ಮುಳಿಯ ಜ್ಯುವೆಲ್ಸ್‌ ವಿಶಿಷ್ಟ ವಜ್ರಾಭರಣಗಳ ಉತ್ಸವಕ್ಕೆ ಗ್ರಾಹಕರಿಂದ ವ್ಯಾಪಕ ಪ್ರತಿಕ್ರಿಯೆ

Upayuktha
0

ಪುತ್ತೂರು: ನಾಡಿನ ಪ್ರಸಿದ್ಧ ಚಿನ್ನಾಭರಣ ಮಳಿಗೆ ಮುಳಿಯ ಜ್ಯುವೆಲ್ಸ್‌ನಲ್ಲಿ ವಿಶೇಷ ವಜ್ರಾಭರಣಗಳ ಉತ್ಸವ (ಯುನಿಕ್‌ ಡೈಮಂಡ್ ಫೆಸ್ಟ್‌) ನಡೆಯುತ್ತಿದ್ದು, ಭಾರೀ ಪ್ರಮಾಣದಲ್ಲಿ ಆಭರಣ ಪ್ರಿಯರನ್ನು ಆಕರ್ಷಿಸುತ್ತಿದೆ.  ಪ್ರತಿದಿನ ಸಾವಿರಾರು ಗ್ರಾಹಕರು ಮಳಿಗೆಗಳಿಗೆ ಭೇಟಿ ನೀಡುತ್ತಿದ್ದು ತಮಗಿಷ್ಟವಾದ ವಜ್ರಾಭರಣಗಳನ್ನು ಖರೀದಿಸುತ್ತಿದ್ದಾರೆ.


ಕೇವಲ 4,850 ರೂ.ಗಳ ಕೈಗೆಟುಕುವ ಬೆಲೆಗಳಿಂದ ಪ್ರಾರಂಭವಾಗುವ  ವಿವಿಧ ಶ್ರೇಣಿಗಳ ಅಮೂಲ್ಯ ಡೈಮಂಡ್ಸ್‌ ಮತ್ತು ಕಿಸ್ನ ಗೋಲ್ಡ್ ಅಂಡ್‌ ಡೈಮಂಡ್‌ ಜ್ಯುವೆಲ್ಲರಿಗಳು ಲಭ್ಯವಿರುತ್ತವೆ.


ಕಿಸ್ನ ಶ್ರೇಣಿಯ ಪುರುಷರ ಉಂಗುರಗಳು 9,225 ರೂ.ಗಳಿಂದ, ಮಹಿಳೆಯರ ಉಂಗುರಗಳು 4,700 ರೂ.ಗಳಿಂದ ನೆಕ್ಲೇಸ್‌ಗಳು 48.400 ರೂ.ಗಳಿಂದ, ಮೂಗುತಿ- 2,800 ರೂ.ಗಳಿಂದ, ಸನ್‌ಶೈನ್‌ ಸೆಟ್‌ಗಳು 23,100 ರೂ.ಗಳಿಂದ, ಕಿವಿಯ ರಿಂಗ್‌ಗಳು 5,300 ರೂ.ಗಳಿಂದ, ಪೆಂಡೆಂಟ್‌ಗಳು 3,400 ರೂ.ಗಳಿಂದ ಹಾಗೂ ಬಳಗೆಳು 22,500 ರೂ.ಗಳಿಂದ ಪ್ರಾರಂಭವಾಗುತ್ತವೆ.


ವಜ್ರದ ಆಭರಣಗಳ ಮೇಲೆ ಶೇ 95ರಷ್ಟು ವಿನಿಮಯ ಮೌಲ್ಯ ಹಾಗೂ ಶೇ 90ರಷ್ಟು ಬೈಬ್ಯಾಕ್‌ ಮೌಲ್ಯಗಳನ್ನು ನೀಡುವುದಾಗಿ ಮುಳಿಯ ಜ್ಯುವೆಲ್ಸ್‌ ಪ್ರಕಟಿಸಿದೆ. 


ಜ.9ರಿಂದ ಪ್ರಾರಂಭವಾಗಿರುವ ಡೈಮಂಡ್‌ ಫೆಸ್ಟ್‌ಗೆ ಪ್ರತಿದಿನ ನೂರಾರು ಗ್ರಾಹಕರು ಆಗಮಿಸುತ್ತಿದ್ದು, ಅತಿ ಕಡಿಮೆ ಬೆಲೆಗೆ ಅತ್ಯುತ್ತಮ ಗುಣಮಟ್ಟದ ವಜ್ರಾಭರಣಗಳನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ವಿಶ್ವಾಸಾರ್ಹತೆ ಮತ್ತು ಗುಣಮಟ್ಟಕ್ಕೆ ಹೆಸರಾಗಿರುವ ಮುಳಿಯ ಜ್ಯುವೆಲ್ಸ್‌ ಮಳಿಗೆಗಳಿಗೆ ಭೇಟಿ ನೀಡುತ್ತಿರುವ ಗ್ರಾಹಕರ ಸಂಖ್ಯೆಯೇ 'ಯುನಿಕ್ ಡೈಮಂಡ್ ಫೆಸ್ಟ್‌ನ ಜನಪ್ರಿಯತೆಯನ್ನು ಸಾರುವಂತಿದೆ.


ಮುಳಿಯ ಜ್ಯುವೆಲ್ಸ್‌ನ ಪುತ್ತೂರು ಮತ್ತು ಬೆಳ್ತಂಗಡಿ ಮಳಿಗೆಗಳಲ್ಲಿ ಈ ಯುನಿಕ್ ಡೈಮಂಡ್ ಫೆಸ್ಟ್‌ ನಡೆಯುತ್ತಿದೆ. ಉತ್ಸವವು ಜ.25ರ ವರೆಗೆ ನಡೆಯಲಿದ್ದು, ಮದುವೆ ಹಾಗೂ ಇತರ ಶುಭ ಸಮಾರಂಭಗಳಿಗಾಗಿ ಉತ್ಕೃಷ್ಟ ಗುಣಮಟ್ಟದ ವಜ್ರಾಭರಣಗಳನ್ನು ಖರೀದಿಸಲು ಬಯಸುವಿರಾದರೆ ಮುಳಿಯ ಜ್ಯುವೆಲ್ಸ್‌ನ ಡೈಮಂಡ್‌ ಫೆಸ್ಟ್‌ ಒದಗಿಸಿರುವ ಅವಕಾಶವನ್ನು ಕಳೆದುಕೊಳ್ಳಬೇಡಿ ಎಂದು ಮಳಿಗೆಗೆ ಭೇಟಿ ನೀಡುತ್ತಿರುವ ಗ್ರಾಹಕರು ಪ್ರತಿಕ್ರಿಯಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top