ಗ್ರಾಮೀಣ ಸಂಸ್ಕೃತಿ, ಸಂಪ್ರದಾಯಗಳ ಉತ್ತೇಜನಕ್ಕೆ ಕ್ರಮ
ಬೆಂಗಳೂರು: ಯೂನಿವರ್ಸಲ್ ಗ್ರೀನ್ ಸ್ಕೂಲ್‌ನಲ್ಲಿ ಅಂತರ್ ಗ್ರಾಮ ಕ್ರೀಡಾಕೂಟವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಗ್ರಾಮೀಣ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಉತ್ತೇಜಿಸಲು ಈ ಕಾರ್ಯಕ್ರಮವನ್ನು ಕ್ಯಾಂಪಸ್‌ನಲ್ಲಿ ಆಯೋಜಿಸಲಾಗಿತ್ತು.
ಔಪಚಾರಿಕ ಕಾರ್ಯಕ್ರಮವನ್ನು ಸಂತೋಷ್ ಶೆಟ್ಟಿ ಜೆ ಉದ್ಘಾಟಿಸಿದರು, ವಿಶ್ವಾಸ ಪುಟ್ಟಸ್ವಾಮಿ, ಕೇಶವ ನೀರಾ ಮತ್ತು ಸುಚಿತ್ರಾ ವಿ ಶೆಟ್ಟಿ ಅವರು ದೀಪ ಬೆಳಗಿಸುವುದರೊಂದಿಗೆ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಯೂನಿವರ್ಸಲ್ ಗ್ರೀನ್ ಶಾಲೆಯ ಮಕ್ಕಳು ಹಗ್ಗ ಜಗ್ಗಾಟ ಆಡುವ ಮೂಲಕ ಕ್ರೀಡೆಯನ್ನು ಉದ್ಘಾಟಿಸಿದರು.
ಅದರ ನಂತರ ಹಗ್ಗ ಜಗ್ಗಾಟ , ಲಗೋರಿ, ಗೋಣಿಚೀಲ, ಪುರುಷರು ಮತ್ತು ಮಹಿಳೆಯರಿಗಾಗಿ ಮಡಕೆ ಒಡೆಯುವುದು ಸೇರಿದಂತೆ ಹಲವು ಕ್ರೀಡೆಗಳನ್ನು ಆಡಲಾಯಿತು. ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆಯನ್ನೂ ಏರ್ಪಡಿಸಲಾಗಿತ್ತು. ಸುಮಾರು 35 ಗ್ರಾಮಗಳು ಭಾಗವಹಿಸಿದ್ದು, 400 ಕ್ಕೂ ಹೆಚ್ಚು ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 100ಕ್ಕೂ ಹೆಚ್ಚು ಮಂದಿ ಪಾರಿತೋಷಕಗಳನ್ನು ಪಡೆದುಕೊಂಡರು. ಸಂಜೆ 6:00 ಗಂಟೆಗೆ ಸಮಾರೋಪ ಸಮಾರಂಭ ನಡೆಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ