ಮಂಡ್ಯದಲ್ಲಿ ಕೆಎಸ್‌ನ ಸಾಹಿತ್ಯ ಹಾಗೂ ಕಾವ್ಯ ಗಾಯನ ಪ್ರಶಸ್ತಿ ಪ್ರದಾನ ಸಮಾರಂಭ
ಮಂಡ್ಯ: ಪ್ರೇಮಕವಿ ಮಂಡ್ಯ ಜಿಲ್ಲೆಯ ಕೆಎಸ್ ನರಸಿಂಹಸ್ವಾಮಿರವರು ತಮ್ಮ ಸರಳತೆಯ ಸಾಹಿತ್ಯದಿಂದ ಜನಮನ ಸೂರೆಗೊಳ್ಳುವಲ್ಲಿ ಸಾಹಿತ್ಯ ಲೋಕದಲ್ಲಿ ವಿಶಿಷ್ಟ ಪರಂಪರೆಯನ್ನು ಹುಟ್ಟು ಹಾಕಿದ ಪ್ರೇಮಕವಿ ಎಂದು ಖ್ಯಾತ ಕವಿ ಬಿ.ಆರ್ ಲಕ್ಷ್ಮಣ್ ರಾವ್ ಹೇಳಿದರು.
ಸಂಸ್ಕೃತಿ ಇಲಾಖೆ ಕೆ.ಎಸ್ ನರಸಿಂಹಸ್ವಾಮಿ ಪ್ರತಿಷ್ಠಾನ ಟ್ರಸ್ಟ್ ಆಯೋಜಿಸಿದ್ದ ಕೆಎಸ್‌ನ ಸಾಹಿತ್ಯ ಹಾಗೂ ಕಾವ್ಯ ಗಾಯನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಪಂಡಿತ ಪಾಮರರಿಗೂ ಇಷ್ಟವಾಗುವ ರೀತಿಯಲ್ಲಿ ಸಾಹಿತ್ಯ ಪ್ರಪಂಚದಲ್ಲಿ ಅನೇಕ ಅಮೋಘ ಪ್ರೇಮಗೀತೆಗಳನ್ನು ನೀಡಿದ ಹೆಗ್ಗಳಿಕೆ ಕೆ ಎಸ್ ನರಸಿಂಹ ಸ್ವಾಮಿ ಅವರಿಗೆ ಅತ್ಯಂತ ಸರಳವಾಗಿ ಮನಮುಟ್ಟುವ ರೀತಿಯಲ್ಲಿ ಬದುಕಿನ ಸಾರವನ್ನು ಅರ್ಥವನ್ನು ಕೆ ಎಸ್ ನರಸಿಂಹಸ್ವಾಮಿ ರವರ ಪ್ರೇಮಗೀತೆಗಳು ಅನಾವರಣ ಮಾಡುತ್ತವೆ ಕೆ ಎಸ್ ನರಸಿಂಹಸ್ವಾಮಿ ರವರ ಗೀತೆಗಳು ಅಮೋಘವಾಗಿ ಜನಮನ ಮುಟ್ಟುವ ರೀತಿಯಲ್ಲಿ ರಾಗ ಸಂಯೋಜಿಸಿ ಹಾಡಿ ಅದನ್ನು ಅಜರಾಮರ ಗೊಳಿಸಿದ ಹೆಗ್ಗಳಿಕೆಗೆ ಖ್ಯಾತ ಗಾಯಕ ಮೈಸೂರು ಅನಂತಸ್ವಾಮಿ ಹಾಗೂ ಡಾಕ್ಟರ್ ಸಿ ಅಶ್ವಥ್ ರವರು ಕಾರಣರಾಗಿದ್ದಾರೆ. ಸುಗಮ ಸಂಗೀತದಲ್ಲಿ ಕೆ.ಎಸ್. ನರಸಿಂಹಸ್ವಾಮಿ ರವರ ಪ್ರೇಮಗೀತೆಗಳು ಎಲ್ಲರಲ್ಲೂ ಮಧುರ ಭಾವನೆಯನ್ನು ಉಂಟು ಮಾಡಿ ಬದುಕಿನ ಅರ್ಥವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರೇರೇಪಿಸುತ್ತವೆ ಜೀವನದ ಮೌಲ್ಯಗಳನ್ನು ಸಾರುವ ದಾಂಪತ್ಯ ಗಟ್ಟಿತನದ ಹೊಳಹುಗಳನ್ನು ನರಸಿಂಹಸ್ವಾಮಿ ರವರ ಪ್ರೇಮಗೀತೆಗಳು ಕಟ್ಟಿಕೊಡುತ್ತವೆ ಎಂದು ಬಿಆರ್ ಲಕ್ಷ್ಮಣ್ ರಾವ್ ಅಭಿಪ್ರಾಯಿಸಿದರು.
ಸಾಹಿತ್ಯದಲ್ಲಿ ಅನೇಕ ಗಂಭೀರತೆ ಕವನಗಳಿವೆ. ಅದನ್ನು ಅವರ ಮೊಮ್ಮಗಳು ಡಾಕ್ಟರ್ ಮೇಖಲಾ ಆಂಗ್ಲ ಭಾಷೆಗೆ ತುರ್ಜುಮೆಗೊಳಿಸಿ ಅದನ್ನು ಪ್ರಪಂಚದಾದ್ಯಂತ ಸಾಹಿತ್ಯ ಪ್ರಿಯರಿಗೆ ಸಂಸ್ಕೃತಿ ಪ್ರಿಯರಿಗೆ ಮುಟ್ಟಿಸುವ ಕೆಲಸವನ್ನು ಮಾಡಿಕೊಂಡು ಬರುತ್ತಿರುವುದು ಅತ್ಯಂತ ಮೆಚ್ಚುಗೆಯ ವಿಷಯವಾಗಿದೆ ಎಂದರು.
ಪ್ರೇಮ ಕಾವ್ಯ ದೇಶಭಕ್ತಿ ದಾಂಪತ್ಯದ ಮಧುರತೆ ಇತ್ಯಾದಿಗಳ ಕುರಿತು ಕೆಎಸ್ ನರಸಿಂಹಸ್ವಾಮಿ ರವರು ಅಮೋಘವಾಗಿ ಕವನಸನ್ ಕವನ ರಚನೆ ಮಾಡಿದ್ದು ಪ್ರಶಸ್ತಿಯ ಬೆನ್ನು ಬೀಳದೆ ನಿರಂತರವಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿದವರಿಗೆ ಪ್ರಶಸ್ತಿಯೇ ಅರಸಿಕೊಂಡು ಬಂತು ಎಂದು ಹೇಳಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ರಾಜ್ಯೋತ್ಸವ ಪ್ರಶಸ್ತಿ ಇತ್ಯಾದಿಗಳನ್ನು ಉದಾಹರಿಸಿದರು.
ಕೆ ಎಸ್ ನ ಅವರು ನನ್ನ ಅತ್ಯಂತ ಇಷ್ಟದ ಪ್ರೇರೇಪಣೆಯ ಕವಿ ಎಂದ ಅವರು ಅವರ ಕವನಗಳಿಂದ ಉತ್ತೇಜಿತರಾಗಿ ಅವರ ಪ್ರೇಮಕವಿಯ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದೇನೆ ಇದು ನನಗೆ ಅತ್ಯಂತ ಸಂತೋಷ ತರುವ ಮತ್ತು ಹೆಮ್ಮೆಪಡುವ ವಿಷಯವಾಗಿದೆ ಎಂದು ಲಕ್ಷ್ಮಣ್ ರಾವ್ ಹೇಳಿದರು.
ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತರಾಗಿ ಮಾತನಾಡಿದ ಖ್ಯಾತ ಹಿರಿಯ ಪತ್ರಕರ್ತ ಸರಜೂ ಕಾಟ್ಕರ್ ಮಾತನಾಡಿ, ಕವಿ ಹಿಂದಿನ ಕಾಲಮಾನದಲ್ಲಿ ಉತ್ತರ ಕರ್ನಾಟಕದಲ್ಲಿ ಕಾಲೇಜುಗಳಲ್ಲಿ ಯುವಕ ಯುವತಿಯರು, ಸಾಹಿತ್ಯ ಪ್ರಿಯರು ಮೈಸೂರು ಮಲ್ಲಿಗೆಯ ಕವನ ಸಂಕಲನವನ್ನು ಹಿಡಿದುಕೊಂಡು ಅಲೆದಾಡುವುದೇ ಒಂದು ಫ್ಯಾಶನ್ ಆಗಿತ್ತು. ಇದು ಬದುಕಿನ ಸಾಹಿತ್ಯದ ಪ್ರೀತಿಯನ್ನು ಅಭಿವ್ಯಕ್ತಿಸುತ್ತದೆ ಪ್ರೇಮಕವಿ ಕೆಎಸ್ ನರಸಿಂಹಸ್ವಾಮಿ ರವರ ಸಾಹಿತ್ಯ ಕೃಷಿ ಅಮೋಘವಾದದ್ದು ಬದುಕಿನ ಸಂಕೀರ್ಣತೆಯನ್ನು ಪ್ರೇಮ ಸಂಬಂಧಗಳನ್ನು, ಮಧುರತೆಯನ್ನು ತಮ್ಮ ಸರಳವಾದ ಕವನದಲ್ಲಿ ಅಭಿವ್ಯಕ್ತಿಸುವ ಮೂಲಕ ಸಾಹಿತ್ಯ ಪ್ರಪಂಚಕ್ಕೆ ಸುಗಮ ಸಂಗೀತ ಕಲಾ ಪ್ರಕಾರಗಳಿಗೆ ಅಮೋಘ ಕಾಣಿಕೆಯನ್ನು ಕೆ ಎಸ್ ನರಸಿಂಹಸ್ವಾಮಿ ರವರು ನೀಡಿದ್ದಾರೆ ಎಂದರು.
ರಾಜ್ಯ ಸರ್ಕಾರ ಕಲಾವಿದರಿಗೆ ಕಲಾ ಸಂಸ್ಥೆಗಳಿಗೆ ನೀಡುತ್ತಿರುವ ಅನುದಾನ ಯಾತಕ್ಕೂ ಸಾಲದು ನೆರೆಯ ಮಹಾರಾಷ್ಟ್ರ ಸರ್ಕಾರ ಕರಾ ಸಂಸ್ಕೃತಿಯ ಪ್ರಸಾರಕ್ಕಾಗಿ ಕಲಾವಿದರಿಗಾಗಿ ಪ್ರತಿ ವರ್ಷ 50 ಕೋಟಿ ರೂ ಅನುದಾನವನ್ನು ಮೀಸಲಾಗಿ ಇಟ್ಟಿದೆ. ಈ ದೆಸೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಸಂಸ್ಕೃತಿ ಇಲಾಖೆಯ ಮೂಲಕ ಕಲಾವಿದರಿಗೆ ಕಲಾ ಸಂಘ ಸಂಸ್ಥೆಗಳಿಗೆ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ನಿಟ್ಟಿನಲ್ಲಿ ಹೆಚ್ಚಿನ ಅನುದಾನ ಒದಗಿಸಬೇಕಾಗಿದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರುಣಾ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ ವಹಿಸಿದ್ದರು. ಇದೇ ಸಂದರ್ಭದಲ್ಲಿ ಖ್ಯಾತ ಹಿರಿಯ ಗಾಯಕಿ ಎಂ ಕೆ ಜೈ ಶ್ರೀ ಪ್ರಸಿದ್ಧ ಮಲೆನಾಡಿನ ಕೋಗಿಲೆ ಗರ್ತಿಕೆರೆ ರಾಘಣ್ಣ, ಖ್ಯಾತ ಮಹಿಳಾ ಸಾಹಿತಿ ಸವಿತಾ ನಾಗಭೂಷಣ್ ಹಾಗೂ ಖ್ಯಾತ ಪತ್ರಕರ್ತ ಕವಿ ಸರಜೂ ಕಾಟ್ಕರ್ ಅವರುಗಳಿಗೆ ಕೆಎಸ್‌ನ ಸಾಹಿತ್ಯ ಹಾಗೂ ಕಾವ್ಯ ಗಾಯನ ಶ್ರೀ ಪ್ರಶಸ್ತಿಯನ್ನು 25 ಸಾವಿರ ರೂ ನಗದು ಹಾಗೂ ಪ್ರಶಸ್ತಿ ಫಲಕದೊಂದಿಗೆ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಯಾಡಿದ ಕೆ.ಎಸ್. ನ ಪ್ರತಿಷ್ಠಾನದ ಕಾರ್ಯದರ್ಶಿ, ಡಾ. ಕಿಕ್ಕೇರಿ ಕೃಷ್ಣಮೂರ್ತಿ ಮಾತನಾಡಿ ಪ್ರೇಮಕವಿ ಕೆ.ಎಸ್. ನರಸಿಂಹಸ್ವಾಮಿ ರವರ ಹುಟ್ಟೂರು ಕಿಕ್ಕೇರಿಯಿಂದ ಬಂದ ನನಗೆ 53 ದೇಶಗಳಲ್ಲಿ ಮನ್ನಣೆ ಸಿಕ್ಕಿರುವುದು ಅಮೋಘ ಕವನ ಮತ್ತು ಮಂಡ್ಯ ಜಿಲ್ಲೆಯ ನರಸಿಂಹಸ್ವಾಮಿ ಎಂಬ ಕವಿ ಶಕ್ತಿಯಿಂದ ಎಂದು ಅಭಿಮಾನಿಸಿದರು.
ಕವಿ ಕೆ.ಎಸ್.ನ ಸಂಕಷ್ಟದಲ್ಲಿದ್ದಾಗ ಅವರನ್ನು ಮಂಡ್ಯಕ್ಕೆ ಆಹ್ವಾನಿಸಿ 1 ಲಕ್ಷ ರೂ ಗಳ ಆರ್ಥಿಕ ನೆರವು ನೀಡಿದ ಹೆಗ್ಗಳಿಕೆ ಪತ್ರಕರ್ತರು, ಜನತೆ ಮಾಡಿದ್ದಾರೆ. ಹೀಗಾಗಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮಂಡ್ಯದಲ್ಲೇ ಆಯೋಜಿಸಿದ್ದಕ್ಕೆ ಹೆಮ್ಮೆಯಾಗುತ್ತಿದೆ ಎಂದರು.
ಪ್ರಶಸ್ತಿ ಪ್ರದಾನ ಸಮಾರಂಭದ ಅಂಗವಾಗಿ ಖ್ಯಾತ ಗಾಯಕಿ ಜೋಗಿ ಸುನಿತಾ, ಕಲಾಶ್ರೀ ವಿದ್ಯಾಶಂಕರ್, ಡೇವಿಡ್ ಮುಂತಾದವರಿಂದ ಕೆ.ಎಸ್.ನ ಗೀತ ಗಾಯನ ನಡೆದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಕಾರ್ಯಕ್ರಮ ಆರಂಭಕ್ಕೆ ಮುನ್ನ ಡಾ. ಕಿಕ್ಕೇರಿ ಕೃಷ್ಣಮೂರ್ತಿ ತಂಡ ಗಾಯನ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದರು. ವೇದಿಕೆಯಲ್ಲಿ ಖ್ಯಾತ ಗಾಯಕ ನಗರ ಶ್ರೀನಿವಾಸ ಉಡುಪ, ಪ್ರತಿಷ್ಠಾನದ ಕಾರ್ಯಕಾರಿ ಸಮಿತಿ ಸದಸ್ಯ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉದಯಕುಮಾರ್ ಎಲ್ಲರನ್ನು ಸ್ವಾಗತಿಸಿದರು.
ವಿವಿಧ ಶಾಲೆಯ ಮಕ್ಕಳು, ಗಾಯಕರು ನಾಡಗೀತೆ ಹಾಡಿದರು. ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ಸಾಹಿತ್ಯ ಅಭಿಮಾನಿಗಳು, ಸಾಂಸ್ಕೃತಿಕ ಪ್ರಿಯರು ಭಾಗವಹಿಸಿ ಕಾರ್ಯಕ್ರಮವನ್ನು ಕಳೆಗಟ್ಟಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ