ಸಮಯ ಎನ್ನುವುದು ಮನುಷ್ಯ ಜೀವನದ ಅತ್ಯಂತ ಕುತೂಹಲಕಾರಿ ಸಂಗತಿಯಾಗಿದೆ. ನಾವು ಯಾವುದೇ ಕೆಲಸವನ್ನು ಮಾಡಬೇಕಾದರೂ ಸಮಯದ ಪರಿಮಿತಿಯಲ್ಲಿಯೇ ಮಾಡಬೇಕಾಗುತ್ತದೆ. ಜೀವನದ ಅತೀ ದೊಡ್ಡ ಗುರು ಎಂದರೆ ಅದು ಸಮಯ ಅದು ಎಲ್ಲವನ್ನೂ ಕಲಿಸುತ್ತದೆ. ಅದರ ಗುಣಲಕ್ಷಣಗಳು ನಿಜವಾಗಿಯೂ ಅದ್ಭುತವಾಗಿವೆ.
ಮಾನವನ ಬಳಿ ಎಷ್ಟೇ ದುಡ್ಡು, ಅಧಿಕಾರ, ಸಾಮರ್ಥ್ಯ ಇದ್ದರೂ ಸಮಯವನ್ನು ಖರೀದಿಸಲು ಅವನಿಂದ ಸಾಧ್ಯವಿಲ್ಲ. ಮಾರುಕಟ್ಟೆಯಲ್ಲಿ ಎಷ್ಟೇ ಬೆಲೆಯ ಗಡಿಯಾರ ಸಿಕ್ಕರೂ ಅದು ಸಮಯವನ್ನು ತೋರಿಸುತ್ತದೆ ವಿನಃ ಸಮಯವನ್ನು ಕೊಡಲು ಅದರಿಂದ ಸಾಧ್ಯವಿಲ್ಲ. ವಿಚಿತ್ರವೇನೆಂದರೆ ಎಲ್ಲರಿಗೂ ಸಮಯ ಒಂದೇ ರೀತಿಯಾಗಿ ದೊರಕಿದೆ. ಆದರೆ ಅದರ ಸದುಪಯೋಗ ಮತ್ತು ದುರುಪಯೋಗದ ವಿಷಯ ಬಂದಾಗ ಮಾತ್ರ ಮನುಷ್ಯ ಅಡ್ನ್ನು ಬಳಸಿಕೊಳ್ಳುವಲ್ಲಿ ಅಸಮಾನತೆ ಕಂಡುಬರುತ್ತದೆ. ಸಮಯವನ್ನು ತಡೆಹಿಡಿಯಲು ಯಾರಿಂದಲೂ ಸಾಧ್ಯವಿಲ್ಲ. ಕಳೆದು ಹೋದ ಸಮಯವನ್ನು ಹಿಂಪಡೆಯಲು ಸಾಧ್ಯವಿಲ್ಲ.
ಯಾವುದೇ ವ್ಯಕ್ತಿಗೆ ಸಮಯವನ್ನು ಕೂಡಿಡಲು ಅಥವಾ ಮುಚ್ಚಿಡಲು ಸಾಧ್ಯವಿಲ್ಲ. ಅದು ಮುಂದುವರಿಯುತ್ತಾ ಹೋಗುತ್ತದೆ, ನಿರಂತರವಾಗಿರುತ್ತದೆ. ಕ್ಷಣ ಕ್ಷಣಕ್ಕೂ ನಾವು ಅದರೊಂದಿಗೆ ಬೆಳೆಯುತ್ತಾ ಹೋಗುತ್ತೇವೆ. ಅಂದರೆ ನಮ್ಮ ವಯಸ್ಸು ಬೆಳೆಯುತ್ತಾ ಹೋಗುತ್ತದೆ.
ಎಲ್ಲರಿಗೂ ಜೀವನದ ಗಡಿಯಾರ ಒಂದೇ ಆದರೆ ಅದರಲ್ಲಿ ತೋರಿಸುವ ಸಮಯ ಎಲ್ಲರಿಗೂ ಒಂದೇ ಆಗಿರುವುದಿಲ್ಲ. ಕಾಲಕ್ಕೆ ತಕ್ಕಂತೆ ಬದಲಾಗುವುದು ಜಗದ ನಿಯಮ. ಸಮಯದೊಂದಿಗೆ ನಡೆಯಲು ಕಲಿತಲ್ಲಿ ಜೀವನ ಸುಗಮ ಸುಲಭ ಹಾಗೂ ಸುಂದರವಾಗಿರುತ್ತದೆ. ಅದಕ್ಕಾಗಿ ಸಮಯದ ಸದುಪಯೋಗವನ್ನು ಪಡೆಯಲು, ಜೀವನದಲ್ಲಿ ಹೆಚ್ಚು ಗಮನವಹಿಸುವುದು ಅಗತ್ಯ.
-ಸ್ವೀಡಲ್ ಬಳಕುಂಜೆ
ಆಳ್ವಾಸ್ ಕಾಲೇಜು ಮೂಡಬಿದಿರೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ