ಕೆಎಸ್‌ಆರ್‌ಟಿಸಿಗೆ ಲಗ್ಗೆ ಇಟ್ಟ ಎಲೆಕ್ಟ್ರಿಕ್ ಬಸ್..!

Upayuktha
0

ರಸ್ತೆ ಗಿಳಿಯಿತು ಮೊದಲ ಬಾರಿಗೆ ಎಲೆಕ್ಟ್ರಿಕ್ ಬಸ್: ಬೆಂಗಳೂರು ಸೇರಿ ಈ ನಗರಗಳಲ್ಲಿ ಮಾಡಲಿದೆ ಸಂಚಾರ


ಬೆಂಗಳೂರು: ಇಂದಿನ ದಿನಗಳಲ್ಲಿ ನಾವು ಸಾಕಷ್ಟು ಎಲೆಕ್ಟ್ರಿಕ್ ಬೈಕು, ಕಾರು ಹಾಗೂ ಸ್ಕೂಟರ್ ಗಳನ್ನು ನೋಡುತ್ತಿದ್ದೇವೆ. ಅಲ್ಲದೆ ಇತ್ತೀಚೆಗಂತೂ ಪ್ರತೀ ದಿನ ಒಂದೊಂದು ಕಂಪೆನಿಯು ಹೊಸ ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡುತ್ತಿವೆ. ಸದ್ಯ ಬಸ್ಸುಗಳು ಕೂಡ ಎಲೆಕ್ಟ್ರಿಕ್ ಆಗಿ ಮಾರ್ಪಾಡಾಗುತ್ತಿವೆ. ಇನ್ನು ಮುಂದೆ ಡಿಸೇಲ್ ವಾಹನಗಳ ಪರ್ವ ಮುಗಿಯಿತು. ಇನ್ನೇನಿದ್ರೂ ಎಲ್ಲೆಲ್ಲೊ ಎಲೆಕ್ಟ್ರಿಕ್ ವಾಹನಗಳ ಹವಾ ಆರಂಭವಾಗಿದೆ.


ಇದರ ನಡುವೆ ಈಗಾಗಲೆ ದೇಶದ ಎಲ್ಲಾ ಸಾರಿಗೆ ನಿಗಮಗಳು ಎಲೆಕ್ಟ್ರಿಕ್ ಬಸ್‌ಗಳ ಮೊರೆ ಹೋಗಿವೆ. ನಮ್ಮಲ್ಲಿ ಈಗಾಗಲೆ ಬಿಎಂಟಿಸಿಗೆ ಎಂಟ್ರಿ ಕೊಟ್ಟಿರೋ ಎಲೆಕ್ಟ್ರಿಕ್ ಬಸ್ ಗಳು ಇದೀಗ ಕೆಎಸ್ಆರ್ಟಿಸಿಗೂ ಲಗ್ಗೆ ಇಟ್ಟಿವೆ. ಹೌದು, ಇಂದು ಕೆಎಸ್‌ಆರ್‌ಟಿಸಿಯ ಮೊದಲ ಎಲೆಕ್ಟ್ರಿಕ್ ಬಸ್‌ಗೆ ಪ್ರಾಯೋಗಿಕವಾಗಿ ಚಾಲನೆ ನೀಡಲಾಯಿತು. ಬೆಂಗಳೂರಿನಿಂದ ರಾಮನಗರಕ್ಕೆ ಈ ಬಸ್‌ ಸಂಚಾರ ಮಾಡುತ್ತವೆ.


ಹೊಸ ಬಸ್‌ಗೆ EV ಪವರ್ ಪ್ಲಸ್ ಎಂದು KSRTC ಹೆಸರಿಟ್ಟಿದೆ. ಓಲೆಕ್ಟಾ ಕಂಪನಿಯು ಈ ಬಸ್‌ನ್ನು ನಿಯೋಜನೆ‌ ಮಾಡಿದೆ. ದೇಶದ ಮೊದಲನೇ ಅಂತರ ನಗರ ಇಲೆಕ್ಟ್ರಿಕ್ ವಾಹನ ಇದಾಗಿದೆ. ಡಿಸೆಂಬರ್ 31ರಂದು ಈ ಬಸ್‌ನ್ನು ಸಾರಿಗೆ ಸಚಿವ ಶ್ರೀರಾಮುಲು ಲೋಕಾರ್ಪಣೆ‌ ಮಾಡಿದ್ದರು. ಇದೀಗ ಶಾಂತಿನಗರದ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯಿಂದ EV ಪವರ್ ಪ್ಲಸ್ ಹೊರಟಿದೆ. ಮೇಕ್ ಇನ್ ಇಂಡಿಯಾ ವಿದ್ಯುತ್ ಬಸ್ ಫೇಮ್-2 ಯೋಜನೆಯಡಿ 50 ಅಂತರ ನಗರ ಹವಾನಿಯಂತ್ರಿತ ಎಲೆಕ್ಟ್ರಿಕ್ ಬಸ್‌ಗಳನ್ನು ಕಾರ್ಯಚರಣೆಗೊಳಿಸಿದೆ.


ಕೆಎಸ್‌ಆರ್‌ಟಿಸಿ ಎಂಡಿ‌ ಅನ್ಬುಕುಮಾರ್ ಮಾತನಾಡಿ, ಕೆಎಸ್‌ಆರ್‌ಟಿಸಿ ಎಲೆಕ್ಟ್ರಿಕ್ ಬಸ್ ಪ್ರಾಯೋಗಿಕ ಸಂಚಾರ ಮಾಡುತ್ತದೆ. ಮೊದಲ ಬಸ್ ಇಂದು ಟ್ರಾಯಲ್ ರನ್ ಮಾಡುತ್ತದೆ. ಬೆಂಗಳೂರಿನಿಂದ ದಾವಣಗೆರೆವರೆಗೂ ಪ್ರಯೋಗಿಕವಾಗಿ ಸಂಚಾರ ಮಾಡುತ್ತೆ. ಸೋಮವಾರದಿಂದ ವಾಣಿಜ್ಯ ಸಂಚಾರ ಶುರುವಾಗುತ್ತೆ. ಬೆಂಗಳೂರು-ಮೈಸೂರು ಬಸ್ ಸಂಚಾರ ಆರಂಭವಾಗುತ್ತೆ. ಈ ತಿಂಗಳ‌‌ ಕೊನೆಯಲ್ಲಿ ಇನ್ನಷ್ಟು ಕಡೆ ಬಸ್ ಬಿಡಲಾಗುತ್ತೆ. ಮೈಸೂರು-ಬೆಂಗಳೂರಿಗೆ 300 ರೂಪಾಯಿ‌‌ ದರ‌ ನಿಗದಿ‌ ಮಾಡಿದ್ದೇವೆ. ಗುತ್ತಿಗೆ ಆಧಾರದಲ್ಲಿ ಎಲೆಕ್ಟ್ರಿಕ್ ಬಸ್ ಖರೀದಿ‌‌ ಮಾಡಲಾಗಿದೆ. ರಾಜ್ಯದ 6 ಕಡೆ ಚಾರ್ಜಿಂಗ್ ಪಾಯಿಂಟ್ ಮಾಡಲಾಗುತ್ತೆ ಎಂದರು.


ಎರಡೂವರೆ ಗಂಟೆ ಚಾರ್ಜ್ ಮಾಡಿದರೆ 300 ಕಿಮೀ ಕ್ರಮಿಸುವಷ್ಟು ಸಾಮರ್ಥ್ಯವನ್ನು ಈ ಬಸ್‌ ಹೊಂದಿದೆ. ಬಸ್ ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆಯಿಂದ ಕೂಡಿದೆ. ನೂತನ ತಂತ್ರಜ್ಞಾನವಾದ ರಿ ಜನರೇಷನ್ ಸಿಸ್ಟಮ್ ಅಳವಡಿಸಲಾಗಿದೆ. ಸಂಚರಿಸುವ ಹೊತ್ತಲ್ಲೇ ಅರ್ಧದಷ್ಟು ಬ್ಯಾಟರಿ ರೀಚಾರ್ಜ್ ಆಗುವ ರಿ ಜನರೇಟಿವ್ ಸಿಸ್ಟಮ್ ಇದಾಗಿದೆ. ಬಸ್ ಒಳಗೆ ಪ್ರಯಾಣಿಕರ ಅನುಕೂಲಕ್ಕೆ ಮೊಬೈಲ್ ಚಾರ್ಜಿಂಗ್ ಸ್ಪಾಟ್ಸ್ ಕೂಡ ಇದೆ. ಮನರಂಜನೆಗಾಗಿ ಬಸ್‌ನಲ್ಲಿ ಎರಡು ಟಿವಿ ಅಳವಡಿಕೆ ಮಾಡಲಾಗಿದೆ. ಬಸ್‌ನಲ್ಲಿ 43+2 ಸೀಟಿಂಗ್ ಕೆಪಾಸಿಟಿಯಿದೆ. ಬಸ್ ಸಂಪೂರ್ಣ ಸೆನ್ಸಾರ್ ಹಿಡಿತದಲ್ಲಿ ಇರಲಿದೆ. ಫ್ರಂಟ್ ಲಾಗ್ ಬ್ಯಾಕ್ ಲಾಗ್ ಕ್ಯಾಮೆರಾ ವ್ಯವಸ್ಥೆ ಇರುತ್ತೆ. ಡ್ರೈವರ್ ಎಂಡ್ ಸಂಪೂರ್ಣವಾಗಿ ಡಿಜಿಟಲೈಸ್ಡ್ ಸಿಸ್ಟಮ್ ಆಗಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top