ಮಂಗಳೂರು : ಚುಟುಕು ಸಾಹಿತ್ಯ ಪರಿಷತ್ತು ಮೈಸೂರು ಇದರ ಮಂಗಳೂರು ತಾಲೂಕು ಘಟಕ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಘಟಕ ವತಿಯಿಂದ ಹಿರಿಯ ಲೇಖಕಿ ದಿವಂಗತ ಡಾ.ಸಾರಾ ಅಬೂಬಕ್ಕರ್ ನೆನಪಿಗೊಂದು ಕಾರ್ಯಕ್ರಮ 'ಸಾರ ಸಾಗರ ಸಾರಾ' ವನ್ನು ಜನವರಿ 22 ಭಾನುವಾರದಂದು ಮಂಗಳೂರಿನ ಹೋಟೆಲ್ ವುಡ್ ಲಾಂಡ್ಸ್ ಸಭಾಂಗಣದಲ್ಲಿ ಆಯೋಜಿಸಿದೆ.
ಸಮಾರಂಭದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಚುಸಾಪ ಜಿಲ್ಲಾಧ್ಯಕ್ಷರಾದ ಹರೀಶ್ ಸುಲಾಯ ಒಡ್ಡಂಬೆಟ್ಟು ವಹಿಸುವರು.ಡಾ.ಸಾರಾ ಅಬೂಬಕ್ಕರ್ ಅವರ ಕುರಿತು ಮಂಗಳೂರು ಆಕಾಶವಾಣಿಯ ವಿಶ್ರಾಂತ ಕಾರ್ಯಕ್ರಮ ನಿರ್ವಾಹಕ ಮುದ್ದು ಮೂಡುಬೆಳ್ಳೆ ಅವರು ಉಪನ್ಯಾಸ ನೀಡಲಿದ್ದಾರೆ. ಕವಿಗೋಷ್ಠಿ ಅಧ್ಯಕ್ಷತೆಯನ್ನು ಕವಿ ಪಿಂಗಾರ ವಾರ ಪತ್ರಿಕೆ ಸಂಪಾದಕ ರೇಮಂಡ್ ಡಿಕುನಾ ತಾಕೊಡೆ ವಹಿಸುವರು.
ಮುಖ್ಯ ಅತಿಥಿಗಳಾಗಿ ದ. ಕ ಚುಸಾಪ ಜಿಲ್ಲಾ ಗೌರವ ಅಧ್ಯಕ್ಷ ಇರಾ ನೇಮು ಪೂಜಾರಿ, ಸುರತ್ಕಲ್ ಗೋವಿಂದ ದಾಸ ಕಾಲೇಜು ಪ್ರಾಚಾರ್ಯರಾದ ಪ್ರೊ| ಪಿ. ಕೃಷ್ಣಮೂರ್ತಿ ಉಪಸ್ಥಿತರಿರುವರು.
ಮಂಗಳೂರು ತಾಲೂಕು ಚುಸಾಪ ಹಾಗೂ ಉಡುಪಿ ಜಿಲ್ಲಾ ಚುಸಾಪ ಅಧ್ಯಕ್ಷರಾದ ಕಾ.ವೀ. ಕೃಷ್ಣದಾಸ್ ಪ್ರಾಸ್ತಾವಿಕವಾಗಿ ಮಾತನಾಡುವರು. ಇದೇ ಸಂದರ್ಭ ದಿವಂಗತ ಡಾ ಸಾರಾ ಅಬೂಬಕ್ಕರ್ ಅವರ ಭಾವಚಿತ್ರಕ್ಕೆ ಗೌರವ ಅರ್ಪಣೆ ನಡೆಯಲಿರುವುದು. ಬಳಿಕ ನಡೆಯುವ ಕವಿಗೋಷ್ಠಿಯಲ್ಲಿ ಬದ್ರುದ್ದೀನ್ ಕೂಳೂರು, ಅರುಣಾ ನಾಗರಾಜ್,ಸೌಮ್ಯ ಆರ್ ಶೆಟ್ಟಿ,ನಳಿನಾಕ್ಷಿ ಉದಯರಾಜ್,ಗೋಪಾಲಕೃಷ್ಣ ಶಾಸ್ತ್ರಿ,ಬಿ ಸತ್ಯವತಿ ಭಟ್,ಎಸ್ ಕೆ ಗೋಪಾಲಕೃಷ್ಣ ಭಟ್,ಆಕೃತಿ ಐ ಎಸ್ ಭಟ್,ವ. ಉಮೇಶ್ ಕಾರಂತ್,ಗೀತಾ ಲಕ್ಷ್ಮೀಶ್,ಹೇಮಂತ್ ಕುಮಾರ್ ಡಿ, ಹಿತೇಶ್ ಕುಮಾರ್ ಎ.,ಸುಮಂಗಲಾ ದಿನೇಶ್ ಶೆಟ್ಟಿ ಕುಂಪಲ ಮೊದಲದವರು ಕವಿಗಳಾಗಿ ಭಾಗವಹಿಸುವರು. ಕಾರ್ಯಕ್ರಮದಲ್ಲಿ ಭಾಗವಹಿಸಲಿಚ್ಚಿಸುವವರು 8310388415 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ