ಬದಿಯಡ್ಕ: ಬದಿಯಡ್ಕದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಶ್ರೀ ಅಯ್ಯಪ್ಪ ಮಂದಿರದ ಶಿಲಾನ್ಯಾಸ ಹಾಗೂ ನಿಧಿ ಸಮರ್ಪಣಾ ಕಾರ್ಯಕ್ರಮವು ಜ.26 ಗುರುವಾರ ಜರಗಲಿರುವುದು. ಬೆಳಗ್ಗೆ 8 ಗಂಟೆಗೆ 12 ನಾಳಿಕೇರ ಗಣಪತಿ ಹವನ, 9 ಗಂಟೆಗೆ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಹಾಗೂ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಇವರಿಗೆ ಪೂರ್ಣಕುಂಭ ಸ್ವಾಗತ, 10.48ರಿಂದ 11.32ರ ಶುಭಮುಹೂರ್ತದಲ್ಲಿ ಶಿಲಾನ್ಯಾಸ, ಬ್ರಹ್ಮಶ್ರೀ ಯೋಗೀಶ ಕಡಮಣ್ಣಾಯ ಆರಿಕ್ಕಾಡಿ ಇವರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮಗಳು ನಡೆಯಲಿದೆ.
ಸಭಾಕಾರ್ಯಕ್ರಮ :
೧೧ ಗಂಟೆಗೆ ಶಬರಿಗಿರಿ ಮಹಿಳಾ ಭಜನಾ ಸಂಘದವರಿಂದ ಪ್ರಾರ್ಥನೆಯೊಂದಿಗೆ ಸಭಾಕಾರ್ಯಕ್ರಮ ಪ್ರಾರಂಭವಾಗಲಿದೆ. ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ಟಸ್ಟ್‌ನ ಅಧ್ಯಕ್ಷ ನರೇಂದ್ರ ಬಿ ಎನ್ ಸ್ವಾಗತಿಸಲಿದ್ದಾರೆ. ಎಡನೀರು ಶ್ರೀಗಳು ಹಾಗೂ ಮಾಣಿಲ ಶ್ರೀಗಳು ಆಶೀರ್ವಚನ ನೀಡಲಿದ್ದಾರೆ. ರಕ್ಷಾಧಿಕಾರಿ ಬಿ.ವಸಂತ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಉದ್ಯಮಿ ಧಾರ್ಮಿಕ ಮುಂದಾಳು, ರಕ್ಷಾಧಿಕಾರಿ ಮಧುಸೂದನ್ ಆಯರ್ ಮಂಗಳೂರು, ರಕ್ಷಾಧಿಕಾರಿಗಳಾದ ಬಿ ಗೋಪಾಲಕೃಷ್ಣ ಪೈ, ಶಂಕರನಾರಾಯಣ ಮಯ್ಯ, ಶಂಕರನಾರಾಯಣ ಭಟ್ ಪೆರುಮುಂಡ, ಗೌರವ ಸಲಹೆಗಾರರಾದ ಡಾ. ಶ್ರೀನಿಧಿ ಸರಳಾಯ ಬದಿಯಡ್ಕ, ಸಿ.ಯಚ್. ರಾಜೇಶ್ ಮಾಸ್ತರ್ ಚಂಬಲ್ತಿಮಾರು ಗೌರವ ಉಪಸ್ಥಿತಿಯಿರುವರು. ಧಾರ್ಮಿಕ ಮುಂದಾಳುಗಳಾದ ಕೆ.ಸುರೇಶ ಕಾಸರಗೋಡು, ರಾಮಪ್ರಸಾದ್ ಕಾಸರಗೋಡು, ಅಭಿಲಾಶ್ ಕೆ.ವಿ., ಬಳ್ಳಂಬೆಟ್ಟು ರವಿಶಂಕರ ಭಟ್ ಶಿರಸಿ, ಅಶ್ವತ್ಥ್ ಪೂಜಾರಿ ಲಾಲ್‌ಬಾಗ್, ದೀಪಕ್ ರೈ ಪಾಣಾಜೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು, ಧಾರ್ಮಿಕ ಮುಂದಾಳುಗಳು, ದಾನಿಗಳು ಪಾಲ್ಗೊಳ್ಳಲಿದ್ದಾರೆ. ಉಪಾಧ್ಯಕ್ಷ ರವೀಂದ್ರ ಶೆಟ್ಟಿ ವಳಮಲೆ ಧನ್ಯವಾದ ಸಮರ್ಪಣೆ ಮಾಡಲಿದ್ದು, ಕೋಶಾಧಿಕಾರಿ ಗುರುಪ್ರಸಾದ ರೈ ಕೆ. ನಿರೂಪಿಸಲಿದ್ದಾರೆ. ಮಧ್ಯಾಹ್ನ ಪ್ರಸಾದ ಭೋಜನದೊಂದಿಗೆ ಕಾರ್ಯಕ್ರಮ ಸಂಪನ್ನವಾಗಲಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ