
ಕೊಡಗು: ಜಿಲ್ಲೆಯಾದ್ಯಂತ ತುಳುನಾಡಿನಲ್ಲಿ ಆರಾಧಿಸುವ ಬಹಳಷ್ಟು ದೈವಸ್ಥಾನಗಳಿದ್ದು, ಮತ್ತು ದೈವ ಆರಾಧಕರು ದೈವ ನರ್ತಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಇತ್ತೀಚಿನ ದಿನದಲ್ಲಿ ದೈವ ಆರಾಧನೆಯನ್ನು ಮತ್ತು ದೈವವನ್ನು ಅಪಮಾನ ಅಪಹಾಸ್ಯ ಮಾಡುವ ಘಟನೆಗಳು ರಾಜ್ಯದ ಅನೇಕ ಕಡೆಯಲ್ಲಿ ನಡೆಯುತ್ತಿದ್ದು ಇಂತಹ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳುವ ಬಗ್ಗೆಯೂ ಮತ್ತು ಜಿಲ್ಲೆಯ ದೈವಸ್ಥಾನದ ದಾಖಲಿಕರಣ, ದೈವಆರಾಧಕರಿಗೆ ಮಾಸಾಶನ, ದೈವ ಆರಾಧಕರ ನರ್ತಕರ ಸಂಘ ರಚಿಸುವ ಬಗ್ಗೆಯು ಸೇರಿದಂತೆ ಇನ್ನು ಅನೇಕ ವಿಚಾರದ ಬಗೆಗೆ ಸಭೆಯನ್ನು ಇಂದು ಮಡಿಕೇರಿಯ ಭಾಲಭವನ ಸಭಾಂಗಣದಲ್ಲಿ ನಡೆಯಿತು.
ಜಿಲ್ಲೆಯ 50 ಕ್ಕು ಹೆಚ್ಚಿನ ದೈವಸ್ಥಾನದ ಆರಾಧಕರು ಸೇರಿದಂತೆ ದೈವದ ಸೇವೆ ಮಾಡುವವರು ಪಾಲ್ಗೊಂಡಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ