ಯುವ ಜನತೆಗೆ ಗಾಂಧೀಜಿ ಸಂದೇಶ ಉಪನ್ಯಾಸ ಕಾರ್ಯಕ್ರಮ

Upayuktha
0

ಗಾಂಧೀಜಿಯವರ ಮಾತೃ ಭಕ್ತಿಯನ್ನು ಜೀವನದಲ್ಲಿ  ಎಲ್ಲರಿಗೂ ಅಳವಡಿಸಿಕೊಳ್ಳಬೇಕು.


ಕೋಣನಕುಂಟೆ : ಕರ್ನಾಟಕ ಸರ್ವೋದಯ  ಮಂಡಲ ಹಾಗು ಕೋಣನಕುಂಟೆಯ ಶ್ರೀನಿಧಿ ಪಬ್ಲಿಕ್ ಶಾಲೆ ಸಹಯೋಗದಲ್ಲಿ ಯುವ ಜನತೆಗೆ ಗಾಂಧೀಜಿ ಸಂದೇಶ ಎಂಬ ವಿಷಯದ ಬಗ್ಗೆ ನಡೆದ ಉಪನ್ಯಾಸ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನವಾಯಿತು.


ಯುವಕರಿಂದ ಯುವಕರಿಗಾಗಿ ಎಂಬ ಧೇಯದೊಂದಿಗೆ ಕಾರ್ಯಕ್ರಮವನ್ನು ರೂಪಿಸಲಾಯಿತು. ಬಸವನ ಗುಡಿ ಆರ್.ವಿ. ರಸ್ತೆಯ ವಿಜಯ ಕಾಲೇಜಿನ ಅಂತಿಮ ವರ್ಷದ ಜೈವಿಕ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿನಿಯರಾದ ಕು .ಭೂಮಿ ಪ್ರಿಯ ಅವರು ಗಾಂಧೀಜಿಯವರ ಜೀವನ ಮತ್ತು ಸಂದೇಶ ಎಂಬ ವಿಚಾರವಾಗಿ ಉಪನ್ಯಾಸ ನೀಡಿದರೆ ಮತೊಬ್ಬ ವಿದ್ಯಾರ್ಥಿನಿ   ಕು ಮೇಘನಾ ಅವರು ಗಾಂಧೀಜಿ ಯವರು ನೀಡಿದ ಜೀವನ ಮೌಲ್ಯಗಳ ಬಗ್ಗೆ ಉಪನ್ಯಾಸ ನೀಡಿದರು.


ಕಿರುಚಿತ್ರ ಚಿತ್ರ ನಿರ್ದೇಶಕ ಬಿಎಸ್ ವೆಂಕಟೇಶರಾವ್ ಉದ್ಘಾಟಿಸಿದರು ,ಅತಿಥಿಗಳಾಗಿ ವಿಜಯ ಕಾಲೇಜಿನ   ಜೈವಿಕ ತಂತ್ರಜ್ಞಾನದ ಸಹಾಯಕ ಪ್ರಾಧ್ಯಾಪಕ ಭರತ್ ಎಂ. ಎ. ಅವರು ಗಾಂಧೀಜಿಯವರ ತತ್ವಗಳನ್ನು ಹೇಗೆ ನಾವು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.


ಕರ್ನಾಟಕ ಸರ್ವೋದಯ ಮಂಡಲದ ಕಾರ್ಯದರ್ಶಿ ಡಾ.ಯ.ಚಿ.ದೊಡ್ಡಯ್ಯ  ಪ್ರಾಸ್ತಾವಿಕ ನುಡಿಗಳ ನಾಡಿದರು ,ಕೋಶಾಧಿಕಾರಿ ವಿರೂಪಾಕ್ಷ  ಹುಡೇದ್  ವೇದಿಕೆಯಲ್ಲಿದ್ದರು .ಕರ್ನಾಟಕ ಸರ್ವೋದಯ ಮಂಡಲ ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ಡಾ|| ಗುರುರಾಜ್ ಪೋಶೆಟ್ಟಿಹಳ್ಳಿ ಅವರು ವಿದ್ಯಾರ್ಥಿಗಳಿಗೆ ಕಿರು ರಸ ಪ್ರಶ್ನೆ ಕಾರ್ಯಕ್ರಮವನ್ನು ನಡೆಸಿದರು. ಶಾಲೆಯ ಪ್ರಾಂಶುಪಾಲೆ ದೀಪಾ ಮೆನನ್ ಅಧ್ಯಕ್ಷತೆ ವಹಿಸಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top