ಮಂಗಳೂರು ವಿವಿ: ರಾಷ್ಟ್ರಮಟ್ಟದ ತರಬೇತಿ ಕಾರ್ಯಕ್ರಮ ಸಮಾರೋಪ

Upayuktha
0

ಮಂಗಳೂರು: ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್‌ಟಿ) ಯ ಪ್ರಾಯೋಜಕತ್ವದಲ್ಲಿ ಹಾಗೂ ಎನ್‌.ಐ.ಟಿ ವಾರಂಗಲ್‌ ಆಶ್ರಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ DST PURSE ಹಾಗೂ RUSA NMR ಉಪಕರಣ ಕೇಂದ್ರಗಳು ಜಂಟಿಯಾಗಿ ಆಯೋಜಿಸಿದ್ದ ಏಳು ದಿನಗಳ ರಾಷ್ಟ್ರಮಟ್ಟದ ತರಬೇತಿ ಕಾರ್ಯಕ್ರಮ ಮಂಗಳವಾರ ಸಂಪನ್ನವಾಯಿತು.


ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರುಗಳನ್ನು ಉದ್ದೇಶಿಸಿ ಮಾತನಾಡಿದ ಸಮಾರೋಪ ಸಮಾರಂಭದ ಮುಖ್ಯ ಅಥಿತಿ ಯೆನಪೋಯಾ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕ, ವಿಜ್ಞಾನಿ ಪ್ರೊ. ಕೆ. ಆರ್.‌ಚಂದ್ರಶೇಖರ್‌, ಡಿಎಸ್‌ಟಿ ಸ್ತುತಿ ಕಾರ್ಯಾಗಾರದ ಮೂಲಕ ದೇಶದ ವಿವಿದ ಸಂಸ್ಥೆಗಳ ಸಂಶೋಧನಾ ವಿದ್ಯಾರ್ಥಿಗಳು ಒಟ್ಟುಗೂಡುವುದರಿಂದ ಬಹುಶಿಸ್ತೀಯ ವೈಜ್ಞಾನಿಕ ಸಂಶೋಧನೆ ಗಣನೀಯವಾಗಿ ಪ್ರಗತಿಹೊಂದುತ್ತದೆ ಎಂದು ಅಭಿಪ್ರಾಯಪಟ್ಟರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೊ. ಕೆ. ಭಾಸ್ಕರ ಶೆಣೈ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸಂಶೋಧನಾ ವಿದ್ಯಾರ್ಥಿಗಳಿಗೆ ಶುಭಕೋರಿ, ಕಾರ್ಯಾಗಾರದ ಮಾಹಿತಿಗಳನ್ನು ತಮ್ಮ ಮುಂದಿನ ಸಂಶೋಧನೆಯಲ್ಲಿ ಅಳವಡಿಸಿಕೊಂಡು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಲಭ್ಯವಿರುವ ಆಧುನಿಕ ಉಪಕರಣಗಳನ್ನು ಸದುಪಯೋಗಪಡಿಸಿಕೊಳ್ಳಲು ಕರೆನೀಡಿದರು.


ದೇಶದ ವಿವಿದ ರಾಜ್ಯಗಳಿಂದ ಆಗಮಿಸಿದ ಆಯ್ದ ಸಂಶೋಧಕರು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿದ್ದರು. ಸಮಾರೋಪ ಸಮಾರಂಭದಲ್ಲಿ ಡಿ.ಎಸ್‌.ಟಿ ಪರ್ಸ್‌ನ ಉಪ-ಸಂಯೋಜಕರು ಹಾಗೂ ತರಬೇತಿ ಕಾರ್ಯಕ್ರಮದ ಸಹ-ಸಂಘಟಕ ಪ್ರೊ. ಬೋಜ ಪೂಜಾರಿ ಸಭಿಕರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ತರಬೇತಿ ಕಾರ್ಯಕ್ರಮದ ಸಂಘಟಕಿ ಪ್ರೊ. ಬಿ. ವಿಶಾಲಾಕ್ಷಿ ವಂದಿಸಿದರು. ರಸಾಯನ ಶಾಸ್ತೃ ವಿಭಾಗದ ಅತಿಥಿ ಉಪನ್ಯಾಸಕಿ ಡಾ. ಶಬೀನಾ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top