
ಉಡುಪಿ: ತೆಂಕನಿಡಿಯೂರಿನ ಶ್ರೀ ಕಾಳಿಕಾಂಬಾ ಭಜನಾ ಸಂಘದ ವತಿಯಿಂದ ಜನವರಿ 15. 2023, ಭಾನುವಾರ ಮಕರ ಸಂಕ್ರಾಂತಿ ವಿಶೇಷ ಕಾರ್ಯಕ್ರಮವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಉಡುಪಿ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಸ್ಪರ್ಧಾ ವಿವರಗಳು ಈ ಕೆಳಗಿನಂತಿವೆ.
ಉಡುಪಿ ಜಿಲ್ಲೆಯ ಹಿರಿಯ ಪ್ರಾಥಮಿಕ ಶಾಲೆಯ 6 ಮತ್ತು 7ನೇ ತರಗತಿಯ ವಿದ್ಯಾರ್ಥಿಗಳಿಗಾಗಿ
• ಭಕ್ತಿಗೀತೆ ಸ್ಪರ್ಧೆ (ತಲಪಾಡಿ ಸರಳಾದೇವಿ ದತ್ತಿನಿಧಿ ಪ್ರಾಯೋಜಿತ)
ಪ್ರಾಯೋಜಕರು: ಶ್ರೀಮತಿ ಟಿ.ಸರಳಾದೇವಿ, ತಲಪಾಡಿ, ಮಂಗಳೂರು
• ಚಿತ್ರಕಲಾ ಸ್ಪರ್ಧೆ (ಹೊಯಿಗೆತೋಟ ಲಕ್ಷ್ಮಣ ಆಚಾರ್ಯ ದತ್ತಿನಿಧಿ ಪ್ರಾಯೋಜಿತ)
ಪ್ರಾಯೋಜಕರು: ಶ್ರೀ ಪಿ.ಎನ್. ಆಚಾರ್ಯ, ಮಣಿಪಾಲ
ಉಡುಪಿ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ
• ರಸಪ್ರಶ್ನೆ ಸ್ಪರ್ಧೆ (ಬೈಕಾಡಿ ಶಿವಯ್ಯ ಆಚಾರ್ಯ ದತ್ತಿನಿಧಿ ಪ್ರಾಯೋಜಿತ)
ಪ್ರಾಯೋಜಕರು: ಶ್ರೀ ಬೈಕಾಡಿ ಜನಾರ್ದನ ಆಚಾರ್, ಮಂಗಳೂರು
• ಭಾವಗಾನ ಸ್ಪರ್ಧೆ (ಕುಂಜಿಬೆಟ್ಟು ಜಲಜ ಸೋಮಯ್ಯಾಚಾರ್ಯ ದತ್ತಿನಿಧಿ ಪ್ರಾಯೋಜಿತ)
ಪ್ರಾಯೋಜಕರು: ಶ್ರೀಮತಿ ರತ್ನಾವತಿ ಜೆ. ಬೈಕಾಡಿ, ಮಂಗಳೂರು
ಕಾಲೇಜು ವಿದ್ಯಾರ್ಥಿಗಳಿಗಾಗಿ
• ರಸಪ್ರಶ್ನೆ ಸ್ಪರ್ಧೆ (ಕೆ. ಬಂಟುಞ ಆಚಾರ್ಯ ದತ್ತಿನಿಧಿ ಪ್ರಾಯೋಜಿತ)
ಪ್ರಾಯೋಜಕರು: ಶ್ರೀ ಕೆ. ಮುರಳೀಧರ್, ನಿವೃತ್ತ ತಹಶೀಲ್ದಾರರು.
• ಭಾಷಣ ಸ್ಪರ್ಧೆ (ಟಿ.ಕೃಷ್ಣಯ್ಯ ಆಚಾರ್ಯ ದತ್ತಿನಿಧಿ ಪ್ರಾಯೋಜಿತ)
ವಿಷಯ: “ಸಮಕಾಲೀನ ಜಗತ್ತಿನಲ್ಲಿ ಗಾಂಧಿ ಚಿಂತನೆಗಳ ಪ್ರಸ್ತುತತೆ” (4+1 ನಿಮಿಷಗಳು)
ಪ್ರಾಯೋಜಕರು: ಶ್ರೀ ಟಿ. ವಾದಿರಾಜ ಆಚಾರ್ಯ, ತೆಂಕನಿಡಿಯೂರು
ಆಸಕ್ತರು ಸ್ಪರ್ಧಾ ದಿನದಂದು ಬೆಳಗ್ಗೆ 09.00 ರಿಂದ 09.30 ಗಂಟೆಯ ಒಳಗೆ ಶಾಲಾ ಮುಖ್ಯಸ್ಥರ ಧೃಢೀಕರಣದೊಂದಿಗೆ ನೋಂದಣಿ ಮಾಡಬೇಕು. ಪ್ರತಿ ಸ್ಪರ್ಧೆಗೆ ಒಂದು ಸಂಸ್ಥೆಯಿಂದ ಇಬ್ಬರು ವಿದ್ಯಾರ್ಥಿಗಳಿಗೆ, ಹಾಗೂ ರಸಪ್ರಶ್ನೆ ಸ್ಪರ್ಧೆಗಳಿಗೆ ಪ್ರತಿ ಸಂಸ್ಥೆಯಿಂದ ಇಬ್ಬರು ವಿದ್ಯಾರ್ಥಿಗಳನ್ನೊಳಗೊಂಡ ಒಂದು ತಂಡಕ್ಕೆ ಮಾತ್ರ ಅವಕಾಶ. ಚಿತ್ರಕಲಾ ಸ್ಪರ್ಧೆಗೆ ವಿಷಯವನ್ನು ಸ್ಥಳದಲ್ಲೇ ನೀಡಲಾಗುವುದು. ಸ್ಪರ್ಧಾ ವಿಜೇತರಿಗೆ ಅದೇ ದಿನ ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ನಗದು ಬಹುಮಾನ ನೀಡಲಾಗುವುದು ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂ. 9964024066ನ್ನು ಸಂಪರ್ಕಿಸಬೇಕಾಗಿ ಸಂಘದ ಪ್ರಕಟಣೆ ತಿಳಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ