ಮುಕ್ತಕವೆಂದರೆ ಮುತ್ತಿನ ಹಾಗೆ: ಡಾ ಸುರೇಶ್ ನೆಗಳಗುಳಿ
ಮಂಗಳೂರು: ಪುತ್ತೂರಿನ ವಾಹಿನಿ ಕಲಾ ಸಂಘದ ವಾಹಿನಿ ಸಾಹಿತ್ಯ ಸಂಭ್ರಮ- 2023 ಆಶ್ರಯದಲ್ಲಿ ಮನವಳಿಕೆ ಗೋಪಾಲಕೃಷ್ಣ ಭಟ್ ಇವರಿಂದ ಮಹತೀ ಪ್ರಕಾಶನದ ಅಡಿಯಲ್ಲಿ ಪ್ರಕಟಿತವಾದ ನಂದಿಗೇಶನ ಮುಕ್ತಕಗಳು ಎಂಬ 500 ಮುಕ್ತಕಗಳ ಸಂಕಲನವು ಪುತ್ತೂರಿನ ಸುಭದ್ರಾ ಸಭಾಂಗಣದಲ್ಲಿ ಜನವರಿ 29 ರಂದು ಮಂಗಳೂರಿನ ಶಸ್ತ್ರಚಿಕಿತ್ಸಕ, ಮೂಲವ್ಯಾಧಿ ಕ್ಷಾರ ಚಿಕಿತ್ಸಕ ಮತ್ತು ಬರಹಗಾರ ಡಾ ಸುರೇಶ ನೆಗಳಗುಳಿಯವರಿಂದ ಲೋಕಾರ್ಪಣೆಗೊಂಡಿತು.
ಅವರು ಮಾತನಾಡುತ್ತಾ ಗೋಪಾಲಕೃಷ್ಣ ಇವರ ಮುಕ್ತಕಗಳು ಸಿಂಹ ಪ್ರಾಸ, ಗಜಪ್ರಾಸ, ಹಯಪ್ರಾಸ, ಶರಭ ಪ್ರಾಸ ಎಂಬಿತ್ಯಾದಿ ಪ್ರಕಾರಗಳನ್ನು ಬಳಸಿ ರಚಿತವಾಗಿದೆ ಹಾಗೂ ಜನಮಾನಸಕ್ಕೆ ನೀತಿ ನೀಡುವ ಅಂಶಗಳಿಂದ ಕೂಡಿದೆ ಎಂದರಲ್ಲದೆ ಮುಕ್ತಕ ದ ರಚನಾ ವೈಖರಿಯನ್ನು ವಿವರಿಸಿದರು ಮತ್ತು ಸ್ವರಚಿತ ಮುಕ್ತಕಗಳನ್ನು ವಾಚಿಸಿದರು.
ಹಿರಿಯ ಕವಯಿತ್ರಿ ವಿಜಯಾ ಶಶಿಕಾಂತ್ ದೀಪ ಬೆಳಗಿ ಉದ್ಘಾಟನೆ ಮಾಡಿದರು.
ಸಮಾರಂಭದ ಸರ್ವಾಧ್ಯಕ್ಷ ಖ್ಯಾತ ಕವಿ ಕೃಷ್ಣಯ್ಯ ಅನಂತಪುರ ಅವರು ಸಾಹಿತ್ಯದಲ್ಲಿ ಭಾಷಾಶುದ್ಧಿ ಮತ್ತು ಪ್ರಶಸ್ತಿಗಳ ಮಹತ್ವ ಯಾವ ರೀತಿ ಅರ್ಥ ಕಳೆದುಕೊಳ್ಳುತ್ತದೆ ಎಂದು ವ್ಯಾಖ್ಯಾನ ಮಾಡಿದರು. ಮಧುರ ಕಾನನ ಅವರ ಬೆಳ್ಳಿರಥದ ಭಾವಯಾನ ಕೃತಿ ಬಿಡುಗಡೆ ಮಾಡಿದರು. ಇತರ ಮೂರು ಪುಸ್ತಕಗಳ ಲೋಕಾರ್ಪಣೆ ಹಾಗೂ ಭಾವ ಗಾಯನ ಹಾಸ್ಯ ಸಿಂಚನ ಮತ್ತು ಸಾಧಕರಿಗೆ ಸನ್ಮಾನವೂ ಈ ವೇಳೆ ನಡೆಯಿತು.
ಮುಖ್ಯ ಅತಿಥಿಗಳಾಗಿದ್ದ ಪ್ರೊ ಪಿ.ಎನ್ ಮೂಡಿತ್ತಾಯ ಇವರಿಂದ ಹಾಸ್ಯ ಸಿಂಚನ ಹಾಗೂ ಮಧುರ ಕಾನನ ಮುಕ್ತಕಗಳ ಲೋಕಾರ್ಪಣೆ ನಡೆಯಿತು. ಹರಿನರಸಿಂಹ ಉಪಾಧ್ಯಾಯ ಇವರಿಂದ ಸಾನು ಉಬರಡ್ಕ ಇವರ ಭಾವ ಮೇಘ ಮಾಲೆ ಕವನ ಸಂಕಲನವೂ ವಿಮರ್ಶಾ ಸಹಿತ ಲೋಕಾರ್ಪಣೆಗೊಂಡಿತು.
ಗೌರವಾಧ್ಯಕ್ಷ ಖ್ಯಾತ ಅಂಕಣಗಾರ ಸಾಹಿತಿ ವಿ.ಬಿ. ಅರ್ತಿಕಜೆ, ಸ್ಥಾಪಕಾಧ್ಯಕ್ಷ ಮಧುರಕಾನನ ಗಣಪತಿ ಭಟ್, ಬಾಲ ಮಧುರಕಾನನ ಉಪಸ್ಥಿತರಿದ್ದರು.
ವಿಶ್ವವಿನೋದ ಬನಾರಿ (ಯಕ್ಷಗಾನ), ವಾಸುದೇವ ರಾವ್ ಶೇಡಿಗುಮ್ಮೆ (ಯಕ್ಷಗಾನ ಪ್ರಸಂಗ ರಚನೆ), ಪಿ ಎನ್ ಮೂಡಿತ್ತಾಯ (ಶಿಕ್ಷಣ ಸಾಹಿತ್ಯ ಸಂಘಟನೆ), ಪಾರ್ವತಿ ಶಾಸ್ತ್ರಿ (ಕಾವ್ಯ ಸಾಹಿತ್ಯ), ರಘುನಾಥ ರಾವ್ (ಕಾವ್ಯ ಸಾಹಿತ್ಯ), ಡಾ ಹರಿಕೃಷ್ಣ ಪಾಣಾಜೆ (ಆಯುರ್ವೇದ ವೈದ್ಯಕೀಯ, ಉದ್ದಿಮೆ, ಸಮಾಜ ಸೇವೆ) ಕವಿತಾ ಅಡೂರು (ಸಾಹಿತ್ಯ ಶಿಕ್ಷಣ ಅಂಕಣ ಬರಹ), ಸುಂದರ ಭಟ್ ಕಾನ (ಶಿಕ್ಷಣ ಸಾಹಿತ್ಯ) ಶಿವಪ್ರಸಾದ್ ಮಯ್ಯ (ಪಶು ಸಂಗೋಪನೆ ಕೃಷಿ) ಮುಂತಾದವರನ್ನು ಸನ್ಮಾನಿಸಲಾಯಿತು.
ಅನಂತರ ಎಸ್.ಕೆ ಗೋಪಾಲಕೃಷ್ಣ ಇವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯು ಕವಿತಾ ಅಡೂರು ರವರಿಂದ ಚಾಲನೆಗೊಂಡು ಅಶೋಕ ಎನ್ ಕಡೇ ಶಿವಾಲಯ, ಉದಯರವಿ ಕೊಂಬ್ರಾಜೆ, ವಿಜಯ ಕಾನ, ಶಂಕರಿ ಶರ್ಮ, ಡಾ ಸುರೇಶ್ ನೆಗಳಗುಳಿ, ಪಿಂಗಾರ ಸಾಹಿತ್ಯ ಬಳಗದ ಮುಖ್ಯಸ್ಥ ರೇಮಂಡ್ ಡಿಕುನ್ಹಾ ತಾಕೊಡೆಯವರ ಉಪಸ್ಥಿತಿಯಲ್ಲಿ ನೆರವೇರಿತು.
ಸಾನು ಉಬರಡ್ಕ, ಪ್ರೇಮಾ ಉದಯಕುಮಾರ್, ಪ್ರಮೀಳಾ ರಾಜ್, ವಿಶ್ವನಾಥ ಕುಲಾಲ್, ಅಶ್ವತ್ಥ ಬರಿಮಾರು, ಭಾರತಿ ಕೊಲ್ಲರ ಮಜಲು, ಧನ್ಯಶ್ರೀ ಸರಳಿ, ಆಶಾ ಮಯ್ಯ, ಸುಮಾಕಿರಣ್ ಪಾರ್ವತೀ ಶಾಸ್ತ್ರಿ, ಗೋಪಾಲಕೃಷ್ಣ ಶಾಸ್ತ್ರಿ, ಸೌಮ್ಯಾ ಗೋಪಾಲ್, ವಿಜಯ ಕಾನ, ಶಂಕರಿ ಶರ್ಮಾ, ಹಿತೇಶ್ ಕುಮಾರ್, ಶ್ಯಾಮ ಪ್ರಸಾದ ಭಟ್ ಕಾರ್ಕಳ,ಪ್ರ ಭಾಕರ ಭಟ್ಚ ಟಿ, ಕೃಷ್ಣಪ್ರಸಾದ್, ಜಯಶ್ರೀ ಭಟ್ ಪುತ್ತೂರು, ರಶ್ಮಿತಾ ಸುರೇಶ್, ಎ ಪಿ ಉಮಾಶಂಕರಿ ಮರಿಕೆ, ಮಾನಸ ವಿಜಯ್ ಕೈಂತಜೆ ಹಾಗೂ ಲತಾ ಆಚಾರ್ಯ ಬನಾರಿ, ರೇಮಂಡ್ ಡಿ ಕುನ್ಹಾ, ಡಾ ಸುರೇಶ್ ನೆಗಳಗುಳಿ ಸಹಿತ ಹಲವರು ಸ್ವರಚಿತ ಕವನ ವಾಚನ ಮಾಡಿದರು
ಪ್ರಸನ್ನಾ ಸಿ ಎಸ್ ಕಾಕುಂಜೆ ಅವರಿಂದ ಪ್ರಾರ್ಥನೆ ಹಾಗೂ ಭಾವಗಾಯನ ನಡೆಯಿತು. ಆಶಾ ಮಯ್ಯ, ಸುಮಾಕಿರಣ್, ಸಂಧ್ಯಾ ಕಿರಣ್ ಮತ್ತು ಭಾರತಿ ಕೊಲ್ಲರ ಮಜಲು ವಿವಿಧ ನಿರೂಪಣೆಗಳನ್ನು ಮಾಡಿದರು. ಬಳಿಕ ಗೋಪಾಲಕೃಷ್ಣ ಶಾಸ್ತ್ರಿಯವರು ಧನ್ಯವಾದ ಸಮರ್ಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ