ತೆಂಕನಿಡಿಯೂರು ಕಾಲೇಜು: ಕ್ಷೇಮಪಾಲನಾ ವೇದಿಕೆ ಉದ್ಘಾಟನೆ

Upayuktha
0

ತೆಂಕನಿಡಿಯೂರು : ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾ ವೇದಿಕೆಯ ಉದ್ಘಾಟನಾ ಕಾರ್ಯಕ್ರಮ ದಿನಾಂಕ: 22/12/2022 ರಂದು ನಡೆಯಿತು.  ಕಾರ್ಯಮವನ್ನು ಉದ್ಘಾಟಿಸಿದ ಮಣಿಪಾಲ ಗ್ರೂಫ್ ಇದರ ಚೇರ್‍ಮೆನ್ ಆದ ಶ್ರೀ ಟಿ. ಸುಧಾಕರ ಪೈ “ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗಪಡೆಯಲು ಜ್ಞಾನದ ಜೊತೆಗೆ ಕೌಶಲಗಳನ್ನು ಬೆಳೆಸಿಕೊಳ್ಳಬೇಕು” ಎಂದು ವಿದ್ಯಾರ್ಥಿಗಳಿಗೆ ಕರೆಯಿತ್ತರು. ಮುಖ್ಯ ಅತಿಥಿಗಳಾದ ಶ್ರೀ ದಯಾನಂದ ಶೆಟ್ಟಿ ಕೊಜಕುಳಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.  


ಕಾಲೇಜಿನ ಪ್ರಾಂಶುಪಾಲ ಪ್ರೊ. ಸುರೇಶ್ ರೈ ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ “ಕಳೆದ 29 ವರ್ಷಗಳಿಂದ ಕಾಲೇಜು ಬೆಳೆದು ಬಂದ ಪರಂಪರೆಯನ್ನು ವಿವರಿಸುತ್ತಾ, ಈ ಪ್ರದೇಶದಲ್ಲಿ ಸಾಕ್ಷರ ಹಾಗೂ ಶೈಕ್ಷಣಿಕ ಪ್ರಜ್ಞೆಯನ್ನು ಜಾಗೃತಗೊಳಿಸುವಲ್ಲಿ ಈ ಕಾಲೇಜು ವಹಿಸಿದ ಪಾತ್ರವನ್ನು ವಿವರಿಸಿದರು.  

ಕಳೆದ 29 ವರ್ಷಗಳಿಂದ 36 ರ್ಯಾಂಕುಗಳಿಗೆ ಸಾಕ್ಷಿಯಾದ ಈ ಕಾಲೇಜು ಈ ಪ್ರದೇಶದಲ್ಲಿ ಒಂದು ಗಮನಾರ್ಹ ಶೈಕ್ಷಣಿಕ ಸಂಸ್ಥೆಯಾಗಿ ಬೆಳೆದಿದೆ” ಎಂದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಶ್ರೀ ರಾಧಾಕೃಷ್ಣ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರಮಾಣ ವಚನ ಬೋಧಿಸಿದರು.  


ಪ್ರೊ. ಗೋಪಾಲಕೃಷ್ಣ ಎಂ. ಗಾಂವ್ಕರ್ ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ಅಧ್ಯಕ್ಷರಾದ ಸ್ಪಂದನಾ ಮಯ್ಯ ವಂದಿಸಿದರು.  ಕಾಲೇಜಿನ ಸಾಂಸ್ಕೃತಿಕ ಸಂಚಾಲಕರಾದ ಡಾ. ರಾಘವ ನಾಯ್ಕ, ಪದವಿ ವಿಭಾಗದ ಸಾಂಸ್ಕೃತಿಕ ಸಂಚಾಲಕರಾದ ಶ್ರೀ ಕೃಷ್ಣ, ಐ.ಕ್ಯೂ.ಎ.ಸಿ. ಸಂಚಾಲಕರಾದ ಡಾ. ಮೇವಿ ಮಿರಾಂದ, ವಿದ್ಯಾರ್ಥಿ ಪ್ರತಿನಿಧಿಗಳಾದ ಯಮುನಪ್ಪ, ಸೋಮನಾಥ, ರಕ್ಷಿತಾ, ದಿಶಾ ಜಿ.ಸಿ., ಅನ್ವಿತಾ ಜಿ.ವಿ., ಮಹೇಶ್, ಸುಹಾಸ್, ಅಕ್ಷಯ್, ಸೌಂದರ್ಯ, ಕೆ. ಪ್ರಣೀತ್, ಸುಷ್ಮಾ ಹಾಗೂ ಕಾಲೇಜಿನ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. 


ಸಮಾಜಕಾರ್ಯ ವಿಭಾಗದ ಮುಖ್ಯಸ್ಥರ ಡಾ. ದುಗ್ಗಪ್ಪ ಕಜೆಕಾರ್ ಹಾಗೂ ಕನ್ನಡ ಸಹ ಪ್ರಾಧ್ಯಾಪಕ ಡಾ. ವೆಂಕಟೇಶ ಹೆಚ್.ಕೆ. ಕಾರ್ಯಕ್ರಮ ನಿರೂಪಿಸಿದರು.  


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top