ಗುಣಮಟ್ಟ ಆಕಸ್ಮಿಕವಲ್ಲ : ಪ್ರೊ.ಸೇತುರಾಮನ್

Upayuktha
0

 ಮಂಗಳೂರು ವಿವಿಯಲ್ಲಿ ಉನ್ನತ ಶಿಕ್ಷಣ ಕಾರ್ಯಾಗಾರ


ಮಂಗಳೂರು  : ಉನ್ನತ ಶಿಕ್ಷಣಕ್ಕೆ ಇಂದು ಭಾರತದಲ್ಲಿ ಬೇಡಿಕೆ ಹೆಚ್ಚುತ್ತಿದ್ದು ಅದಕ್ಕನುಗುಣವಾದ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಹಿಂದುಳಿದಿದೆ. ಗುಣಮಟ್ಟ ಆಕಸ್ಮಿಕವಲ್ಲ. ವ್ಯವಸ್ಥಿತ ಪರಿಶ್ರಮ, ಜ್ಞಾನಾಸಕ್ತಿ ಹಾಗೂ ಸೃಜನಶೀಲ ಕಲಿಕಾ ಪ್ರಯೋಗಗಳ ಮೂಲಕ ಗುಣಮಟ್ಟವನ್ನು ಖಾತರಿಗೊಳಿಸಬೇಕಾದ ಅಗತ್ಯವಿದೆ, ಎಂದು ತಮಿಳುನಾಡಿನ ಗಾಂಧಿ ಗ್ರಾಮ ರೂರಲ್ ಇನ್‌ಸ್ಟಿಟ್ಯೂಟ್‌ ಮೇಡ್ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಸಚಿವರಾದ ಪ್ರೊ.ಎಂ.ಜಿ ಸೇತುರಾಮನ್ ಹೇಳಿದರು.


ಅವರು ಶನಿವಾರ ಮಂಗಳೂರು ವಿಶ್ವವಿದ್ಯಾನಿಲಯದ ಐಕ್ಯೂಎಸಿ,  ಎಸೋಸಿಯೇಶನ್ ಆಫ್ ಬ್ರಿಟಿಷ್ ಸ್ಕಾಲರ್ಸ ಮಂಗಳೂರು ಇವರ ಸಹಯೋಗದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳ ಮೌಲ್ಯಮಾಪನ ಮತ್ತು ರ್ಯಾಂರಕಿಂಗ್ಎಂ ಬ ವಿಷಯದ ಕುರಿತ ವಿಶ್ವವಿದ್ಯಾನಿಲಯ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಇಂದು ಅಧ್ಯಾಪನ ಮತ್ತು ಕಲಿಕೆಯ ನಡುವಿನ ಅಂತರ ಹೆಚ್ಚುತ್ತಿದ್ದು ಈ ಅಂತರವನ್ನು ಕಡಿಮೆ ಮಾಡುವ ಉದ್ದೇಶದಿಂದ ನ್ಯಾಕ್ಮೌಲ್ಯ ಮಾಪನ ನಡೆಯುತ್ತಿದ್ದು ಜಾಗತಿಕ ಮಟ್ಟದ ಗುಣಮಟ್ಟದ ಉನ್ನತ ಶಿಕ್ಷಣ ಸಂಸ್ಥೆಗಳನ್ನು ರೂಪಿಸುವ ಅಗತ್ಯವಿದೆ ಎಂದರು.


ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್ ಯಡಪಡಿತ್ತಾಯ ಅವರು ರಾಷ್ಟ್ರೀಯ ಶಿಕ್ಷಣ ನೀತಿ 2020 ಶಿಕ್ಷಣ ಕ್ಷೇತ್ರದ ಆಮೂಲಾಗ್ರ ಬದಲಾವಣೆಗೆ ಅವಕಾಶ ಕಲ್ಪಿಸಿದ್ದು ಅದನ್ನು ಸರಿಯಾಗಿ ಅನುಷ್ಠಾನಗೊಳಿಸುವ ಇಚ್ಛಾಶಕ್ತಿ ತೋರಬೇಕಿದೆ. ತಂಡ ಪ್ರಯತ್ನದ ಮೂಲಕ ಶೈಕ್ಷಣಿಕ ಚಟುವಟಿಕೆಗಳನ್ನು ರೂಪಿಸುವ ಹಾಗೂ ವ್ಯವಸ್ಥಿತವಾಗಿ ದಾಖಲೀಕರಣ ಮಾಡುವ ಅಗತ್ಯವಿದೆ ಎಂದರು.


ಸಮಾರಂಭದಲ್ಲಿ ಮಂಗಳೂರಿನ ಅಸೋಸಿಯೇಷನ್ ಆಫ್ ಬ್ರಿಟಿಷ್‌ ಸ್ಕಾಲರ್ಸ ಇದರ ಕಾರ್ಯದರ್ಶಿ ಪ್ರೊ.ಕೆ.ಆರ್ ಚಂದ್ರಶೇಖರ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಮಂಗಳೂರು ವಿವಿಯ ಹಣಕಾಸು ಅಧಿಕಾರಿ ಪ್ರೊ.ವೈಸಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿವಿ ಐಕ್ಯೂಎಸಿಯ ನಿರ್ದೇಶಕ, ಕಾರ್ಯಕ್ರಮದ ಸಂಚಾಲಕ ಪ್ರೊ.ಮಂಜುನಾಥ ಪಟ್ಟಾಭಿ ಸ್ವಾಗತಿಸಿದರು. ಐಕ್ಯೂಎಸಿ ಸಹನಿರ್ದೇಶಕಿ ಪ್ರೊ.ಮೋನಿಕಾ ಸದಾನಂದ ಪ್ರಸ್ತಾವನೆಗೈದರು. ಪ್ರೊ.ವಿಶಾಲಾಕ್ಷಿ. ಬಿ ವಂದಿಸಿದರು. ಡಾ. ಪ್ರೀತಿಕೀರ್ತಿ ಡಿ'ಸೋಜ ನಿರೂಪಿಸಿದರು.


ಕಾರ್ಯಾಗಾರದಲ್ಲಿ ಮಂಗಳೂರು ವಿವಿಯ ಪ್ರಾಧ್ಯಾಪಕರು, ವಿವಿಯ ಸಂಯೋಜಿತ ಕಾಲೇಜುಗಳ ಪ್ರಾಂಶುಪಾಲರು, ಐಕ್ಯೂಎಸಿ ಪ್ರತಿನಿಧಿಗಳು ಭಾಗವಹಿಸಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


إرسال تعليق

0 تعليقات
إرسال تعليق (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top