ಮುಳಿಯ ಜ್ಯುವೆಲ್ಸ್‌ನಲ್ಲಿ ಜ.9ರಿಂದ 25ರ ವರೆಗೆ ವಿಶಿಷ್ಟ ವಜ್ರಾಭರಣಗಳ ಉತ್ಸವ

Upayuktha
0

ಪುತ್ತೂರು: ನಾಡಿನ ಪ್ರಸಿದ್ಧ ಚಿನ್ನಾಭರಣ ಮಳಿಗೆ ಮುಳಿಯ ಜ್ಯುವೆಲ್ಸ್‌ನಲ್ಲಿ ಸೋಮವಾರದಿಂದ (ಜ.9) ವಿಶೇಷ ವಜ್ರಾಭರಣಗಳ ಉತ್ಸವ (ಯುನಿಕ್‌ ಡೈಮಂಡ್ ಫೆಸ್ಟ್‌) ಪ್ರಾರಂಭವಾಗಲಿದೆ. ಉತ್ಸವವು ಜ.25ರ ವರೆಗೆ ನಡೆಯಲಿದೆ.

ಮುಳಿಯ ಜ್ಯುವೆಲ್ಸ್‌ನ ಪುತ್ತೂರು ಮತ್ತು ಬೆಳ್ತಂಗಡಿ ಮಳಿಗೆಗಳಲ್ಲಿ ಈ ಯುನಿಕ್ ಡೈಮಂಡ್ ಫೆಸ್ಟ್‌ ನಡೆಯಲಿದೆ.

ಕೇವಲ 4,850 ರೂ.ಗಳ ಕೈಗೆಟುಕುವ ಬೆಲೆಗಳಿಂದ ವಿವಿಧ ಶ್ರೇಣಿಗಳ ಅಮೂಲ್ಯ ಡೈಮಂಡ್ಸ್‌ ಮತ್ತು ಕಿಸ್ನ ಗೋಲ್ಡ್ ಅಂಡ್‌ ಡೈಮಂಡ್‌ ಜ್ಯುವೆಲ್ಲರಿಗಳು ಲಭ್ಯವಿರುತ್ತವೆ.

ವಜ್ರದ ಆಭರಣಗಳ ಮೇಲೆ ಶೇ 95ರಷ್ಟು ವಿನಿಮಯ ಮೌಲ್ಯ ಹಾಗೂ ಶೇ 90ರಷ್ಟು ಬೈಬ್ಯಾಕ್‌ ಮೌಲ್ಯಗಳನ್ನು ನೀಡುವುದಾಗಿ ಮುಳಿಯ ಜ್ಯುವೆಲ್ಸ್‌ ಪ್ರಕಟಿಸಿದೆ. 

ಜ.9ರಂದು ಸೋಮವಾರ ಬೆಳಗ್ಗೆ ದೀಪೋಜ್ವಲನದೊಂದಿಗೆ ಉತ್ಸವ ಪ್ರಾರಂಭವಾಗಲಿದೆ. ಮುಖ್ಯ ಅತಿಥಿಗಳಾಗಿ ಪುತ್ತೂರು ಬೊಳುವಾರಿನ ಏಸ್‌ ಮೋಟಾರ್ಸ್‌ ಮಾಲೀಕರಾದ ಶ್ರೀ ಆಕಾಶ್ ಐತಾಳ್‌ ಮತ್ತು ಆಕಾಶ್‌ ಕೋಚಿಂಗ್‌ ಸೆಂಟರ್‌ನ ಮಾಲಕರಾದ ಶ್ರೀಮತಿ ನಾಗಶ್ರೀ ಐತಾಳ್‌ ಭಾಗವಹಿಸಲಿದ್ದಾರೆ.




إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top