ಸಿದ್ದಾಪುರ : ತಾಲೂಕಿನ ಅಸಕ್ಕಿಸವಲು ಗ್ರಾಮದ ಗಂಗಾಧರ ಗೌಡ ಅವರ ಮನೆಯ 25 ಅಡಿ ಆಳದ ಬಾವಿಯಲ್ಲಿ ಬಿದ್ದ ಕಾಳಿಂಗ ಸರ್ಪವನ್ನು ರಕ್ಷಿಸಿದ ಘಟನೆ ನಡೆದಿದೆ.
4/1/2023 ರಂದು ಮನೆಯ ಬಾವಿಯಲ್ಲಿ ಕೇರೆ ಹಾವನ್ನು ಬೇಟೆ ಆಡುತ್ತ ಬಂದ ಕಾಳಿಂಗ ಸರ್ಪ ಕೇರೆ ಹಾವಿನ ಸಹಿತ ಬಾವಿಯಲ್ಲಿ ಬಿದ್ದು ಅರಣ್ಯ ಇಲಾಖೆಗೆ ತಿಳಿಸಿದ್ದಾರೆ. ನಂತರ 65 ಕಿ.ಮೀ ದೂರದಿಂದ ಕುಮಟಾದ ಉರಗ ತಜ್ಞರಾದ ಸ್ನೇಕ್ ಪವನ್ ಅವರನ್ನು ಕರೆಸಿದ್ದಾರೆ. ಬಾವಿಯಲ್ಲಿದ್ದ ಪೊಟರೆ ಸೇರಿದ ಹಾವು ಬೆಳಿಗ್ಗೆಯಿಂದ ಸಂಜೆವರೆಗೂ ಪವನ್ ಅವರು 6 ಬಾರಿ ಬಾವಿ ಇಳಿದು ಪ್ರಯತ್ನಿಸಿದರೂ ಸಿಗದೇ, ಕೆಲ ಉಪಾಯವನ್ನು ಮನೆಯವರಿಗೆ ತಿಳಿಸಿ ಬಂದಿದ್ದರು.
ನಂತರ ಮಾರನೇ ದಿನ ಉಪಾಯವಾಗಿ ಹಾವನ್ನು ಗ್ರೀನ್ ಮೆಸ್ ನಲ್ಲಿ ಬಂದಿಯಾಗಿಸಿದ ಊರಿನವರು ಮತ್ತೆ ಮಾರನೇ ದಿನ ಕುಮಟಾದಿಂದ ಸ್ನೇಕ್ ಪವನ್ ಅವರನ್ನು ಕರೆಸಿದ್ದು, ಹಾವನ್ನು ಬಾವಿಯಂದ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.
ಅಕ್ಕಿಸವಲು ಗ್ರಾಮದವರು ಕುಮಟಾದ ಸ್ನೇಕ್ ಪವನ್ ಅವರು 2 ದಿನದಿಂದ ಪಟ್ಟ ಪರಿಶ್ರಮಕ್ಕೆ ಅಭಿನಂದನೆ ಸಲ್ಲಿಸಿದ್ದು. ಪವನ್ ನಾಯ್ಕ ಅವರು ಸಹ ತಾನು ಕೆಲಸ ಮಾಡುತ್ತಿರುವ ಮಾತೋಶ್ರೀ ಸೌಹಾರ್ದ ಬೆಂಕ್ ಇಂದ ಒಂದೂವರೆ ದಿನ ರಜೆ ನೀಡಿ ಸಹಕರಿಸಿದ್ದಕ್ಕೆ ಅದ್ಯಕ್ಷರಾದ ವಿನಯ್ ನಾಯಕ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ