ಆತ್ಮಶೋಧನೆ ನಿರಂತರವಾಗಿರಬೇಕು–ಡಾ. ಔದ್ರಾಮ

Upayuktha
0


ಉಜಿರೆ : ವಿದ್ಯಾರ್ಥಿಗಳು ಭವಿಷ್ಯದಲ್ಲಿ ಏನಾಗಬೇಕು ಎಂಬುದರ ಕುರಿತು ನಿತ್ಯವೂ ಆತ್ಮಶೋಧನೆ ಮಾಡಿಕೊಳ್ಳಬೇಕು, ಬೇರೆಯವರ ಜೀವನದ ಆಗುಹೋಗಳ ಬದಲಾಗಿ ನಮ್ಮ ಜೀವನವನ್ನು ವಿಮರ್ಶಿಸಿಕೊಳ್ಳಬೇಕೆಂದು ಧಾರವಾಡ ನೀರಾವರಿ ನಿಗಮದ ಮುಖ್ಯ ಆಡಳಿತಾಧಿಕಾರಿಯಾದ ಡಾ.ಔದ್ರಾಮ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.


ಉಜಿರೆ ಶ್ರೀ.ಧ. ಮಂ.ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ನಡೆಯುವ‘ಎಸ್.ಡಿ.ಎಂ. ನೆನಪಿನಂಗಳ’ - ಹಿರಿಯ ವಿದ್ಯಾರ್ಥಿಗಳ ಸಂವಾದ ಸರಣಿಯ ಎರಡನೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 


ಉತ್ತಮ ಪರಿಸರ, ಒಳ್ಳೆಯ ಸೌಲಭ್ಯ, ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವಈ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದವರೇ ಭಾಗ್ಯವಂತರು ಎಂದು ನೆನೆದರು. ಜೀವನದಲ್ಲಿ ಸರಸ್ವತಿಯನ್ನು ನಂಬಿ ಹೆಜ್ಜೆ ಹಾಕಬೇಕು, ಗುರಿ ಸಾಧನೆಯೆಡೆಗೆಇಡುವ ಪ್ರತಿ ಹೆಜ್ಜೆಯಲ್ಲಿಯೂ ಪ್ರಾಮಾಣಿಕ ಪ್ರಯತ್ನ ನಮ್ಮದಾಗಬೇಕುಎಂದರು. ವಿದ್ಯಾರ್ಥಿ ಜೀವನದುದ್ದಕ್ಕೂ ಮಾರ್ಗದರ್ಶಕರಂತೆ ನಮ್ಮ ತಂದೆತಾಯರಿರತ್ತಾರೆ, ಅವರಿಂದ ಪ್ರತಿ ಹಂತದಲ್ಲಿಯೂ ಕಲಿಯುವ ಮನೋಭಾವ ನಮ್ಮದಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.


ಜೀವನದಲ್ಲಿ ಅಸಾಧ್ಯ ಎನ್ನುವುದು ಯಾವುದೂ ಇಲ್ಲ, ಸಮಯದ ನಿರ್ವಹಣೆಯನ್ನುಕಲಿಯುವುದು ಬಹಳ ಮುಖ್ಯಎಂದರು. ವಿದ್ಯಾರ್ಥಿಯಾಗಿದ್ದಾಗ ಎಂಜಾಯ್‍ ಎನ್ನುವ ಪದವನ್ನು ಕೇವಲ ಖುಷಿ, ಸಂತೋಷಕ್ಕೆ ಮೀಸಲಿಡಬೇಕೆ ಹೊರತು ಸುಖದ ಜೀವನಕ್ಕಲ್ಲ ಎಂದರು. ಸ್ಪರ್ಧಾತ್ಮಕ ಪರೀಕ್ಷೆ ಪರೀಕ್ಷೆಯಕುರಿತಾದ ಮಾಹಿತಿಗಳನ್ನೂ ಹಂಚಿಕೊಂಡರು. 


ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಹಾಗೂ ವಕೀಲರಾದ ವಿ.ಕೆ ಧನಂಜಯ್‍ರಾವ್‍ ಮಾತನಾಡಿ, ಸಂಘದ ವತಿಯಿಂದ ನೀಡುವ ವಿದ್ಯಾರ್ಥಿ ಪ್ರೋತ್ಸಾಹ ನಿಧಿಯ ಕುರಿತು ಮಾಹಿತಿ ಹಂಚಿಕೊಂಡರು. ಭವಿಷ್ಯದಲ್ಲಿ ನೀವು ಈ ಕೆಲಸದ ಭಾಗವಾಗಬೇಕು ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.


ಈ ಬಾರಿ ವಿದ್ಯಾರ್ಥಿ ಪ್ರೋತ್ಸಾಹ ನಿಧಿಯನ್ನುಡಾ.ಔದ್ರಾಮದ್ವೀತಿಯ ಬಿ.ಎ ವಿದ್ಯಾರ್ಥಿ ಖಾಸೀಂಗೆ ಹಸ್ತಾಂತರಿಸಿದರು.ಉಜಿರೆಉದ್ಯಮಿ ಮತ್ತು ಅತಿಥಿಗಳ ಸಹೋದರರೂ ಆದ ಅಬೂಬಕ್ಕರ್ ಡಿ. ಔದ್ರಾಮರನ್ನು ಪರಿಚಯಿಸಿದರು. ಕಾರ್ಯಕ್ರಮವನ್ನು ಡಾ.ಶ್ರೀಧರ್ ಭಟ್ ನಿರೂಪಿಸಿ, ಹಳೆವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಗುರುನಾಥ್ ಪ್ರಭು ಸ್ವಾಗತಿಸಿದರು.ಎಸ್.ಡಿ.ಎಂ.ಕಾಲೇಜಿನ ಪ್ರಾಂಶುಪಾಲ ಡಾ.ಎಜಯಕುಮಾರ್ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಸಂಯೋಜಕ ಶೈಲೇಶ್ ಮತ್ತಿತರರು ಹಾಜರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top