ಈ ತರಬೇತಿ ಕೇವಲ ಒಂದು ಪರಿಚಯದ ಹಂತ, ಇದರ ನಂತರದ ಬೆಳವಣೆಗೆ ಮತ್ತು ವಿಸ್ತರಣೆಗೆ ನೀವು ನಿಮ್ಮ ಸ್ವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡಿ ಎಂದು ರುಡ್ಸೆಟ್ ಸಂಸ್ಥೆಗಳ ಅಧ್ಯಕ್ಷರು, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆ ಯವರು ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ರುಡ್ಸೆಟ್ ಸಂಸ್ಥೆ ಉಜಿರೆಯಲ್ಲಿ ನಡೆದ ಸಂಸ್ಥೆಯ ಜಿಲ್ಲಾ ಮಟ್ಟದ ರುಡ್ಸೆಟ್ ಸಲಹಾ ಸಮಿತಿಯ ತ್ರೈಮಾಸಿಕ ಸಭೆಯ ನಂತರ, ರುಡ್ಸೆಟ್ ಸಂಸ್ಥೆಯಲ್ಲಿ 30 ದಿನಗಳ ಕಾಲ ನಡೆದ ಇಲೆಕ್ಟ್ರಿಕಲ್ ಮೋಟಾರ್ ರಿವೈಂಡಿಂಗ್ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಶಿಭಿರಾರ್ಥಿಗಳಿಗೆ ಆಶೀರ್ವಚಿಸಿ, ಅವಕಾಶಗಳನ್ನು ಬಳಸಿಕೊಳ್ಳುವವರು ಬುದ್ಧಿವಂತರು, ಆಯಾ ಕ್ಷೇತ್ರದಲ್ಲಿ ಬರುವ ಹೊಸ ತಂತ್ರಜ್ಞಾನಗಳನ್ನು ತಿಳಿದು ಗ್ರಾಹಕರಿಗೆ ಸೇವಾ ಮನೋಧರ್ಮದಿಂದ ಸೇವೆಯನ್ನು ಕೊಡುವ ಪ್ರಯತ್ನ ಮಾಡಿ ಎಂದು ಕಿವಿಮಾತು ನೀಡಿ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಅಗ್ರಣೀ ಬ್ಯಾಂಕಿನ ಮುಖ್ಯ ಪ್ರಬಂಧಕರಾದ ಶ್ರೀ ಪ್ರವೀಣ್ ಎಂ. ಪಿ., ನಬಾರ್ಡ್ ಜಿಲ್ಲಾ ಅಭಿವೃದ್ಧಿ ಪ್ರಬಂಧಕರಾದ ಶ್ರೀಮತಿ ಸಂಗೀತಾ ಕಾರ್ತ ರವರು ಉಪಸ್ಥಿತರಿದ್ದರು. ರುಡ್ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಗಿರಿಧರ ಕಲ್ಲಾಪುರರವರು ಸ್ವಾಗತಿಸಿ, ನಿರ್ದೇಶಕರಾದ ಶ್ರೀ ಎಂ. ಸುರೇಶ್‍ವರು ವಂದಿಸಿದರು.
ಶ್ರೀಮತಿ ಅನಸೂಯ, ಹಿರಿಯ ಉಪನ್ಯಾಸಕರು ಕಾರ್ಯಕ್ರಮ ನಿರೂಪಿಸಿ, ಶ್ರೀ ಅಬ್ರಹಂ ಜೇಮ್ಸ್, ಹಿರಿಯ ಉಪನ್ಯಾಸಕರು ಸಹಕರಿಸಿದರು. ಈ ಕಾರ್ಯಕ್ರಮದಲ್ಲಿ ದ್ವಿ ಚಕ್ರ ವಾಹನ ದುರಸ್ತಿ ಮತ್ತು ಮೆನ್ಸ್ ಪಾರ್ಲರ್ ತರಬೇತಿ ಪಡೆಯುತ್ತಿದ್ದ ಶಿಭಿರಾರ್ಥಿಗಳು ಭಾಗವಹಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ