ಉಜಿರೆಯ ಎಸ್.ಡಿ.ಎಂ ಕಾಲೇಜ್ : ಸ್ಟುಡೆಂಟ್ ಫ್ಯಾಕಲ್ಟಿ ಓರಿಯೆಂಟೇಷನ್ ಕಾರ್ಯಕ್ರಮ

Upayuktha
0

‘ಸಂವಹನ ಕೌಶಲ್ಯದಿಂದ ಪರಿಣಾಮಕಾರಿ ಬೋಧನೆ’


ಉಜಿರೆ :
ಸಂವಹನ ತಂತ್ರಗಳ ವಿಸ್ತೃತ ಅರಿವಿನಿಂದ ಮೌಲಿಕ ಜ್ಞಾನವನ್ನು ದಾಟಿಸುವ ಪ್ರಭಾವೀ ಬೋಧನಾ ಕೌಶಲ್ಯವನ್ನು ರೂಢಿಸಿಕೊಳ್ಳಬಹುದು ಎಂದು ಉಜಿರೆಯ ಎಸ್.ಡಿ.ಎಂ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ನೆಫೀಸತ್ ಪಿ ಹೇಳಿದರು.


ಉಜಿರೆ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ವಿವಿಧ ವಿಭಾಗಗಳ ಸ್ಟೂಡೆಂಟ್ ಫ್ಯಾಕಲ್ಟಿಗಳಿಗಾಗಿ ಶನಿವಾರ ಏರ್ಪಡಿಸಲಾಗಿದ್ದ ಓರಿಯಂಟೇಶನ್ ಕಾರ‍್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು. 


ಬೋಧನಾ ವೃತ್ತಿರಂಗವನ್ನು ಪ್ರವೇಶಿಸಲಿಚ್ಛಿಸುವವರು ವ್ಯವಸ್ಥಿತ ಜೀವನಕ್ರಮವನ್ನು ಅಳವಡಿಸಿಕೊಳ್ಳಬೇಕು. ಸ್ಟುಡೆಂಟ್ ಫ್ಯಾಕಲ್ಟಿಯಾಗಿ ಆಯ್ಕೆಯಾಗಿರುವವರು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಶಿಸ್ತುಬದ್ಧ ಉಡುಗೆ ಮತ್ತು ಗಂಭೀರ ನಡೆಯು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ. ಇದರೊಂದಿಗೆ ಪೂರ್ವಸಿದ್ಧತೆಯ ವ್ಯವಸ್ಥಿತ ಯೋಜನೆ ಇದ್ದಾಗ ಬೋಧನೆ ಪರಿಣಾಮಕಾರಿಯಾಗುತ್ತದೆ. ತರಗತಿ ನಿರ್ವಹಿಸುವಾಗ ಸ್ಪಷ್ಟ ನಿಲುವುಗಳೊಂದಿಗೆ ಮಾತನಾಡಲು ಸಾಧ್ಯವಾಗುತ್ತದೆ ಎಂದರು.


ಬೋಧನೆಗೆ ಮೀಸಲಾದ ಅವಧಿಯನ್ನು ರಚನಾತ್ಮಕವಾಗಿ ಬಳಸಿಕೊಳ್ಳಬೇಕು. ತರಗತಿ ನಿರ್ವಹಿಸುವ ಮುನ್ನ ಬೋಧನಾ ವಿಷಯಕ್ಕೆ ಸಂಬಂಧಿಸಿದಂತೆ ಯೋಜಿತ ಟಿಪ್ಪಣಿಗಳನ್ನು ಸಿದ್ಧಪಡಿಸಿಕೊಳ್ಳಬೇಕು. ಅದರ ಆಧಾರದ ಮೇಲೆ ಬೋಧನೆಯ ಅವಧಿಯನ್ನು ಯಶಸ್ವಿಯಾಗಿ ನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.


ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಕೋಕರಿಕ್ಯೂಲರ್ ಸಮಿತಿಯ ಸಂಯೋಜಕಿ ಡಾ.ಅಕ್ಷತಾ ಕೆ, ರಸಾಯನ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸುಜಯ್ ಎಮ್ ಎಮ್ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ



إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top