ಬಹುನಿರೀಕ್ಷಿತ "ಶಕಲಕ ಬೂಮ್ ಬೂಮ್" ಚಿತ್ರ ಜನವರಿ 20 ರಂದು ತೆರೆಗೆ

Upayuktha
0

ಮಂಗಳೂರು: "ಯುಎನ್ ಸಿನೆಮಾಸ್ ಬ್ಯಾನರ್ ನಡಿ ನಿರ್ಮಾಣಗೊಂಡಿರುವ ಶಕಲಕ ಬೂಮ್ ಬೂಮ್ ತುಳು ಚಿತ್ರ  ಜನವರಿ 20 ರಂದು ತುಳುನಾಡಿನಾದ್ಯಂತ ಬಿಡುಗಡೆಯಾಗಲಿದೆ" ಎಂದು ಚಿತ್ರ ನಿರ್ಮಾಪಕ ನಿತ್ಯಾನಂದ ನಾಯಕ್ ನರಸಿಂಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.


"ಕಾಮಿಡಿ, ಹಾರರ್ ವಿಭಿನ್ನ ಕಥಾಹಂದರದ ಚಲನಚಿತ್ರವನ್ನು ಶ್ರೀಶ ನಾಯಕ್ ಎಳ್ಳಾರೆ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ನಿತ್ಯಾನಂದ ನಾಯಕ್ ನರಸಿಂಗೆ, ಉಮೇಶ್ ಪ್ರಭು ಮಾಣಿಬೆಟ್ಟು ನಿರ್ಮಾಪಕರಾಗಿದ್ದಾರೆ. ಡಾಲ್ವಿನ್ ಕೊಳಲಗಿರಿ ಚಿತ್ರದ ಸಂಗೀತ ನಿರ್ದೇಶಕರಾಗಿದ್ದರೆ. ತುಳುನಾಡಿನ ಖ್ಯಾತ ಛಾಯಾಗ್ರಾಹಕರಾದ ಪ್ರಜ್ವಲ್ ಸುವರ್ಣ ಹಾಗೂ ಅರುಣ್ ರೈ ಪುತ್ತೂರು ಕ್ಯಾಮರಾ ಕೈಚಳಕವಿದೆ" ಎಂದರು.


ಚಿತ್ರದ ಪ್ರಮುಖ ಭೂಮಿಕೆಯಲ್ಲಿ ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್, ಉಮೇಶ್ ಮಿಜಾರ್, ಪ್ರವೀಣ್ ಮರ್ಕಮೆ, ಮಿಮಿಕ್ರಿ ಶರಣ್, ಕಥಾನಾಯಕನಾಗಿ ಗೊಡ್ವಿನ್ ಸ್ಪಾರ್ಕಲ್ ಹಾಗೂ ಕಥಾನಾಯಕಿಯಾಗಿ ಲಕ್ಷಾ ಶೆಟ್ಟಿ, ರೂಪಶ್ರೀ ವರ್ಕಾಡಿ, ಮನೋಹರ್‌ ಶೆಟ್ಟಿ ನಂದಳಿಕೆ, ವಸಂತ್ ಮುನಿಯಾಲ್, ಹರೀಶ್ ಗಾಳಿಪಟ, ಸುನಿಲ್ ಕಡ್ತಲ, ಯತೀಶ್ ಪೂಜಾರಿ, ಯಶವಂತ್, ಪ್ರವೀಣ್ ಆಚಾರ್ಯ, ಕಾಮಿಡಿ ಕಿಲಾಡಿ ಖ್ಯಾತಿಯ ರಾಧೇಶ್, ಕಾಮಿಡಿ ಗ್ಯಾಂಗ್ ಖ್ಯಾತಿಯ ರಾಜೇಶ್ ದಾನಶಾಲೆ, ಲಂಚುಲಾಲ್, ರಾಜೇಶ್ವರಿ ಕುಲಾಲ್, ಧೀರಜ್, ಶಿವಾನಂದ, ಯಜ್ಞೆಶ್ ಶೆಟ್ಟಿ ಅಭಿನಯಿಸಿದ್ದಾರೆ.


ತುಳು ಸಿನೆಮಾದಲ್ಲಿ ವೈವಿಧ್ಯತೆ ಇರಬೇಕು ಎಂಬ ನೆಲೆಯಲ್ಲಿ ಕಾಮಿಡಿ, ಹಾರರ್, ಥ್ರಿಲ್ಲರ್, ಸಸ್ಪೆನ್ಸ್ ನ್ನು ಹೊಂದಿರುವ ಹೊಸತನದ ಚಿತ್ರ ಶಕಲಕ ಬೂಮ್ ಬೂಮ್ ಆಗಿದೆ. ಜನರನ್ನು ಮೋಸ ಮಾಡುತ್ತ ಬದುಕುವವರು, ಸಂಪತ್ತಿನ ಆಸೆಯಿಂದ ಬಂದು ಪಾಳು ಬಿದ್ದ ಮನೆಯಲ್ಲಿ ಬಂಧಿಯಾಗುತ್ತಾರೆ. ಆ ಮನೆಯ ರಹಸ್ಯ ಏನು? ಈ ಹಿಂದೆ ಆ ಮನೆಯಲ್ಲಿ ಏನಾಗಿತ್ತು? ನ್ಯಾಯ ಗೆಲ್ಲುತ್ತದಾ? ಸತ್ಯಕ್ಕೆ ಜಯವಿದೆಯಾ? ಎನ್ನುವ ವಿಶಿಷ್ಟವಾದ ಕಥಾಹಂದರ ಹೊಂದಿರುವ ವಿಭಿನ್ನವಾದ ಚಿತ್ರ ಇದಾಗಿದೆ ಎಂದು ಮಾಹಿತಿ ನೀಡಿದರು.


ಪತ್ರಿಕಾಗೋಷ್ಠಿಯಲ್ಲಿ ಗೊಡ್ವಿನ್ ಸ್ಪಾರ್ಕಲ್, ಸುನೀಲ್ ಕಡ್ತಲ, ಲಂಚು ಲಾಲ್, ಸಂಗೀತ ನಿರ್ದೇಶಕ ಡಾಲ್ವಿನ್ ಕೊಳಲಗಿರಿ ಮತ್ತಿತರರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top