ಅಭಿಮತ: ಕಾರ್ಕಳದಲ್ಲಿ ರಾಜಕೀಯ ಕುರುಕ್ಷೇತ್ರ

Upayuktha
0

"ಗುರು ಶಿಷ್ಯರ ನಡುವೆ ರಾಜಕೀಯ ಧರ್ಮ ಯುದ್ಧಕ್ಕೆ ವೇದಿಕೆ ಸಜ್ಜು. ಈ ರಾಜಕೀಯ ರಣರಂಗದಲ್ಲಿ ದ್ರೇೂಣಾರ್ಜುನ ಕಾಳಗ ಅನ್ನುವ ತರದಲ್ಲಿ ರಂಗಸ್ಥಳ ತಯಾರಾಗಿವುದಂತೂ ನಿಜ. ಒಂದು ಕಾಲದಲ್ಲಿ ಕಾಂಗ್ರೆಸ್ಸಿನ ಭದ್ರ ಕೇೂಟೆ ಅನ್ನಿಸಿಕೊಂಡಿದ್ದ ಕಾಕ೯ಳದ ಕಾಂಗ್ರೆಸ್‌ ಕಲಿಗಳನ್ನು ಸದೆ ಬಡಿದು ಇಡಿ ಕಾಕ೯ಳ ಕ್ಷೇತ್ರವನ್ನೇ ತನ್ನ ಮಡಿಲಿಗೆ ಸೇರಿಸಿಕೊಂಡ ಕೀರ್ತಿ ಸಚಿವರಾಗಿರುವ ಸುನಿಲ್‌ ಕುಮಾರ್‌ಗೆ ಸಲ್ಲುತ್ತದೆ. ಮೇೂದಿ ಮಂತ್ರ ಹಿಂದುತ್ವದ ಅಲೆ ಮತ್ತು ಸ್ವಂತ ಪರಾಕ್ರಮದ ಬಿರುಸ್ಸು ಬಾಣದ ಮಾತು ಧನ ಜನ ಶಸ್ತ್ರಾಸ್ತ್ರಗಳ ಬಲದೊಂದಿಗೆ ಕಾಕ೯ಳವನ್ನು ತನ್ನ ಸುರಕ್ಷಿತ ಆಟದ ಮೈದಾನವನ್ನಾಗಿ ರೂಪಿಸಿಕೊಂಡಿದ್ದ ಸುನಿಲ್‌ರವರಿಗೆ ಈ ಕ್ಷೇತ್ರದಲ್ಲಿ ಎದುರಾಳಿಗಳೇ ಇಲ್ಲ ಅನ್ನುವ ವಾತಾವರಣ ಸೃಷ್ಟಿಯಾಗಿತ್ತು. ಆದರೆಕೊನೆಯ ಕ್ಷಣದಲ್ಲಿ ಸುನಿಲ್ ರವರಿಗೆ ಸಕಲ ಬಿಲ್ಲು ವಿದ್ಯೆ ಕಲಿಸಿಕೊಟ್ಟ ದ್ರೇೂಣಾಚಾಯ೯ರೆ ಎದುರಾಗಿ ಯುದ್ಧಕ್ಕೆ ನಿಂತಿರುವುದು ಕುರು ಕ್ಷೇತ್ರ ರಣರಂಗಕ್ಕೆ ಇನ್ನಷ್ಟು ಮೆರುಗು ನೀಡಿದೆ ಅನ್ನುವುದು ಅಷ್ಟೇ ಸತ್ಯ. ಅಂತೂ ಗುರು ದ್ರೇೂಣಾಚಾಯ೯ ಪ್ರಮೇೂದ ಮುತ್ತಾಲಿಕ ಶರಶಯ್ಯೆಯಲ್ಲಿ ಮಲಗಿ ಯುದ್ಧ ಮಾಡುತ್ತಾರೊ; ಬಿಲ್ಲು ಬಾಣ ಹಿಡಿದು ರಣರಂಗಕ್ಕೆ ನುಗ್ಗಿ ಕಾದಾಡುತ್ತಾರೊ ಗೊತ್ತಿಲ್ಲ?. ಕೊನೆಗೂ ಒಂದಂತೂ ಸತ್ಯ ಈ ಗುರು ಶಿಷ್ಯರಿಬ್ಬರೂ ನಂಬಿರುವ ಪರಮ ಶಕ್ತಿ ಅಂದರೆ ಡಿಲ್ಲಿಯಲ್ಲಿ ಪವಡಿಸಿರುವ ಶ್ರೀ ಕೃಷ್ಣ ಪರಮಾತ್ಮ "ಶ್ರೀ ಮೇೂದೀಜಿಯವರೆ" ಹಾಗಾಗಿ ಶ್ರೀ ಕೃಷ್ಣನ ಆಶೀರ್ವಾದ ಯಾರಿಗೆ ಒಲಿಯುತ್ತದೊ ಅವರಿಗೆ ವಿಜಯದ ದಶ೯ನವಾಗ ಬಹುದು. ಅಂತೂ ಇದೆಲ್ಲವೂ ಶ್ರೀ ಕೃಷ್ಣ ಪರಮಾತ್ಮನ ರಾಜಕೀಯ ಆಟವುಾ ಇರ ಬಹುದು? ಗೊತ್ತಿಲ್ಲ!


ಗುರು ದ್ರೇೂಣರು ಶಿಷ್ಯನ ಮೇಲೆ ಪ್ರಯೇೂಗಿಸಿರುವ ಬಾಣ ತುಂಬಾ ತೀಕ್ಷ್ಣವಾದ ಬಾಣವೇ. ಹಿಂದುತ್ವ ಬಾಣದ ಜೊತೆಗೆ ಶಿಷ್ಯನ ನೈತಿಕತೆಯನ್ನೆ ಕುಗ್ಗಿಸುವ ಭ್ರಷ್ಟಾಚಾರದ ಬ್ರಹ್ಮಾಸ್ತ್ರ. ಈ ಬ್ರಹ್ಮಾಸ್ತ್ರಕ್ಕೆ ಪ್ರತಿಯಾಗಿ ಶಿಷ್ಯ ತನ್ನ ಗುರುಗಳ ಮೇಲೆ ಯಾವ ಪ್ರತಿ ಅಸ್ತ್ರ ಹೂಡುತ್ತಾರೊ ಕಾದು ನೇೂಡ ಬೇಕು. ಅಂತೂ ಕೊನೆಯಲ್ಲಿ ದ್ರೇೂಣಾಚಾಯ೯ರು ಶಸ್ತ್ರ ತ್ಯಾಗ ಮಾಡಿ ಕೃಷ್ಣಾಪ೯ಣಾ ಅಂದರೂ ಆಶ್ಚರ್ಯಪಡಬೇಕಾಗಿಲ್ಲ.


ದ್ರೇೂಣಾಚಾಯ೯ರ ಪರಮಾಪ್ತ ಶಿಷ್ಯನಿಗೆ ಇನ್ನು ರಣರಂಗದಲ್ಲಿ ಸೆಣಸಾಡ ಬೇಕಾದದ್ದು ಕೌರವ ಪಡೆ ಅರ್ಥಾತ್‌ ಕಾಂಗ್ರೆಸ್ ಪಡೆಯಿಂದ. ಆದರೆ ಕೌರವ ಪಡೆ ಇದಾಲೇ ರಣರಂಗದಲ್ಲಿ ಸೇೂತು ಸುಣ್ಣಾಗಿ ಈ ಕಲಿ ಪಾರ್ಥನನ್ನು ಯಾರು ಎದುರಿಸುವುದು ಅನ್ನುವ ಲೆಕ್ಕಾಚಾರದಲ್ಲಿ ತಳಮಳಗೊಂಡಿರುವುದಂತೂ ನಿಜ. ಎಲ್ಲಿಯಾದರು ನಮ್ಮ ಗುರು ಆಚಾರ್ಯರು ಬಿಲ್ಲು ಹಿಡಿದು ಎದ್ದು ನಿಂತು ಹೇೂರಾಡಿದರೆ ನಮಗೊಂದಿಷ್ಟು ಲಾಭವಾಗಬಹುದು ಅನ್ನುವುದು ವಿಪಕ್ಷ ಪಡೆಯ ಸುಲಭ ಲೆಕ್ಕಾಚಾರ. ಆದರೆ ಈ ಗಾಂಡೀವನನ್ನು ಎದುರಿಸುವಲ್ಲಿ ನಮ್ಮಲ್ಲಿ ಯಾರು ಸಮರ್ಥರು ಅನ್ನುವುದೇ ಕೌರವ ಪಡೆಯಲ್ಲಿನ ಬಹು ದೊಡ್ಡ ಸಮಸ್ಯೆ.


ಈ ಕುರು ಕ್ಷೇತ್ರದ ಯುದ್ಧದಲ್ಲಿ ಹೇಗಾದರೂ ಮಾಡಿ ಗೆಲ್ಲಲೇ ಬೇಕು ಅನ್ನುವ ಹಠದಿಂದಲೇ ಕಲಿ ಪಾಥ೯ ಪರಶುರಾಮನ ಕೃಪೆಗೆ ಜಪ ತಪದಲ್ಲಿ ಮಗ್ನರಾಗಿರುವುದಂತೂ ನೂರಕ್ಕೆ ನೂರು ಸತ್ಯ.ಅಂತೂ ಕೊನೆಯ ಕ್ಷಣದಲ್ಲಿ ಶ್ರೀ ಕೃಷ್ಣಾನುಗ್ರಹ ಅಜು೯ನನಿಗೆ ಒಲಿದರೂ ಆಶ್ಚರ್ಯ ಪಡಬೇಕಾಗಿಲ್ಲ.

- ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top