ನಿಟ್ಟೆ : ಶಿಕ್ಷಕ-ರಕ್ಷಕ ಸಂಘದ ಮಹಾಸಭೆ ದಿನಾಂಕ 9.1.2023 ರಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ಇಲ್ಲಿ 2022-23 ನೇ ಸಾಲಿನ ಶೈಕ್ಷಣಿಕ ವರ್ಷದ ಶಿಕ್ಷಕ ರಕ್ಷಕದ ಮಹಾಸಭೆಯನ್ನು ಆಯೋಜಿಸಲಾಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸೌಮ್ಯ ಜಿ ,ಠಾಣಾಧಿಕಾರಿಗಳು, ಆರಕ್ಷಕ ಠಾಣೆ ವೇಣೂರು ಇವರು ಆಗಮಿಸಿದ ಪೋಷಕರು ಮನೆಯಲ್ಲಿ ಉತ್ತಮ ಶೈಕ್ಷಣಿಕ ವಾತಾವರಣವನ್ನು ನಿರ್ಮಿಸಬೇಕೆಂದು ಮತ್ತು ಮೊಬೈಲ್ ಬಳಕೆ ಹಾಗೂ ಸಂಚಾರಿ ನಿಯಮಗಳ ಬಗ್ಗೆ ಅರಿವನ್ನು ಮೂಡಿಸಿದರು.
ರಾಜ್ಯಮಟ್ಟದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಕುಮಾರಿ ರಾಫೀಯಾ ಮತ್ತು ರಾಜ್ಯಮಟ್ಟದ ಗಣರಾಜ್ಯೋತ್ಸವದ ಪಥ ಸಂಚಲನಕ್ಕೆ ಆಯ್ಕೆಯಾದ ಕುಮಾರಿ ದೀಕ್ಷಾ ಇವರನ್ನು ಸನ್ಮಾನಿಸಲಾಯಿತು. ಶಿಕ್ಷಕರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಹಳ್ಳಿಮನೆ ಹೈದರಾಲಿ ಅವರನ್ನು ಸನ್ಮಾನಿಸಲಾಯಿತು .
ತದನಂತರ ನೂತನ ಕಾರ್ಯಕಾರಿ ಸಮಿತಿ ರಚನೆಯ ಬಗ್ಗೆ ವಿಚಾರ ವಿನಿಮಯ ನಡೆಯಿತು .ಪೋಷಕರು ಕಾಲೇಜಿನ ಬಗ್ಗೆ ಒಳ್ಳೆಯ ಅಭಿಪ್ರಾಯಗಳನ್ನು ನೀಡಿದರು. ಅಧ್ಯಕ್ಷತೆಯನ್ನು ವಹಿಸಿದಂತಹ ಕಾಲೇಜಿನ ಪ್ರಾಂಶುಪಾಲರಾದ ಡಾ. ಟಿ ಕೆ ಶರತ್ ಕುಮಾರ್ ಇವರು ಕಾಲೇಜಿನ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಮಹತ್ವವಾದದ್ದು ,ಆದ್ದರಿಂದ ಕಾಲೇಜಿನ ಅಭಿವೃದ್ಧಿಗೆ ಶಿಕ್ಷಕ ರಕ್ಷಕ ಸಂಘದವರು ಸಹಕಾರ ನೀಡುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ Iಕಿಂಅ ಸಂಚಾಲಕರಾದ ಡಾ. ಲೋಕೇಶ ,ಸಂಘದ ಸಂಚಾಲಕರಾದ ಖಂಡೋಜಿ ಲಮಾಣಿ, ವಿದ್ಯಾರ್ಥಿಗಳ ಪೋಷಕರು, ಕಾಲೇಜಿನ ಉಪನ್ಯಾಸಕರು ಭಾಗವಹಿಸಿದ್ದರು. ಶಿಕ್ಷಕರಕ್ಷಕ ಸಂಘದ ಸಂಚಾಲಕರಾದ ಸಂತೋಷ್ ಪ್ರಭು ಅವರು ಸ್ವಾಗತಿಸಿ, ಡಾ. ವೈಶಾಲಿ ಯು ನಿರೂಪಿಸಿ, ಪ್ರೊ. ಕುಮಾರ್ ಸಿ ಅವರು ವಂದನಾರ್ಪಣೆಯನ್ನು ಮಾಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ