ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತ

Chandrashekhara Kulamarva
0

ಮುಂಬೈ: ಮಹಾರಾಷ್ಟ್ರದಲ್ಲಿ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆಗೆ ಸರ್ಕಾರ ಅನುಮತಿ ನಿರಾಕರಿಸಿದ ಬೆನ್ನಲ್ಲೇ ಹೈಕೋರ್ಟ್ ಮೆಟ್ಟಿಲೇರಿದ್ದ ರ‍್ಯಾಪಿಡೋಗೆ ತೀವ್ರ ಹಿನ್ನಡೆಯಾಗಿದೆ. ಈ ಹಿನ್ನೆಲೆಯಲ್ಲಿ ಕಂಪೆನಿಯು ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತಗೊಳಿಸುವುಗಾಗಿ ಹೈಕೋರ್ಟ್‌ಗೆ ತಿಳಿಸಿದೆ.


ಜ.13, ಮಧ್ಯಾಹ್ನ 1 ಗಂಟೆಯಿಂದ ರ‍್ಯಾಪಿಡೋ ಬೈಕ್ ಸೇವೆ ಮಹಾರಾಷ್ಟ್ರದಲ್ಲಿ ಲಭ್ಯವಿಲ್ಲ. ಜನವರಿ 20ರ ವರೆಗೆ ಆ್ಯಪ್ ಕಾರ್ಯನಿರ್ವಹಿಸುವುದಿಲ್ಲ ಎಂದು ರ‍್ಯಾಪಿಡೋ ಬೈಕ್ ಸರ್ವೀಸ್ ಹೇಳಿದೆ.


ಮಹಾರಾಷ್ಟ್ರದಲ್ಲಿ ರ‍್ಯಾಪಿಡೋ ಬೈಕ್ ಸರ್ವೀಸ್ ಸೇವೆ ಕುರಿತ ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ಜಸ್ಟೀಸ್ ಜಿಎಸ್ ಪಟೇಲ್ ಹಾಗೂ ಜಸ್ಟೀಸ್ ದಿಗೆ ನೇತೃತ್ವದ ಪೀಠ ಸೂಚನೆ ನೀಡಿದೆ.. ಮೊದಲು ನೀವು ಅನುಮತಿ ಪಡೆಯಿರಿ. ಇಲ್ಲದಿದ್ದರೆ ನಾವು ಖಾಯಂ ಆಗಿ ನಿರ್ಬಂಧಿಸುತ್ತೇವೆ ಎಂದು ನ್ಯಾಯಾದೀಶರು ಎಚ್ಚರಿಕೆ ನೀಡಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

إرسال تعليق

0 تعليقات
إرسال تعليق (0)
To Top