಂಸ್ಕೃತಿಕ ಪರಂಪರೆಯಲ್ಲಿ ಸಂಸ್ಥೆ ತನ್ನ 31 ವರ್ಷಗಳನ್ನು ಪೂರೈಸಿದೆ. ನಿರಂತರವಾಗಿ ಸಾಮಾಜಿಕ ಹಾಗೂ ಸಾಂಸ್ಕೃತಿಕ ಲೋಕದಲ್ಲಿ ಆಂದೋಲನವನ್ನೇ ರಾಜ್ಯದಲ್ಲಿ ಮಾಡಿದೆ. ರಾಷ್ಟ್ರಮಟ್ಟದಲ್ಲೂ ಪ್ರತಿಭೆಗಳನ್ನು ಗುರುತಿಸಿದೆ. ಸಂಸ್ಥೆಯ ನಿರಂತರವಾದ ಸಾಂಸ್ಕೃತಿಕ ಪಯಣದಲ್ಲಿ, 65 ಸಾಂಸ್ಕೃತಿಕ ಸಮ್ಮೇಳನಗಳ ಮೂಲಕ, ನಾಡಿನ ಮೂಲೆ ಮೂಲೆಗಳಲ್ಲಿರುವ 1 ಲಕ್ಷ ಪ್ರತಿಭೆಗಳನ್ನು ಮತ್ತು ಸಾಧಕರನ್ನು ಗುರುತಿಸಿ, ವೇದಿಕೆ ನೀಡಿ ರಾಜಧಾನಿಯಲ್ಲಿ ಗೌರವಿಸಿದೆ. 


ಫೆ.20ರಂದು ಬೆಳಿಗ್ಗೆ 9.30ಕ್ಕೆ ಉತ್ಸವ ಮತ್ತು ಇತರೆ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ. ಉದ್ಘಾಟನೆಯಲ್ಲಿ ಬೆಳಗಾವಿ ಜಿಲ್ಲೆ ಹಿರೇಮಠದ ಡಾ. ಕಲ್ಮೇಶ್ವರ ಸ್ವಾಮಿಗಳು ದಿವ್ಯಸಾನಿಧ್ಯ ವಹಿಸಲಿದ್ದಾರೆ. ಪತ್ರಕರ್ತ ಬಿ. ಗಣಪತಿರವರು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಉಡುಪಿಯ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಪೀಠಾಧ್ಯಕ್ಷರಾದ ಶ್ರೀ ರಮಾನಂದ ಗುರೂಜಿ ಇರಲಿದ್ದಾರೆ.


ನಂತರ ಕೊಪ್ಪಳ ಜಿಲ್ಲೆಯ ವ್ಯಂಗ್ಯ ಚಿತ್ರಕಲಾವಿದ ಬದರಿ ನಾರಾಯಣ ಪುರೋಹಿತ್ ರವರ ವ್ಯಂಗ್ಯ ಚಿತ್ರ ಪ್ರದರ್ಶನ ಮತ್ತು ಬೆಂಗಳೂರಿನ ಹವ್ಯಾಸಿ ಛಾಯಾಗ್ರಾಹಕ ಸುಹಾಸ್ ಸುರ್ವೆರವರ ಅಪರೂಪ ಛಾಯಾಚಿತ್ರ ಪ್ರದರ್ಶನ ಎರಡು ದಿನಗಳ ಕಾಲ ನಡೆಯಲಿದೆ.


ಬೆಳಿಗ್ಗೆ 10 ಗಂಟೆಗೆ ರಾಮಚಂದ್ರ ದೇವ ರಚನೆ, ಎಂ.ಎನ್. ಸುರೇಶ ನಿರ್ದೇಶನದಲ್ಲಿ ಸಾಫಲ್ಯ ರಂಗ ತಂಡ, ಬೆಂಗಳೂರು ಕಲಾವಿದರಿಂದ “ಕುದುರೆ ಬಂತು ಕುದುರೆ” ನಾಟಕ ಪ್ರದರ್ಶನ ನಡೆಯಲಿದೆ.


ನಂತರದಲ್ಲಿ “ಕರ್ನಾಟಕದ ಆರ್ಯಭಟ” ಬಸವರಾಜ್ ಉಮರಾಣಿಯವರೊಂದಿಗೆ ಸಂವಾದದ ಜೊತೆಯಲ್ಲಿ ಉಪನ್ಯಾಸ ಕಾರ್ಯಕ್ರಮದಲ್ಲಿ ಹಾಸನ ಜಿಲ್ಲೆಯ ಸಾಹಿತಿ ಗೊರೂರು ಅನಂತರಾಜು, ಶಿವಮೊಗ್ಗ ಜಿಲ್ಲೆಯ ಸಾಹಿತಿ ಎಂ. ಸತ್ಯನಾರಾಯಣ, ಚಿಕ್ಕಮಗಳೂರು ಜಿಲ್ಲೆಯ ಲೇಖಕಿ ಡಿ. ನಳಿನಿ, ಹಾಸನ ಜಿಲ್ಲೆಯ ಪತ್ರಕರ್ತೆ ಗೊರೂರು ಪಂಕಜಾ ವಿಷಯ ಮಂಡಿಸಲಿದ್ದಾರೆ.


ಮಧ್ಯಾಹ್ನ 3 ಗಂಟೆಯ ನಂತರ ವಿವಿಧ ಜಿಲ್ಲೆಯ ಕವಿಗಳು “ಕವಿಗಳ ಕಣ್ಣಲ್ಲಿ ಮಲೆನಾಡು ಕರ್ನಾಟಕ” ಕವನ ವಾಚಿಸಲಿದ್ದಾರೆ. ಈ ಸಂದರ್ಭದಲ್ಲಿ ವಿವಿಧ ನೃತ್ಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ.


ಸಂಜೆ 7.00 ಗಂಟೆಗೆ ಪೂರ್ಣಚಂದ್ರ ತೇಜಸ್ವಿ ರಚನೆ ಮತ್ತು ಚಲನಚಿತ್ರ ನಟ ಎಂ.ಎನ್. ಸುರೇಶ ನಿರ್ದೇಶನದಲ್ಲಿ ಸಾಫಲ್ಯ ರಂಗ ತಂಡದಿಂದ “ಕೃಷ್ಣೇಗೌಡರ ಆನೆ” ನಾಟಕ ಪ್ರದರ್ಶನ ನಡೆಯಲಿದೆ.


21-02-2023 ಮಂಗಳವಾರ ಬೆಳಿಗ್ಗೆ 9.30 ರಿಂದ ವಿವಿಧ ಜಿಲ್ಲೆಯ ಕಲಾವಿದರು, ನೃತ್ಯಪಟುಗಳು, ಗಾಯಕರು, ಚಿತ್ರಕಲಾ ಪ್ರದರ್ಶಕರಿಂದ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ.


ಹಾವೇರಿ ಮತ್ತು ಧಾರವಾಡ ಜಿಲ್ಲೆಯ 5 ಕಲಾವಿದ ಗಾಯಕರಿಂದ “ಸುಗಮ ಸಂಗೀತ” ಕಾರ್ಯಕ್ರಮ, ಕೊಪ್ಪಳ ಮತ್ತು ಶಿವಮೊಗ್ಗ 4 ಕಲಾವಿದ ಗಾಯಕರಿಂದ ತತ್ವಪದ, ಲಂಬಾಣಿ ಮತ್ತು ಜನಪದ ಗೀತೆಗಳ “ಜನಪದ ಝೇಂಕಾರ” ಗಾಯನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.


ಇದೇ ಸಂದರ್ಭದಲ್ಲಿ ರಾಜ್ಯ ವಿಶೇಷ ಬಹುಮುಖ ಪ್ರತಿಭೆಗಳಿಂದ ಜ್ಞಾಪಕ ಶಕ್ತಿ, ಪುಠಾಣಿಗಳ ಭಾಷಣ, ಮಲೆನಾಡು ಪ್ರತಿಭೆಗಳ ಯಕ್ಷನೃತ್ಯ, ಚಲನಚಿತ್ರ ನೃತ್ಯ ಪ್ರದರ್ಶನ ಮತ್ತು “ಹಿಂದುಸ್ಥಾನಿ ಗಾಯನ” ಕಾರ್ಯಕ್ರಮಗಳು ಜರುಗಲಿವೆ. ವಿಶೇಷವಾಗಿ ಕನ್ನಡ ಕೋಗಿಲೆ ಖ್ಯಾತಿ ಅರ್ಜುನ್ ಇಟಗಿಯಿಂದ “ಗಾನಸುಧೆ” ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.


ವಿಚಾರ ಸಂಕಿರಣ:

ಸಂಜೆ 5ಕ್ಕೆ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಕುರಿತು “ಮಲೆನಾಡು ಕರ್ನಾಟಕ ಪ್ರಾದೇಶಿಕ ಅಸಮತೋಲನ” ಕುರಿತು ವಿಚಾರ ಸಂಕಿರಣದಲ್ಲಿ ನಡೆಯಲಿದೆ.

ವಿಚಾರ ಸಂಕಿರಣದಲ್ಲಿ ಶಿವಮೊಗ್ಗ ರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್. ಸುಂದರಾಜ್ ಅಧ್ಯಕ್ಷತೆ ವಹಿಸಲಿದ್ದು, ಹಾಸನ ಜಿಲ್ಲೆ ಕುರಿತು ಪತ್ರರ್ತ ಉದಯ ರವಿ, ಚಿಕ್ಕಮಗಳೂರು ಜಿಲ್ಲೆ ಕುರಿತು ಸಾಹಿತಿ ಮಂಜುನಾಥ ಬೆಳವಾಡಿ, ಶಿವಮೊಗ್ಗ ಜಿಲ್ಲೆ ಕುರಿತು ಶಿಕ್ಷಣ ತಜ್ಞ ಪ್ರೊ. ಸತ್ಯನಾರಾಯಣ, ಸಮಗ್ರ ಮಲೆನಾಡು ಕರ್ನಾಟಕ ಕುರಿತು ಉಪನ್ಯಾಸಕಿ ಶುಭಾ ಮರವಂತೆ ವಿಷಯ ಮಂಡಿಸಲಿದ್ದಾರೆ. ಮಲೆನಾಡು ಕರ್ನಾಟಕದ ಪರಿಕಲ್ಪನೆ ಮತ್ತು ಆಶಯ ನುಡಿಯನ್ನು ಪತ್ರಕರ್ತ ರಮೇಶ ಸುರ್ವೆ ಜವಾಬ್ದಾರಿಯನ್ನು ಹೊತ್ತಿದ್ದಾರೆ.


ಅತಿಥಿಗಳಾಗಿ ದಾವಣಗೆರೆ ಜಿಲ್ಲೆಯ ವಿರಕ್ತಮಠ ಶ್ರೀ ಗುರುಬಸವ ಮಹಾಸ್ವಾಮಿಗಳು ದಿವ್ಯಸಾನಿಧ್ಯ ವಹಿಸಿಲಿದ್ದು, ಹಿರೇಮಠದ ಡಾ. ಕಲ್ಮೇಶ್ವರ ಮಹಾಸ್ವಾಮಿಗಳು ಆಶಿರ್ವಚನ ನೀಡಲಿದ್ದಾರೆ. ಮಾಜಿ ಸಚಿವ ಕಿಮ್ಮನೆ ರತ್ನಾಕರ್ ವಿಚಾರ ಸಂಕಿರಣದ ಉದ್ಘಾಟನೆ ಮಾಡಲಿದ್ದು, ಯಾದಗಿರಿಯ ಜಿಲ್ಲೆಯ ಸಾಹಿತಿ ಸಿದ್ಧರಾಮ ಹೊನ್ಕಲ್ ಅಧ್ಯಕ್ಷತೆ ವಹಿಸಿಲಿದ್ದಾರೆ.


ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಡಾ. ನೆ.ಲ. ನರೇಂದ್ರಬಾಬು, ಚಲನಚಿತ್ರ ಕಲಾವಿದರಾದ ಗಣೇಶರಾವ್ ಕೇಸರ್ಕರ್, ಎಂ.ಎನ್. ಸುರೇಶ್, ಶ್ರೀಮತಿ ಮೀನಾ, ಶಿವಮೊಗ್ಗದ ಪ್ರಗತಿಪರ ಉದ್ಯಮಿ ಪ್ರಕಾಶ್ ಜಿ.ಆರ್. ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.


ಈ ಸಂದರ್ಭದಲ್ಲಿ ಬೆಳಗಾವಿಯ ಶಾಂತಲಾ ಉದೋಷಿ, ಬೀದರಿನ ಸವಿತಾ ಘೋರ್ಪಡೆ ವಿವಿಧ ರೀತಿ ನೃತ್ಯ ಪ್ರದರ್ಶನ ನೀಡುವುದೇ ಈ ಉತ್ಸವದ ಹೈಲೈಟ್ಸ್ ಎಂದು, ಸಂಸ್ಥೆಯ ಸ್ಥಾಪಕ ರಮೇಶ ಸುರ್ವೆ ತಿಳಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top