ಮಂಗಳ ಗಂಗೋತ್ರಿ: ಮಂಗಳೂರು ವಿವಿಯ ಕನ್ನಡ ಪಠ್ಯ ಪುಸ್ತಕಗಳು ಸಕಾಲದಲ್ಲಿ ಗುಣಮಟ್ಟದಿಂದ ಪ್ರಕಟಗೊಳ್ಳುತ್ತಿದ್ದು ಸ್ಥಳೀಯ ಭಾಷೆ, ಸಾಹಿತ್ಯ ಸಂಸ್ಕೃತಿಗೆ ಪ್ರಾಧಾನ್ಯ ನೀಡುತ್ತಿದೆ. ಉಡುಪಿ, ಕೊಡಗು ಮತ್ತು ಮಂಗಳೂರು ಜಿಲ್ಲೆಗಳ ವಿವಿಧ ಕ್ಷೇತ್ರಗಳ ತೆರೆಮರೆಯ ಸಾಧಕರ ಪರಿಚಯವನ್ನು ಮುಂದಿನ ದಿನಗಳಲ್ಲಿ ಪರಿಚಯಿಸುವಂತಾಗಬೇಕು ಎಂದು ಮಂಗಳೂರು ವಿವಿಯ ಕುಲಪತಿ ಪ್ರೊ. ಪಿ.ಎಸ್ ಯಡಪಡಿತ್ತಾಯ ಹೇಳಿದರು.
ಅವರು ಸೋಮವಾರ ಮಂಗಳೂರು ವಿವಿ ಪ್ರಸಾರಾಂಗ ಪ್ರಕಟಿಸಿದ ಎರಡನೇ ಚತುರ್ಮಾಸದ ಏಳು ಕನ್ನಡ ಭಾಷಾ ಪಠ್ಯಪುಸ್ತಕಗಳನ್ನು ಸಿಂಡಿಕೇಟ್ ಸಭಾಂಗಣದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು. ಸಾರ್ವಜನಿಕ ಸಂಸ್ಥೆಗಳಲ್ಲಿ ವ್ಯಕ್ತಿ ಪ್ರಯತ್ನಕ್ಕಿಂತಲೂ ತಂಡ ಪ್ರಯತ್ನಕ್ಕೆ ಯಶಸ್ಸು. ಪ್ರಸಾರಾಂಗ ಮತ್ತು ವಿವಿ ಕನ್ನಡ ಅಧ್ಯಯನ ಮಂಡಳಿಯ ತಂಡ ಪ್ರಯತ್ನದಿಂದ ಸಕಾಲದಲ್ಲಿ ಪಠ್ಯಗಳು ಬರುವಂತಾಗಿದೆ ಎಂದರು.
ಮಂಗಳೂರು ವಿವಿ ಕುಲಸಚಿವ ಪ್ರೊ.ಕಿಶೋರ್ ಕುಮಾರ್ ಸಿ.ಕೆ ಮಾತನಾಡಿ, ಶೈಕ್ಷಣಿಕ ಅಭಿವೃದ್ದಿಗೆ ಪೂರಕವಾದ ಪಠ್ಯಕ್ರಮದ ತಯಾರಿ ಆಗಬೇಕು. ಸ್ಥಳೀಯ ಮಹನೀಯರ ಕೊಡುಗೆಗಳನ್ನು ಪಠ್ಯದಲ್ಲಿ ಸೇರಿಸಿ ವಿದ್ಯಾರ್ಥಿಗಳಿಗೆ ಆದರ್ಶ ಮಾದರಿಗಳನ್ನು ತೋರಿಸಿಕೊಡಬೇಕು ಎಂದರು.
ಸಮಾರಂಭದಲ್ಲಿ ಪ್ರಸಾರಾಂಗದ ನಿರ್ದೇಶಕ ಪ್ರೊ.ಸೋಮಣ್ಣ, ಸಹಾಯಕ ನಿರ್ದೇಶಕ ಡಾ. ಧನಂಜಯ ಕುಂಬ್ಳೆ, ಪಠ್ಯ ಪುಸ್ತಕ ಕಾರ್ಯನಿರ್ವಾಹಕ ಸಂಪಾದಕ ಡಾ. ಮಾಧವ ಎಂ.ಕೆ, ನಾರಾಯಣ ಗುರು ಅಧ್ಯಯನ ಕೇಂದ್ರದ ಸಂಯೋಜಕ ಡಾ. ಗಣೇಶ್ ಅಮೀನ್ ಸಂಕಮಾರ್, ಪ್ರಸಾರಾಂಗದ ಭರತ್, ಜೆಸ್ಸಿ ಮೇರಿ ಡಿಸೋಜ್, ಲೋಲಾಕ್ಷ ಉಪಸ್ಥಿತರಿದ್ದರು.
ಮಂಗಳ ಪಠ್ಯಪುಸ್ತಕ ಮಾಲಿಕೆಯಡಿ ಪ್ರಕಟಿಸಲಾದ ದ್ವಿತೀಯ ಚತುರ್ಮಾಸದ ಕನ್ನಡ ಭಾಷಾ ಪಠ್ಯಪುಸ್ತಕ ಕಲಾಮಂಗಳ, ವಾಣಿಜ್ಯ ಮಂಗಳ, ಮುಕ್ತ ಮಂಗಳ, ನಿರ್ವಹಣಾ ಮಂಗಳ, ಗಣಕ ಮಂಗಳ, ಸೌಂದರ್ಯ ಮಂಗಳ, ವಿಜ್ಞಾನ ಮಂಗಳ ಎಂಬ ಕೃತಿಗಳನ್ನು ಕುಲಪತಿ ಬಿಡುಗಡೆಗೊಳಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ