ಈ ಕ್ರೀಡಾಕೂಟದಲ್ಲಿ ಮಂಗಳೂರು ವಿವಿಯನ್ನು ಪ್ರತಿನಿಧಿಸಿದ 75 ಕ್ರೀಡಾಪಟುಗಳಲ್ಲಿ 62 ಕ್ರೀಡಾಳುಗಳು ಆಳ್ವಾಸ್ ಸಂಸ್ಥೆಯ ವಿದ್ಯಾರ್ಥಿಗಳು
ಚೊಚ್ಚಲ ನೈರುತ್ಯ ವಲಯದ ಅಂತರ್ ವಿವಿ ಅಥ್ಲೇಟಿಕ್ಸ್ ಕ್ರೀಡಾಕೂಟದಲ್ಲಿ ಮಂಗಳೂರು ವಿವಿ ಚಾಂಪಿಯನ್
ಈ ಕ್ರೀಡಾಕೂಟದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಮೊದಲ 16 ಸ್ಥಾನಗಳನ್ನು ಪಡೆದ ಕ್ರೀಡಾಪಟುಗಳು ರಾಷ್ಟ್ರೀಯ ಮಟ್ಟದ ಅಂತರ್ ವಿವಿ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆಯುತ್ತಾರೆ.
ಮಂಗಳೂರು ವಿವಿ ಸಂಪಾದಿಸಿದ 23 ಪದಕಗಳ ಪೈಕಿ 21 ಪದಕಗಳು ಆಳ್ವಾಸ್ ವಿದ್ಯಾರ್ಥಿಗಳ ಕೊಡುಗೆ
ಆಳ್ವಾಸ್ ಸಂಸ್ಥೆಯ 62 ಕ್ರೀಡಾಪಟುಗಳು ಕ್ರೀಡಾ ದತ್ತು ಸ್ವೀಕಾರದಡಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು
ಮೂಡುಬಿದಿರೆ: ಚೆನ್ನೈನ ತಮಿಳುನಾಡು ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಶ್ವವಿದ್ಯಾನಿಲಯದಲ್ಲಿ ಜರುಗಿದ ನೈರುತ್ಯ ವಲಯದ ಅಂತರ್ ವಿಶ್ವವಿದ್ಯಾನಿಲಯದ ಪುರುಷರ ಮತ್ತು ಮಹಿಳೆಯರ ಅಥ್ಲೆಟಿಕ್ಸ್ ಚಾಂಪಿಯನ್‌ಶಿಫ್‌ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು 186 ಅಂಕಗಳೊಂದಿಗೆ ಎರಡು ವಿಭಾಗದಲ್ಲಿ ಚೊಚ್ಚಲ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿತು.
ಈ ಕ್ರೀಡಾಕೂಟದಲ್ಲಿ ದಕ್ಷಿಣ ವಲಯದ 176 ವಿವಿಗಳಿಂದ 3750 ಕ್ರೀಡಾಪಟುಗಳು ಭಾಗವಹಿಸಿದ್ದು, ಮಂಗಳೂರು ವಿಶ್ವಿದ್ಯಾನಿಲಯವು ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ 9 ಚಿನ್ನ, 8 ಬೆಳ್ಳಿ, 6 ಕಂಚಿನ ಪದಕಗಳೊಂದಿಗೆ ಒಟ್ಟು 23 ಪದಕಗಳೊಂದಿಗೆ ಅಗ್ರಸ್ಥಾನಿಯಾಯಿತು. ಪುರುಷರ ವಿಭಾಗದಲ್ಲಿ 6 ಚಿನ್ನ, 4 ಬೆಳ್ಳಿ, 3 ಕಂಚಿನ ಪದಕಗಳನ್ನು ಸಂಪಾದಿಸುವ ಮೂಲಕ 90 ಅಂಕಗಳೊಂದಿಗೆ ಸಮಗ್ರ ಪ್ರಶಸ್ತಿ ಪಡೆದುಕೊಂಡರೆ, ಮಹಿಳಾ ವಿಭಾಗದಲ್ಲಿ 3 ಚಿನ್ನ, 4 ಬೆಳ್ಳಿ, 3 ಕಂಚುಗಳೊಂದಿಗೆ 96 ಅಂಕಗಳನ್ನು ಗಳಿಸಿ ಪಾರಮ್ಯವನ್ನು ಮೆರೆಯಿತು.
ಕ್ರೀಡಾಕೂಟದಲ್ಲಿ ಚಿನ್ನದ ಪದಕ (09) ಪಡೆದ ಕ್ರೀಡಾಪಟುಗಳು:
ಮಂಗಳೂರು ವಿವಿ ಸಂಪಾದಿಸಿದ 09 ಚಿನ್ನದ ಪದಕಗಳಲ್ಲಿ 08 ಚಿನ್ನದ ಪದಕ ಆಳ್ವಾಸ್ ಕ್ರೀಡಾಪಟುಗಳ ಕೊಡುಗೆ
ಹರೀಶ್ 10,000ಮೀಟರ್ ಹಾಗೂ 5,000ಮೀಟರ್ ಓಟದಲ್ಲಿ ಪ್ರಥಮ, ಹರ್ದೀಪ್ 20ಕಿಲೋಮೀಟರ್ ನಡಿಗೆಯಲ್ಲಿ ಪ್ರಥಮ, ಉಪೇಂದ್ರ ಬಲಿಯನ್ ಹಾಫ್ ಮ್ಯಾರಥಾನ್‌ಲ್ಲಿ ಪ್ರಥಮ, ರಿತೇಶ್ 1500ಮೀಟರ್ ಓಟದಲ್ಲಿ ಪ್ರಥಮ, ಸ್ನೇಹ ಎಸ್ ಎಸ್ 100 ಮೀಟರ್ ಓಟದಲ್ಲಿ ಪ್ರಥಮ, ಕೆವಿನ್ ಅಶ್ವಿನಿ ಹೈ ಜಂಪ್‌ನಲ್ಲಿ ಪ್ರಥಮ, 4*100 ರಿಲೇಯಲ್ಲಿ ಸ್ನೇಹಾ, ನವಮಿ, ವರ್ಷಾ ಹಾಗೂ ಕೀರ್ತನಾ ತಂಡ ಪ್ರಥಮ, ಅಖಿಲೇಶ್ ಟ್ರಿಪಲ್ ಜಂಪ್‌ನಲ್ಲಿ ಪ್ರಥಮ
ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ (08) ಪಡೆದ ಕ್ರೀಡಾಪಟುಗಳು:
ಮಂಗಳೂರು ವಿವಿ ಸಂಪಾದಿಸಿದ 08 ಬೆಳ್ಳಿ ಪದಕಗಳು ಆಳ್ವಾಸ್ ಕ್ರೀಡಾಪಟುಗಳ ಕೊಡುಗೆ
ಸಚಿನ್ ಯಾದವ್ ಜವೆಲಿನ್ ಥ್ರೋ, ಅರ್ಮೊಲ್ ಹೈ ಜಂಪ್, ಸ್ಟಾö್ಯಲಿನ್ ಡೆಕಾಥ್ಲಾನ್, ನಿತಿನ್ ಮಲಿಕ್ ಹ್ಯಾಮರ್ ಥ್ರೋ, ಪೂನಂ 5000 ಮೀಟರ್ ಓಟ, ಅಂಜಲಿ 100 ಮೀಟರ್ ಹರ್ಡಲ್ಸ್, ಶೃತಿಲಕ್ಷ್ಮಿ ಲಾಂಗ್ ಜಂಪ್, ಸ್ನೇಹಲತಾ ಯಾದವ್ 1500 ಮೀಟರ್ ಓಟ
ಕ್ರೀಡಾಕೂಟದಲ್ಲಿ ಕಂಚಿನ ಪದಕ (06) ಪಡೆದ ಕ್ರೀಡಾಪಟುಗಳು:
ಮಂಗಳೂರು ವಿವಿ ಸಂಪಾದಿಸಿದ 06 ಕಂಚಿನ ಪದಕಗಳಲ್ಲಿ 05 ಪದಕಗಳು ಆಳ್ವಾಸ್ ಕ್ರೀಡಾಪಟುಗಳ ಕೊಡುಗೆ
ಆಶಿಶ್ ಕುಮಾರ್ ಶಾಟ್‌ಪುಟ್, ಉಜ್ವಲ್ ಡಿಸ್ಕ್ಸ್ ಥ್ರೋ, ನವೀನ್ ಎಸ್ ಪಾಟೀಲ್ ಹಾಫ್ ಮ್ಯಾರಥಾನ್, ಸ್ನೇಹಾ ಎಸ್ ಎಸ್ 200 ಮೀಟರ್ ಓಟ, ಅರ್ಪಿತ 800 ಮೀಟರ್ ಓಟ, ಪೂನಂ 10000 ಮೀಟರ್ ಓಟ
ಮಂಗಳೂರು ವಿವಿ ಪಾರಮ್ಯ:
ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ಸಮಗ್ರ ಚಾಂಪಿಯನ್ನ ಪಡೆದ ಮಂಗಳೂರು ವಿವಿ 186 ಅಂಕ ಪಡೆದರೆ, ರನ್ನರ್ ಆಪ್ ಸ್ಥಾನ ಪಡೆದ ಕೊಟ್ಟಾಯಂನ ಎಂ.ಜಿ ವಿವಿ 114 ಅಂಕ ಪಡೆಯಿತು. ಪುರುಷರ ವಿಭಾಗದಲ್ಲಿ ಮಂಗಳೂರು ವಿವಿ 90 ಅಂಕ ಪಡೆದರೆ, ರನ್ನರ್ ಆಪ್ ಸ್ಥಾನ ಪಡೆದ ಕೋಲ್ಹಾಪುರದ ಶಿವಾಜಿ ವಿವಿ 65 ಅಂಕ ಪಡೆಯಿತು. ಮಹಿಳಾ ವಿಭಾಗದಲ್ಲಿ ಮಂಗಳೂರು ವಿವಿ 96 ಅಂಕ ಪಡೆದರೆ, ರನ್ನರ್ ಆಪ್ ಸ್ಥಾನ ಪಡೆದ ಕೊಟ್ಟಾಯಂನ ಎಂ.ಜಿ ವಿವಿ 63 ಅಂಕ ಪಡೆಯಿತು.
ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ ಎಂ ಮೋಹನ್ ಆಳ್ವ ವಿಜೇತ ವಿದ್ಯಾರ್ಥಿಗಳ ತಂಡವನ್ನು ಅಭಿನಂದಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ