ರಿಷಬ್ ಶೆಟ್ಟಿ ನಟನೆ ಮತ್ತು ನಿರ್ದೇಶನದ ಕಾಂತಾರ ಸಿನಿಮಾ ಕನ್ನಡ ನೆಲದಲ್ಲಿ ಮಾತ್ರವಲ್ಲದೇ, ದೇಶಾದ್ಯಂತ ಸದ್ದು ಮಾಡಿತ್ತು. ಬೇರೆ ಬೇರೆ ಭಾಷೆಗಳ ಚಲನಚಿತ್ರ ದಿಗ್ಗಜರಿಂದ ಹೊಗಳಿಕೆಯ ಮಹಾಪೂರವೇ ಹರಿದು ಬಂದಿತ್ತು. ರಿಷಭ್ ಶೆಟ್ಟಿ ನಟನೆಯಂತೂ ಮೈನವಿರೇಳಿಸಿತ್ತು. ತುಳುನಾಡಿನ ದೈವಾರಾಧನೆ, ಸಂಸ್ಕೃತಿ, ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಘರ್ಷ ತೆರೆಯ ಮೇಲೆ ಅದ್ಭುತವಾಗಿ ಮೂಡಿ ಬಂದಿದೆ. ವಿಶೇಷವೆಂದರೆ ಇಂದಿಗೂ ಕೂಡ ಕಾಂತಾರ ಸಿನೆಮಾದ ಹವಾ ಕಡಿಮೆ ಆಗಿಲ್ಲ.
ಇದೀಗ ಕಾಂತಾರ ಸಿನಿಮಾ ಹೊಸ ಮೈಲಿಗಲ್ಲು ಸ್ಥಾಪಿಸುವತ್ತ ಹೆಜ್ಜೆ ಹಾಕುತ್ತಿದೆ. ಆಸ್ಕರ್ ಪ್ರಶಸ್ತಿ ರೇಸ್ ಗೆ ಕಾಂತಾರ ಭರ್ಜರಿ ಎಂಟ್ರಿ ಕೊಟ್ಟಿದೆ. ಎಂದರೆ 'ಅತ್ಯುತ್ತಮ ಚಿತ್ರ' ಮತ್ತು 'ಅತ್ಯುತ್ತಮ ನಟ' ವಿಭಾಗದಲ್ಲಿ 'ಕಾಂತಾರ' ಅರ್ಹತಾ ಸುತ್ತನ್ನು ಪಾಸ್ ಮಾಡಿದೆ. ಆಸ್ಕರ್ ಸದಸ್ಯರು ಮತ ಚಲಾಯಿಸಿದರೆ ಮುಖ್ಯ ನಾಮಿನೇಷನ್ ಗೆ ಪ್ರವೇಶ ಪಡೆಯೋದಂತೂ ಪಕ್ಕಾ. ಕಾಂತಾರ ಸೇರಿದಂತೆ ಒಟ್ಟು 301 ಚಲನಚಿತ್ರಗಳು ಅರ್ಹತಾ ಸುತ್ತನ್ನು ಪಾಸ್ ಮಾಡಿವೆ.
ಈ ಕುರಿತಂತೆ ಹೊಂಬಾಳೆ ಫಿಲ್ಮ್ಸ್ ಟ್ವೀಟ್ ಮಾಡಿ ಖುಷಿ ಹಂಚಿಕೊಂಡಿದೆ. 'ಕಾಂತಾರ ಸಿನಿಮಾ 2 ಆಸ್ಕರ್ ಅರ್ಹತೆ ಪಡೆದಿರುವ ವಿಚಾರ ತಿಳಿಸಲು ಸಂತಸವಾಗುತ್ತಿದೆ. ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದ' ಎಂದು ಟ್ವೀಟ್ ಮಾಡಿದ್ದಾರೆ. ಇತ್ತೀಚೆಗಷ್ಟೇ ಕಾಂತಾರ ಯಶಸ್ವಿಯಾಗಿ 100 ದಿನಗಳನ್ನು ಪೂರೈಸಿತ್ತು.
ಕಿರುತೆರೆಯಲ್ಲಿ ಕಾಂತಾರ
ಹಿರಿತೆರೆಯಲ್ಲಿ ಅಬ್ಬರಿಸಿದ್ದ ಕಾಂತಾರ ಕಿರುತೆರೆಯಲ್ಲಿ ಆರ್ಭಟಿಸಲು ಸಿದ್ಧವಾಗಿದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಟಿವಿಯಲ್ಲಿ ಕಾಂತಾರ ಸ್ವಲ್ಪ ಸಿನಿಮಾ ಸುವರ್ಣ ಚಾನೆಲ್ ನಲ್ಲಿ ಜ.15 ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ.
ಸಿನೆಮಾದಲ್ಲಿ ರಿಷಬ್ ಶೆಟ್ಟಿ ಅವರಿಗೆ ಜೋಡಿಯಾಗಿ ಸಪ್ತಮಿ ಗೌಡ ನಟಿಸಿದ್ದಾರೆ. ಇನ್ನುಳಿದ ಪ್ರಮುಖ ಪಾತ್ರಗಳಲ್ಲಿ ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಕಿಶೋರ್ ಮುಂತಾದವರು ಅಭಿನಯಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ