ವಿವಿ ಕನ್ನಡ ವಿಭಾಗದಲ್ಲಿ 'ಕಾಡುವ ತೇಜಸ್ವಿ' ಕಾರ್ಯಕ್ರಮ

Upayuktha
0


ಮಂಗಳಗಂಗೋತ್ರಿ:  ತನ್ನ ಸುತ್ತ ಆವರಿಸಿಕೊಂಡಿರುವ ಜಾತಿ, ಮತ, ಮನೆತನಗಳ, ಅಧಿಕಾರ ಸಂಪತ್ತಿನ ಅಹಂಕಾರಗಳನ್ನು ಕಳಚಿಕೊಳ್ಳದೆ ಯಾರೂ ಸೃಜನಶೀಲ ಬರಹಗಾರನಾಗಲಾರ. ಕನ್ನಡದ ಖ್ಯಾತ ಲೇಖಕರಾದ ಪೂರ್ಣಚಂದ್ರ ತೇಜಸ್ವಿ ಅವರು ಸಾಮಾನ್ಯನಂತೆ ಬದುಕಿ ತನ್ನ ಪರಿಸರದ ಶ್ರೀಸಾಮಾನ್ಯನ ಧ್ವನಿಯಾದವರು ಎಂದು ಮಂಗಳೂರು ವಿವಿ ಕನ್ನಡ ವಿಭಾಗದ ಉಪನ್ಯಾಸಕ ಡಾ. ಯಶುಕುಮಾರ್ ಹೇಳಿದರು.


ಅವರು ಬುಧವಾರ ಮಂಗಳೂರು ವಿವಿಯ ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ವತಿಯಿಂದ ನಡೆದ ಎಸ್ ವಿಪಿ ಕನ್ನಡ ಕಲರವ ಸರಣಿಯಲ್ಲಿ 'ಕಾಡುವ ತೇಜಸ್ವಿ' ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಪ್ರೊ.ಸೋಮಣ್ಣ ಹೊಂಗಳ್ಳಿ ಮಾತನಾಡಿ,  ತೇಜಸ್ವಿಯವರು ಪ್ರಯೋಗಶೀಲ ಮನಸಿನ ಬರಹಗಾರರು. ಹಾಸ್ಯಪ್ರವೃತ್ತಿಯನ್ನು ಮೈಗೂಡಿಸಿಕೊಂಡಿದ್ದರೂ ಬದುಕಿನ ಸೂಕ್ಷ್ಮಗಳನ್ನು, ಪರಿಸರ ಪ್ರೀತಿಯನ್ನು ಹೊಂದಿದ್ದರು ಎಂದರು. ಕಾರ್ಯಕ್ರಮದ ಸಂಚಾಲಕ ಡಾ.ಧನಂಜಯ ಕುಂಬ್ಳೆ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿಗಳಿಂದ ತೇಜಸ್ವಿ ಕೃತಿಗಳ ವಿಮರ್ಶೆ, ಕೃತಿಗಳ ಆಯ್ದ ಭಾಗಗಳ ವಾಚನ, ಸ್ವರಚಿತ ಕವನ ವಾಚನ ನಡೆಯಿತು. ವಿದ್ಯಾರ್ಥಿ ಶಂಕರ್ ನಿರೂಪಿಸಿದರು. ಕಾವ್ಯ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter





Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top