ಮಂಗಳೂರು: ಬಿಷಪ್ ಕಾಂಪ್ಲೆಕ್ಸ್‌ನಲ್ಲಿ ಸುಪ್ರಭಾತ ಸ್ವೀಟ್ಸ್‌ ಶುಭಾರಂಭ

Chandrashekhara Kulamarva
0

ಮಂಗಳೂರು: ಮಂಗಳೂರಿನ ಪ್ರಖ್ಯಾತ ಹೋಳಿಗೆ ಉತ್ಪಾದನಾ ಸಂಸ್ಥೆ ಸುಪ್ರಭಾತ ಸ್ವೀಟ್ಸ್ ತನ್ನ ಮಳಿಗೆಯನ್ನು ನಗರದ ಹೃದಯಭಾಗದಲ್ಲಿ ಆರಂಭಿಸಿದೆ. ಮಂಗಳೂರಿನ ಕೊಡಿಯಾಲ್ ಬೈಲ್‌ನಲ್ಲಿ ಇರುವ ಬಿಷಪ್ ಕಾಂಪ್ಲೆಕ್ಸ್‌ನಲ್ಲಿ ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಉದ್ಘಾಟನೆಗೊಂಡಿದೆ.


ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಖಜಾಂಚಿ ಹಾಗೂ ಖ್ಯಾತ ನೋಟರಿ ವಕೀಲರಾದ ಎ. ಪದ್ಮರಾಜ್ ಮಳಿಗೆಯನ್ನು ಉದ್ಘಾಟಿಸಿದರು. 


ವಿಶ್ವ ವಿಖ್ಯಾತ ಜಾದೂಗಾರ ಶ್ರೀ ಕುದ್ರೋಳಿ ಗಣೇಶ್, ಹುಬ್ಬಳ್ಳಿಯ ಅನನ್ಯ ಫೀಡ್ಸ್‌ ಚೇರ್‌ಮ್ಯಾನ್ ದಿವಾಣ ಗೋವಿಂದ ಭಟ್, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು.


ಕಳೆದ 26 ವರ್ಷಗಳಿಂದ ಉತ್ತಮ ಗುಣಮಟ್ಟದ ಹೋಳಿಗೆ ಹಾಗೂ ಇತರ ಸಿಹಿ ತಿಂಡಿಗಳ ತಯಾರಿಯಲ್ಲಿ ಜನಮೆಚ್ಚುಗೆ ಗಳಿಸಿದ ಸುಪ್ರಭಾತ ಇದೀಗ ನೇರ ಗ್ರಾಹಕರ ಅನುಕೂಲಕ್ಕೆ ಈ ಮಳಿಗೆಯನ್ನು ಆರಂಭಿಸಿದೆ ಎಂದು ಸಂಸ್ಥೆಯ ಮಾಲಕರಾದ ರಾಜೇಶ್ವರ್ ಭಟ್ ಮತ್ತು ವಕೀಲರಾದ ಸುಕೇಶ್ ಕುಮಾರ್ ಶೆಟ್ಟಿ ಮಾಹಿತಿ ನೀಡಿದರು. ಕಲಾವಿದೆ ತೃಷಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
To Top