ಮೈಸೂರು: ಭಾರೀ ಸಂಚಲನ ಸೃಷ್ಠಿಸಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರೌಡಿ ಶೀಟರ್ ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿಯನ್ನು 11 ದಿನಗಳ ಬಳಿಕ ಖಾಕಿ ಪಡೆ ಬಲೆಗೆ ಕೆಡವಿದೆ.
2ನೆಯ ಪತ್ನಿಯ ದೂರು ಆಧರಿಸಿ ರವಿ ಬಂಧನಕ್ಕೆ ಬಲೆ ಬೀಸಿದ ಮೈಸೂರು ಪೊಲೀಸರು ಗುಜರಾತ್'ನಲ್ಲಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಖಚಿತ ಮಾಹಿತಿ ಆಧರಿಸಿ, ಗುಜರಾತ್ ಪೊಲೀಸರ ನೆರವಿನೊಂದಿಗೆ ರವಿಯನ್ನು ಬಂಧಿಸುವಲ್ಲಿ ಮೈಸೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ರವಿ ಬಿಜೆಪಿ ಹಾಗೂ ಪ್ರಸ್ತುತ ರಾಜ್ಯ ಸರ್ಕಾರದಲ್ಲಿ ಪ್ರಭಾವ ಹೊಂದಿದ್ದ ಎಂಬ ಆರೋಪವನ್ನು ಕಾಂಗ್ರೆಸ್ ಮಾಡಿತ್ತು. ಈ ಹಿನ್ನೆಲೆಯಲ್ಲಿ ಈತನನ್ನು ಹೇಗಾದರೂ ಮಾಡಿ ಬಲೆಗೆ ಕೆಡವಲೇ ಬೇಕು ಎಂದು ಖುದ್ಧು ಸಿಎಂ ಸೂಚನೆ ನೀಡಿದ್ದರು ಎಂದು ಹೇಳಲಾಗಿದೆ.
ಸ್ಯಾಂಟ್ರೋ ರವಿ ಬಂಧನಕ್ಕೆ ಸಂಬಂಧಿಸಿದಂತೆ ಎಡಿಜಿಪಿ ಅಲೋಕ್ ಕುಮಾರ್ ಅವರು ಪತ್ರಿಕಾಗೋಷ್ಠಿ ನಡೆಸಲಿದ್ದು, ಸಂಫೂರ್ಣ ಮಾಹಿತಿ ನೀಡಲಿದ್ದಾರೆ.
ಹೇಗಿತ್ತು ಕಾರ್ಯಾಚರಣೆ?
*ರವಿ ಜೊತೆ ಸಂಪರ್ಕವಿದ್ದರವರ ವಿಚಾರಣೆ
*ಕಾರಿನಲ್ಲೇ ಎಸ್ಕೇಪ್ ಆಗಿದ್ದ ರವಿಯ ಜಾಲಕ್ಕೆ ಬಲೆ
*ರವಿ ಆಪ್ತರಿಂದ ಮಾಹಿತಿ ಸಂಗ್ರಹ
*ಸಂಪರ್ಕಿತರ ಮಾಹಿತಿ ಆಧರಿಸಿ ಬಲೆ
*ರವಿ ಬಂಧನಕ್ಕೆ ಆರು ಹಿರಿಯ ಅಧಿಕಾರಿಗಳ ನೇತೃತ್ವದ ತಂಡ
*ಗುಜರಾತ್ ಪೊಲೀಸರನ್ನು ಸಂಪರ್ಕಿಸಿ, ಮಾಹಿತಿ ಸಂಗ್ರಹ
*ಗುಜರಾತ್ ಪೊಲೀಸರ ನೆರವಿನೊಂದಿಗೆ ಬಂಧನ
*ರವಿಯನ್ನು ಬೆಂಗಳೂರಿಗೆ ಕರೆತರುತ್ತಿರುವ ಪೊಲೀಸರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ