ಮಕ್ಕಳು ಮಾಡಿದ ತಪ್ಪಿಗೆ ಅಪ್ಪ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಕರ್ನಾಟಕ ಬಿಜೆಪಿಯಲ್ಲಿ. ಡಿಸೆಂಬರ್ 15 ರಿಂದ ಜನವರಿ 15ರ ಅವಧಿಯಲ್ಲಿ ಇಂಡಿಯಾ ಟುಡೆ ಮತ್ತು ಸಿವೇೂಟರ್ ರಾಷ್ಟ್ರ ವ್ಯಾಪಿಯಾಗಿ ಪ್ರಧಾನಿ ಮೇೂದಿಯವರ ಆಡಳಿತ ವೈಖರಿ ಹಾಗೂ ಮೇೂದಿಜಿಯವರ ಕುರಿತಾಗಿ ಜನಾಭಿಪ್ರಾಯ ಹೇಗಿತ್ತು ಅನ್ನುವ ಕುರಿತಾಗಿ ಸಮೀಕ್ಷಾ ವರದಿ ತಯಾರಿಸಿ ಜನರ ನಾಡಿಮಿಡಿತ ಹೇಗಿದೆ ಅನ್ನುವುದು ಅಳೆದು ತೂಗಿ ತನ್ನ ಸಮೀಕ್ಷಾ ವರದಿಯನ್ನು ಪ್ರಕಟಿಸಿದೆ.
ಈ ಸಮೀಕ್ಷಾ ವರದಿಯ ಫಲಿತಾಂಶ ಹೇಗಿತ್ತು ಅಂದರೆ ದೇಶ ವ್ಯಾಪಿಯಾಗಿ ಮೇೂದಿಯವರಿಗೆ ಅಭೂತ ಪೂವ೯ವಾದ ಬೆಂಬಲ ವ್ಯಕ್ತವಾಗಿದೆ. ಆದರೆ ತುಂಬಾ ನೇೂವಿನ ಸಂಗತಿ ಅಂದರೆ ಇದೇ ವಷ೯ದಲ್ಲಿ ಚುನಾವಣೆ ಎದುರಿಸ ಬೇಕಾದ ಕರ್ನಾಟಕದಲ್ಲಿ ವ್ಯಕ್ತವಾದ ಜನಾಭಿಪ್ರಾಯ ಮಾತ್ರ ಮೋದಿಯವರಿಗೆ ನಿಜಕ್ಕೂ ಬೇಸರ ತರುವ ಅಂಕಿ ಅಂಶ ಅನ್ನುವುದರಲ್ಲಿ ಎರಡು ಮಾತಿಲ್ಲ.
ಈ ಸಮೀಕ್ಷೆಯ ವರದಿ ಪ್ರಕಾರ ಈಗ ಲೇೂಕ ಸಭಾ ಚುನಾವಣೆ ನಡೆಸಿದರೆ ರಾಜ್ಯದಲ್ಲಿ ಬಿಜೆಪಿಗೆ ಗಳಿಸುವ ಸೀಟುಗಳು ಕೇವಲ ಹತ್ತರಿಂದ ಹನ್ನೊಂದು.ಅದೇ ಕಾಂಗ್ರೆಸ್ ಮೈತ್ರಿ ಕೂಟಕ್ಕೆ 17 ಸ್ಥಾನಗಳು ಪ್ರಾಪ್ತವಾಗ ಬಹುದು ಅನ್ನುವುದು ಈ ವರದಿಯ ತಿರುಳು.
ಕಳೆದ ಬಾರಿ ಅಂದರೆ 2019ರ ಲೇೂಕ ಸಭಾ ಚುನಾವಣೆಯಲ್ಲಿ 28 ಸ್ಥಾನಗಳಲ್ಲಿ 25 ಸ್ಥಾನಗಳನ್ನು ಗಳಿಸಿದ ಬಿಜೆಪಿ ಈ ಬಾರಿ ಇಷ್ಟೊಂದು ನಿಕೃಷ್ಟ ಸ್ಥಾನಕ್ಕೆ ಇಳಿಯಲು ಕಾರಣವೇನು? ಹಾಗಾದರೆ ಕನಾ೯ಟಕದ ಮತದಾರರು ಮೇೂದಿಯ ಆಡಳಿತ ವಿರೇೂಧಿಸಿ ಈ ಅಭಿಪ್ರಾಯಕ್ಕೆ ಬಂದಿದ್ದಾರಾ? ಹಾಗಾದರೆ ಮೇೂದಿಯನ್ನೆ ನಂಬಿಕೊಂಡಿದ 2023ರ ರಾಜ್ಯ ಚುನಾವಣಾ ಭವಿಷ್ಯ ಏನಾಗ ಬಹುದು? ಎಂಬಿತ್ಯಾದಿ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಚಚೆ೯ಗೆ ಗ್ರಾಸವಾಗಿರುವುದಂತೂ ಸತ್ಯ.
ಒಂದಂತೂ ಸತ್ಯ ಕರ್ನಾಟದಲ್ಲಿ ಮೇೂದೀಜಿವರಿಗೆ ಹಿಂಜರಿತವಾಗಿರುವುದು ಮೇೂದಿಯವರ ಕೇಂದ್ರ ಆಡಳಿತದಿಂದಾಗಿ ಖಂಡಿತವಾಗಿಯೂ ಅಲ್ಲ. ರಾಜ್ಯ ಆಡಳಿತದ ವೈಫಲ್ಯವೇ ಮೇೂದಿಜಿಯವರ ವ್ಯಕ್ತಿತ್ವಕ್ಕೆ ಕಡಿಮೆ ಅಂಕಗಳನ್ನು ತಂದಿದೆ ಅನ್ನುವುದು ಅಷ್ಟೇ ಸ್ವಷ್ಟ.
2018ರ ವಿಧಾನ ಸಭಾ ಚುನಾವಣೆಯಲ್ಲಿ 105 ಸ್ಥಾನಗಳನ್ನು ಗಳಿಸಿಕೊಂಡಾಗಲೇ ಇದನ್ನು ಅಥ೯ಮಾಡಿಕೊಳ್ಳ ಬೇಕಿತ್ತು. ಹೇಗಾದರೂ ಸರಿ ದಕ್ಷಿಣ ಭಾರತದಲ್ಲಿ ನಾವು ಅಧಿಕಾರ ಕಟ್ಟ ಬೇಕು ಮುಖ್ಯ ಮಂತ್ರಿ ಯಾಗ ಬೇಕೆಂಬ ಕನಸಿನಲ್ಲಿ ಅನ್ಯ ಪಕ್ಷದ ಶಾಸಕರನ್ನು ಅಧಿಕಾರ ಹಣದಾಸೆಯಿಂದ ಹೈಜಾಕ್ ಮಾಡಿ ಸರ್ಕಾರ ಕಟ್ಟಿದರ ಕಹಿ ಫಲವಾಗಿ ಇಂದು ಬಿಜೆಪಿ ಚುನಾವಣೆಯಲ್ಲಿ ಈ ಫಲಿತಾಂಶ ನೇೂಡಬೇಕಾದ ಸ್ಥಿತಿಗೆ ಬಂದಿದೆ.
ಈ ಸಮೀಕ್ಷಾ ವರದಿಯಲ್ಲಿ ಉತ್ತರ ಪ್ರದೇಶ ಗುಜರಾತ್ ಮುಂತಾದ ಕಡೆ ಮೇೂದಿಯವರಿಗೆ ಹಿನ್ನಡೆಯಾಗಲಿಲ್ಲ ಅದಕ್ಕೆ ಮುಖ್ಯ ಕಾರಣ ಅಲ್ಲಿನ ಸ್ಥಳೀಯ ನಾಯಕತ್ವ ಮತ್ತು ಆಡಳಿತ ಮೇೂದಿಯವರ ವಚ೯ಸಿಗೆ ಪೂರಕವಾಗಿ ನಿಂತಿದೆ. ಆದರೆ ನಮ್ಮಲ್ಲಿ ನಾಯಕತ್ವ ಆಡಳಿತದಲ್ಲಿ ಶೂನ್ಯತೆ ನ್ಯೂನತೆ ಎದ್ದು ಕಾಣುತ್ತಿದೆ.
ರಾಜ್ಯದಲ್ಲಿ ಆಡಳಿತಕ್ಕೆ ದಕ್ಷತೆ ಚುರುಕು ನೀಡ ಬೇಕಾದ ಸರಕಾರಿ ನೌಕರರ ಪಿಂಚಣಿಗೆ ಕತ್ತರಿ ಹಾಕಿ ಅವರನ್ನು ವೃಧಾಪ್ಯಕಾಲದಲ್ಲಿ ನರಕಕ್ಕೆ ತಳುವ ಹೊಸ ಪಿಂಚಣಿ ಸರಕಾರದ ಮರಣ ಶಾಸದ ನೀತಿ ಅನ್ನುವುದು ಸಾವ೯ಜನಿಕರಲ್ಲಿ ಅಭಿಪ್ರಾಯ ಮೂಡಿ ಬಂದಿದೆ; ಮಾತ್ರವಲ್ಲ ಪ್ರತಿಭಾವಂತ ಯುವ ಜನತೆ ಇನ್ನು ಮುಂದೆ ಸರಕಾರಿ ಕೆಲಸಕ್ಕೆ ಹೇೂಗ ಬೇಕೊ ಬೇಡವೇ ಅನ್ನುವ ಮನಸ್ಸು ಮಾಡುವ ಪರಿಸ್ಥಿತಿ ಬಂದಿದೆ.ಇದರಿಂದಾಗಿ ಶಿಕ್ಷಣ ಮತ್ತು ಆಡಳಿತ ಕ್ಷೇತ್ರದಲ್ಲಿ ಪ್ರತಿಭಾವಂತ ಶಿಕ್ಷಕರನ್ನು ಆಡಳಿತಗಾರನ್ನು ಪಡೆಯುವುದು ಕಷ್ಟ ವಾದೀತು ಅನ್ನುವ ಭಯ ಹೆತ್ತವರಲ್ಲಿ ವಿದ್ಯಾರ್ಥಿಗಳಲ್ಲಿ ಮತ್ತು ಜನಸಾಮಾನ್ಯರಲ್ಲಿ ಕಾಡಲು ಪ್ರಾರಂಭಿಸಿದೆ.
ಇದಾಲೇ ತುರಾತುರಿಯಿಂದ ರಾಜ್ಯ ಸರ್ಕಾರ ಜ್ಯಾರಿಗೆ ತಂದಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕಾಲೇಜಿನ ಪದವಿ ಮಟ್ಟದಲ್ಲಿ ಸಾಕಷ್ಟು ಗೊಂದಲ ಸೃಷ್ಟಿ ಮಾಡಿರುವುದಂತೂ ನಿಜ. ಇದು ಕೂಡ ಯುವ ಮತದಾರರನ್ನು ಚಿಂತೆಗೆ ತಳಿದೆ.
ಇದರ ಜೊತೆಗೆ ಭ್ರಷ್ಟಾಚಾರ, ಬೆಲೆ ಏರಿಕೆ, ಪಕ್ಷದೊಳಗಿನ ಭಿನ್ನಾಭಿಪ್ರಾಯದ ಮಾತುಗಳು ನಾಯಕತ್ವದ ಕೊರತೆ. ಮಾತ್ರವಲ್ಲ, ರಾಜ್ಯದ ಎಲ್ಲಾ ಪ್ರಮುಖ ನಿರ್ಧಾರವನ್ನು ದೆಹಲಿಯಲ್ಲಿ ಕೂತ ಮೇೂದೀಜಿ ಅಮಿತ್ ಶಾ ನಿರ್ಧರಿಸಬೇಕಾದ ಪರಿಸ್ಥಿತಿ. ಇವೆಲ್ಲವೂ ಕೂಡ ಕನಾ೯ಟಕದಲ್ಲಿ ಬಿಜೆಪಿ ಪಾಲಿಗೆ ಆಡಳಿತ ವಿರೇೂಧಿ ಅಲೆಯಾಗಿ ಎದ್ದಿರುವುದಂತೂ ಸತ್ಯ.
ಒಟ್ಟಿನಲ್ಲಿ ಆಡಳಿತ ರೂಢ ಆಯಾಯ ಶಾಸಕರು ತಮ್ಮ ಕ್ಷೇತ್ರದಲ್ಲಿ ಮಾಡಿದ ಸಾಧನೆಯ ಮೇಲೆ ಗೆದ್ದು ಬರ ಬೇಕೇ ಬಿಟ್ಟರೆ ಅವರ ಗೆಲುವಿಗೆ ಒಟ್ಟಾರೆ ರಾಜ್ಯ ಆಡಳಿತದ ಫಲ ಶುಾನ್ಯ ಅನ್ನುವುದು ಈ ಸಮೀಕ್ಷೆಯಿಂದ ವಿಶ್ಲೇಷಿಸ ಬಹುದಾದ ಫಲಿತಾಂಶ.
- ಪ್ರೊ.ಕೊಕ್ಕರ್ಣೆ ಸುರೇಂದ್ರ ನಾಥ ಶೆಟ್ಟಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ