ಉಡುಪಿ: ಭಾನುವಾರ ಬೆಳಿಗ್ಗೆ ಉಡುಪಿಯ ನಗರದ ಹೊರವಲಯದ ಕೊರಂಗ್ರಪಾಡಿಯಲ್ಲಿರುವ ಪ್ರಸಿದ್ಧ ಜ್ಯೋತಿಷ್ಯ ವಿದ್ವಾನ್ ಮುರಳೀಧರ ತಂತ್ರಿಯವರ ಮನೆಯಲ್ಲಿ ನಡೆದ ಅಂತಾರಾಷ್ಟ್ರೀಯ ಖ್ಯಾತಿಯ ಸಂಗೀತ ವಿದ್ವಾನ್ ಸಂಜಯ ಸುಬ್ರಹ್ಮಣ್ಯಂ ಚೆನ್ನೈ ಅವರ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿಯನ್ನು ನೂರಾರು ಸಂಗೀತ ಶ್ರೋತೃಗಳು ಮನಸಾರೆ ಆಸ್ವಾದಿಸಿದರು. ಸುಮಾರು ಮೂರು ಘಂಟೆಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ವಿ. ವರದರಾಜನ್ ಚೆನ್ನೈ ವಯಲಿನ್ ಮತ್ತು ವಿ. ನೈವೇಲಿ ವೇಂಕಟೇಶ್ ಮೃದಂಗವಾದನ ನೀಡಿ ಸಹಕರಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ