ಜಿಲ್ಲಾ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಸುಶೀಲ್ ನೊರೊನ್ಹಾ ನಿಧನ

Upayuktha
0

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಜನತಾದಳ (ಜಾ) ಇದರ ಪ್ರಧಾನ ಕಾರ್ಯದರ್ಶಿಯೂ, ಜಿಲ್ಲಾ ವಕ್ತಾರರೂ ಆಗಿದ್ದ ಉದ್ಯಮಿ ಸುಶೀಲ್ ನೊರೊನ್ಹಾ ಜ.13ರಂದು ತೀವ್ರ ಹೃದಯಾಘಾತದಿಂದ ನಿಧನರಾದರು.‌


ಅವರಿಗೆ 60 ವರ್ಷ ವಯಸ್ಸಾಗಿತ್ತು. ಸುಶೀಲ್ ನೊರೊನ್ಹಾ ಅವರು ಎಲೆಕ್ಟ್ರಿಕಲ್ ಸರಕುಗಳ ಪೂರೈಕೆ ಮಾಡುವ ಉದ್ಯಮವನ್ನು ನಡೆಸುತ್ತಿದ್ದರು.


ಸುಶೀಲ್ ಅವರು ಧಾರ್ಮಿಕ ಮುಖಂಡರಾಗಿಯೂ ಸಲ್ಲಿಸುತ್ತಿದ್ದರು. ಅವರು ಧರ್ಮ ಪ್ರಾಂತ್ಯದ ಪಾಲನಾ ಪರಿಷತ್ತಿನ ಕಾರ್ಯದರ್ಶಿಯಾಗಿ, ಕ್ರಿಸ್ಟೋಫರ್ ಅಸೋಸಿಯೇಷನ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.


ಮೃತರು ತಾಯಿ ಸ್ಟೆಲ್ಲಾ ನೊರೊನ್ಹಾ, ಪತ್ನಿ ಎಡ್ನಾ ನೊರೊನ್ಹಾ, ಮಗ ಏಂಜೆಲೊ ನೊರೊನ್ಹಾ ಮತ್ತು ಸಹೋದರ ವಕೀಲ ಎಂಪಿ ನೊರೊನ್ಹಾ ಅವರನ್ನು ಅಗಲಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top