ಉಜಿರೆ ಎಸ್.ಡಿ.ಎಂ ಕಾಲೇಜಿನ 208 ವಿದ್ಯಾರ್ಥಿಗಳು ಇನ್ಫೋಸಿಸ್‍ಗೆ ಆಯ್ಕೆ

Chandrashekhara Kulamarva
0



ಉಜಿರೆ: ಬೆಂಗಳೂರಿನ ಇನ್ಫೋಸಿಸ್ ಬಿಪಿಎಂ ಲಿಮಿಟೆಡ್ ಕಂಪೆನಿಯ ಕ್ಯಾಂಪಸ್ ನೇಮಕಾತಿಯಲ್ಲಿ ಉಜಿರೆಯ ಎಸ್.ಡಿ.ಎಂ ಪದವಿ ಕಾಲೇಜಿನ ವಾಣಿಜ್ಯ ಶಾಸ್ತ್ರ ಮತ್ತು ವ್ಯವಹಾರ ಅಧ್ಯಯನ ವಿಭಾಗದ 208 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.


ಕಾಲೇಜಿನ ರೋಟರಿ ಕರಿಯರ್ ಗೈಡೆನ್ಸ್ ಮತ್ತು ಪ್ಲೇಸ್‍ಮೆಂಟ್ ಸೆಲ್ ವಿಭಾಗದಿಂದ ಗುರುವಾರ ನೇಮಕಾತಿ ಪ್ರಕ್ರಿಯೆ ನಡೆದಿದೆ. `ಬ್ಯುಸಿನೆಸ್ ಪ್ರೋಸೆಸ್ ಎಕ್ಸಿಕ್ಯುಟಿವ್' ಹುದ್ದೆಗಾಗಿ ಕ್ಯಾಂಪಸ್ ನೇಮಕಾತಿ ನಡೆದಿದ್ದು, ಬಿ.ಕಾಮ್ ಮತ್ತು ಬಿ.ಬಿ.ಎ ವಿಭಾಗದ ಒಟ್ಟೂ 374 ವಿದ್ಯಾರ್ಥಿಗಳು ಭಾಗವಹಿಸಿದ್ದರು. 


ಇನ್ಫೋಸಿಸ್ ಬಿಪಿಎಂ ಲಿಮಿಟೆಡ್‍ನ ನೇಮಕಾತಿ ಅಧಿಕಾರಿ ಅನುಷಾ ಮತ್ತು ಮಾನವ ಸಂಪನ್ಮೂಲ ಅಧಿಕಾರಿಗಳಾದ ನಿಖಿತಾ ಮತ್ತು ನಿಧಿ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.


ಕಾಲೇಜಿನ ಕರಿಯರ್ ಗೈಡೆನ್ಸ್ ಮತ್ತು ಪ್ಲೇಸ್‍ಮೆಂಟ್ ಸೆಲ್ ವಿಭಾಗದ ಡಾ. ನಾಗರಾಜ್ ಪೂಜಾರಿ, ಹರೀಶ್ ಶೆಟ್ಟಿ ಮತ್ತು ಸೌಮ್ಯ ಕುಮಾರಿ ಇವರ ನೇತೃತ್ವದಲ್ಲಿ ಕ್ಯಾಂಪಸ್ ನೇಮಕಾತಿ ನಡೆದಿದೆ. ಕಾಲೇಜಿನ ಆಡಳಿತ ವರ್ಗವು ವಿದ್ಯಾರ್ಥಿಗಳ ಮತ್ತು ಶಿಕ್ಷಕ ವೃಂದದ ಈ ಸಾಧನೆಗೆ ಹರ್ಷ ವ್ಯಕ್ತಪಡಿಸಿದೆ.  


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


Post a Comment

0 Comments
Post a Comment (0)
To Top