ಸುಗಮ ಸಂಗೀತಕ್ಕೆ ತನ್ನದೇ ಆದ ಹೊಸ ಛಾಪನ್ನು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾವಗೀತೆಯನ್ನು ಹೊಸ ಹಂತಕ್ಕೆ ಏರಿಸಿದ, ಒಂದೇ ವೇದಿಕೆಯಲ್ಲಿ ಜುಗಲ್ ಬಂದಿಯ ಹಾಗೆ ಯಕ್ಷಗಾನ, ಸಂಗೀತ, ಭಾವಗೀತೆ ಇದರ ಮಧ್ಯೆ ಕೇವಲ ಶ್ರುತಿ ಇಟ್ಟು ಗಮಕವನ್ನ ಹಾಡಿ ಕೇಳುಗರ ಹುಬ್ಬೇರಿಸುವಂತೆ ಮಾಡಿ ಉಳಿದ ಕಲಾವಿದರಿಂದ ನಮಸ್ಕಾರವನ್ನು ಗೌರವ ಪೂರ್ವಕವಾಗಿ ಸ್ವೀಕರಿಸಿದ ಗಮಕಿ ಚಂದ್ರಶೇಖರ ಕೆದ್ಲಾಯರು ಇನ್ನಿಲ್ಲ.
ನನ್ನ ಗಮಕ ಪರೀಕ್ಷೆಗೆ ಎಕ್ಸಾಮಿನರಾಗಿ ಬಂದವರು ಅವರು. ಅವರ ಜೊತೆ ಹಲವಾರು ಕಾರ್ಯಕ್ರಮಗಳಲ್ಲಿ ವ್ಯಾಖ್ಯಾನ ಮಾಡಿದಂತಹ ಭಾಗ್ಯ ನನ್ನದು. ದಕ್ಷಿಣ ಕನ್ನಡ ಜಿಲ್ಲೆಯ ಗಮಕ ಸಮ್ಮೇಳನ ತಾಲೂಕು ಸಮ್ಮೇಳನಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಂತೋಷದಿಂದ ಹರಸಿದ ಗಮಕಿ ಚಂದ್ರಶೇಖರ ಕೆದಿರಾಯರ ಆತ್ಮಕ್ಕೆ ಸದ್ಗತಿಯನ್ನು ಕೋರುತ್ತೇನೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ಗಮಕಲಾ ಪರಿಷತ್ತು ಅಧ್ಯಕ್ಷ ಪ್ರೊ. ಮಧೂರು ಮೋಹನ ಕಲ್ಲೂರಾಯ ಸಂತಾಪ ಸೂಚಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ