ಉಡುಪಿ: "ನಮ್ಮ ವಿದ್ಯಾರ್ಥಿಗಳಿಗೆ ಇಂದು ನೀಡುವ ನಾಲ್ಕು ಗೇೂಡೆಯೊಳಗಿನ ಸಂಪ್ರದಾಯಿಕ ಶಿಕ್ಷಣ ವಿದ್ಯಾರ್ಥಿಗಳ ವ್ಯಕ್ತಿತ್ವದ ಪರಿಪೂರ್ಣತೆಗೆ ಸಾಕಾಗುವುದಿಲ್ಲ. ಬದುಕಿನ ಸವಾಲುಗಳನ್ನು ಅರಿಯುವ ವಾಸ್ತವಿಕತೆಯನ್ನು ತಿಳಿಸುವ ಶಿಕ್ಷಣ ಇಂದಿನ ಅಗತ್ಯತೆ ಇಂತಹ ಬದುಕಿನ ಶಿಕ್ಷಣ ರಾಷ್ಟ್ರೀಯ ಸೇವಾ ಯೇೂಜನ ಕಾರ್ಯಕ್ರಮದಲ್ಲಿ ಸಿಗಲು ಸಾಧ್ಯ. ಹಾಗಾಗಿ ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯಲ್ಲಿ ಕೂಡ ಈ ಯೇೂಜನಾ ಕಾರ್ಯಕ್ರಮಗಳನ್ನು ಪಠ್ಯದಷ್ಟೇ ಮಹತ್ವದ ಶಿಕ್ಷಣ ಎಂದು ಉಲ್ಲೇಖಿಸಲಾಗಿದೆ." ಎಂದು ಅಂಕಣಕಾರ ಪ್ರೊ.ಕೊಕ್ಕರ್ಣೆ ಸುರೇಂದ್ರ ನಾಥ ಶೆಟ್ಟಿ ಅಭಿಪ್ರಾಯಿಸಿದರು.
ಅವರು ಉಡುಪಿ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದ ಈ ಶೈಕ್ಷಣಿಕ ವರ್ಷದ ರಾಷ್ಟ್ರೀಯ ಸೇವಾ ಯೇೂಜನಾ ಘಟಕದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ" ಇಂದಿನ ಸ್ಫರ್ಧಾತ್ಮಕ ಜಗತ್ತನ್ನು ಸಮಥ೯ವಾಗಿ ಎದುರಿಸಲು ನಾವು ಪಡೆಯು ಅಂಕಗಳೊಂದೆ ಸಾಕಾಗುವುದಿಲ್ಲ. ಬದಲಾಗಿ ಇಚ್ಛಾ ಶಕ್ತಿ ಕೌಶಲಾ ಶಕ್ತಿ ಸಂಹನ ಶಕ್ತಿ ವಿದ್ಯಾರ್ಥಿ ದಿಸೆಯಲ್ಲಿಯೇ ಮೈ ಗೂಡಿಸಿಕೊಳ್ಳ ಬೇಕಾದ ಅನಿವಾರ್ಯತೆ ಇದೆ ಎಂದು ಪ್ರೊ.ಶೆಟ್ಟಿ ಅಭಿಪ್ರಾಯಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲ ಪ್ರೊ.ರಘುನಾಥ್ ಕೆ.ವಹಿಸಿದ್ದರು. ಕಾನೂನು ಕೇೂಶದ ನಿರ್ದೇಶಕಿ ಡಾ. ನಿರ್ಮಲಾ ಕುಮಾರಿ ರಾ.ಸೇ.ಯೇೂ ಘಟಕದ ಅಧಿಕಾರಿ ಡಾ. ನವೀನ್ಚಂದ್ರ ಸಿ.ಬಿ.ವೇದಿಕೆಯಲ್ಲಿ ಉಪಸ್ಥಿತರಿದ್ದರು.ರಾ.ಸೇ.ಯೇೂ ಪ್ರತಿನಿಧಿಗಳಾದ ಮಮತಾ ಕೆ.ಕೆ. ತೃತೀಯ ಲಾ ಸ್ವಾಗತಿಸಿ ಪ್ರಜಾಪತಿ ಗೌತಮಿ ಕೆ.ಎಸ್. ಅತಿಥಿ ಪರಿಚಯಿಸಿದರು. ನಮ್ರತಾ ಉಮೇಶ್ ನಾಯ್ಕ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ