ಸೋಲು ಅಂತ್ಯದ ಹಾದಿಯಲ್ಲ, ಪ್ರಾರಂಭದ ದಾರಿ..

Upayuktha
0


ಸೋಲು ಎಂಬುದು ಬದುಕಿನ ಒಂದು ಹಂತವಷ್ಟೇ. ಸೋತವನು ಕ್ರೂರನಲ್ಲ, ಕುರೂಪಿಯಲ್ಲ ಬದಲಾಗಿ ಗೆಲ್ಲಲು ತಯಾರಾದವನು. ಎಂದಿಗೆ ನಾವು ಸೋಲುತ್ತೇವೆಯೋ ಅಂದೇ ಹೊಸದೊಂದು ಪ್ರಯತ್ನಕ್ಕೆ ಹೆಜ್ಜೆ ಹಾಕಲು ಪ್ರಾರಂಭಿಸುತ್ತೇವೆ. ಪ್ರಾರಂಭವಾದ ಆ ಹೆಜ್ಜೆಯಲ್ಲಿಯು ಮತ್ತೆ ಮತ್ತೆ ಸೋಲುಗಳು ಬರಬಹುದು ಆದರೆ ಕೊನೆಗೊಂದು ದಿನ ಗೆಲುವು ಸಿಗುವುದು ಖಂಡಿತ. ಮಗು ನಡೆಯಲು ಪ್ರಾರಂಭಿಸುವಾಗ ಅದೆಷ್ಟೋ ಬಾರಿ ನೆಲಕ್ಕೆ ಬಿದ್ದರೂ ಕೂಡ ಸುಮ್ಮನೆ ಕೂರಲಾರದು, ಮತ್ತೆ ಮತ್ತೆ ಪ್ರಯತ್ನಿಸಿ ಪುಟ್ಟ ಹೆಜ್ಜೆಗಳನ್ನು ಮುಂದೆ ಇಟ್ಟು ಯಶಸ್ವಿ ಪಡೆಯುವುದು. ಹಾಗೆಯೇ ಜೀವನ ಸೋಲು ಎಂಬುದು ಸಿಕ್ಕಾಗಲೇ ಗೆಲುವಿನ ರುಚಿಯನ್ನು ಆಸ್ವಾದಿಸಲು ಸಾಧ್ಯ.

ತಿಳಿದಿದೆಯೇ ?.. ಥಾಮಸ್ ಅಲ್ವಾ ಎಡಿಸನ್ ವಿದ್ಯುತ್ ಬಲ್ಬ್ ಕಂಡು ಹಿಡಿಯಲು 10,000 ಬಾರಿ ಪ್ರಯತ್ನ ಪಟ್ಟು ಸೋತಿದ್ದರು. ಒಂದಲ್ಲ ಎರಡಲ್ಲ ಹತ್ತು ಸಾವಿರ ಬಾರಿ. ಹತ್ತು ಸಾವಿರದಲ್ಲಿ ಅರ್ಧ ಪಾಲಿನ ಸೋಲನ್ನು ಕೂಡ ನಾವು ಕಂಡಿಲ್ಲ.

ಅಷ್ಟೇಕೆ! ಬಿಲ್ ಗೇಟ್ಸ್ ಕಾಲೇಜಿನಲ್ಲಿ ಫೇಲಾಗಿ ಹೊರ ಬಿದ್ದವರು ಇಂದು ಜಗತ್ತಿನ ನಂಬರ್ ಒನ್ ಶ್ರೀಮಂತ. ಕೆ ಎಫ್ ಸಿ ಸಂಸ್ಥಾಪಕ ಕೊಲೊನೆಲ್ ಸ್ಯಾಂಡರ್ಸ್ ತನ್ನ 61 ರ ವಯಸ್ಸಿನಲ್ಲಿ 1009 ಬಾರಿ ತನ್ನ ಕೈ ರುಚಿಯ ಚಿಕನ್ ಮಾರಲು ಹೋಗಿ ಸೋತಿದ್ದರು. ಜೆ. ಕೆ ರೌಲಿಂಗರ್ ನ" ಹ್ಯಾರಿ ಪಾಟರ್" ಕೃತಿಯು 12 ಬಾರಿ ಪ್ರಕಟಣೆಗೆ ತಿರಸ್ಕರಿಸಲ್ಪಟ್ಟಿತ್ತು. ಇದನ್ನೆಲ್ಲ ಗಮನಿಸಿದಾಗ, ನಮ್ಮ ಸೋಲು ಪೂರ್ಣ ವಿರಾಮವಲ್ಲ, ಪ್ರಶ್ನೆಯು ಅಲ್ಲ, ಆಶ್ಚರ್ಯವೇನು ಅಲ್ಲ, ಸಾಧನೆಗೆ ಹೊಸ ಪ್ರಯತ್ನದ ಮರು ತಯಾರಿ ಅಷ್ಟೇ ಎಂದು ನಾವು ಅರಿತುಕೊಳ್ಳುತ್ತೇವೆ.. ಸಾವಿರ ಬಾರಿ ಸೋತರು ಮತ್ತೆ ಮತ್ತೆ ಪ್ರಯತ್ನಿಸಿದಾಗ ಒಂದು ಬಾರಿಯಾದರೂ ಗೆಲುವು ನಮ್ಮದಾಗಬಹುದು. ನೂರಾರು ಬಾರಿ ಸೋತು ಗೆದ್ದವರಿರುವಾಗ ಮತ್ತೇಕೆ ತಡ?.. ಪ್ರಯತ್ನಿಸಲು ತಯಾರಾಗಿ ಇಂದೆ, ಈಗಲೇ ..

-ಅಶ್ವಿನಿ ಹೆಚ್. ನಂದಳಿಕೆ

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top